ಬೆಳಗಾವಿಯ ಮತ್ತೊಂದು ಕಚೇರಿ ಬೆಂಗಳೂರಿಗೆ ಶಿಫ್ಟ್... ಮತ್ತೆ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯದ ಆರೋಪ...!

news18
Updated:August 18, 2018, 3:02 PM IST
ಬೆಳಗಾವಿಯ ಮತ್ತೊಂದು ಕಚೇರಿ ಬೆಂಗಳೂರಿಗೆ ಶಿಫ್ಟ್... ಮತ್ತೆ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯದ ಆರೋಪ...!
  • Advertorial
  • Last Updated: August 18, 2018, 3:02 PM IST
  • Share this:
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ ( ಆಗಸ್ಟ್ 18) :  ಉತ್ತರ ಕರ್ನಾಟಕ ಅಭಿವೃದ್ದಿ ಮಾಡಿ ಜೊತೆಗೆ ವಿವಿಧ ಇಲಾಖೆಗಳನ್ನ ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಗೊಳಿಸಿ ಎಂದು ಸ್ವಾಮೀಜಿಗಳು ಹಾಗೂ ಹೋರಾಟಗಾರರು ಬೀದಿಗಿಳಿದಿದ್ದರು. ಇದಕ್ಕೆ ಸಿಎಂ ಕುಮಾರಸ್ವಾಮಿ ಸ್ಪಂದಿಸಿದ್ದರು. ಆದರೆ ಸಿಎಂ ಸ್ಪಂದಿಸಿದ ಕೆಲವೇ ದಿನಗಳಲ್ಲಿ ಸಚಿವ ಎಚ್.ಡಿ ರೇವಣ್ಣ ತಮ್ಮ ಪ್ರಭಾವ ಬೆಳೆಸಿ ಕೆಶಿಪ್ ಕಚೇರಿಯನ್ನ ಹುದ್ದೆಗಳ ಸಮೇತ ಹಾಸನಕ್ಕೆ ಶಿಪ್ಟ್ ಮಾಡಿ ಅನ್ಯಾಯ ಮಾಡಿದ್ದರು ಇದು ಸಾಲಲ್ಲಾ ಅಂತಾ ಈ ಸರ್ಕಾರ ಇನ್ನೊಂದು ದೊಡ್ಡ ಅನ್ಯಾಯವನ್ನ ಈ ಭಾಗಕ್ಕೆ ಮಾಡಲು  ಹೊರಟಿದೆ. 

ಒಂದು ಕಡೆ ಉತ್ತರ ಕರ್ನಾಟಕ ಅಭಿವೃದ್ದಿ ಮಾಡಿ ಇಲ್ಲ ಪ್ರತ್ಯೇಕ ರಾಜ್ಯ ಕೊಡಿ ಎಂದು ಸರ್ಕಾರದ ಮೇಲೆ ಈ ಭಾಗದ ಜನರು ಒತ್ತಡ ಹೇರುತ್ತಿದ್ದರೆ. ಇತ್ತ ಸಮ್ಮಿಶ್ರ ಸರ್ಕಾರ ಮಾತ್ರ ಅಭಿವೃದ್ದಿನೂ ಇಲ್ಲ ಸುವರ್ಣ ವಿಧಾನ ಸೌಧಕ್ಕೆ ಕಚೇರಿ ಸ್ಥಳಾಂತರನು ಇಲ್ಲ. ಹಾಗಂದ ಮಾತ್ರಕ್ಕೆ ಸರ್ಕಾರ ಸುಮ್ಮನೇನೂ ಕುಳಿತಿಲ್ಲ ಬದಲಿಗೆ ಇಲ್ಲಿರುವ ಕಚೇರಿಗಳನ್ನ ದಕ್ಷಣ ಕರ್ನಾಟಕದತ್ತ ಸ್ಥಳಾಂತರ ಮಾಡಿಕೊಳ್ಳುವ ಕೆಲಸದಲ್ಲಿ ತೊಡಗಿಕೊಂಡಿದೆ. ಇದರಿಂದ ಮತ್ತೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುವುದರ ಜೊತೆಗೆ ಈ ಭಾಗವನ್ನ ಕಡೆಗಣಿಸುತ್ತಿದೆ ಸರ್ಕಾರ ಎಂಬ ಆಕ್ರೋಶಕ್ಕೂ ಸದ್ಯ ತುತ್ತಾಗಿರುವಂತಾಗಿದೆ.

ರಾಜ್ಯದ ಎರಡನೇ ರಾಜಧಾನಿಯಾಗಿ ಬೆಳಗಾವಿಯನ್ನ ಮಾಡಬೇಕೆಂಬ ಒತ್ತಾಯವಿರುವಾಗಲೇ ಇಲ್ಲಿನ ವಿಭಾಗ ಮಟ್ಟದ ಕೆಶಿಪ್ ಕಚೇರಿಯನ್ನ ಸಚಿವ ಹೆಚ್.ಡಿ ರೇವಣ್ಣ ತನ್ನ ಪ್ರಭಾವ ಬೆಳೆಸಿ ಹಾಸನಕ್ಕೆ ಶಿಪ್ಟ್ ಮಾಡಿಕೊಂಡಿದ್ದರು. ಈ ಕಚೇರಿ ಮರುಸ್ಥಾಪನೆಗೆ ಹೋರಾಟಗಳು ನಡೆಯುತ್ತಿರುವಾಗಲೇ ಈಗ ಮತ್ತೊಂದು ಆಘಾತವನ್ನ ಸರ್ಕಾರ ಇಲ್ಲಿನ ಜನರಿಗೆ ನೀಡಿದೆ. ಅದು ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದ ಆಯುಷ್ ಔಷಧ ತಯಾರಿಕಾ ಘಟಕ. ಸದ್ಯ ಈ ಘಟಕವನ್ನ ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋದಲ್ಲಿ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿತ್ತು. ಆದ್ರೇ ಏಕಾ ಎಕಿ ಸರ್ಕಾರ ಈ ಘಟಕವನ್ನ ಬೆಳಗಾವಿಯಿಂದ ಬೆಂಗಳೂರಿಗೆ ಶಿಪ್ಟ್ ಮಾಡಿದೆ....

2017ರಲ್ಲಿ ಸಿಎಂ ಸಿದ್ದರಾಮಯ್ಯ 25 ಕೋಟಿ ಅನುದಾನ ಬಿಡುಗಡೆ ಮಾಡುವುದರ ಮೂಲಕ ಬೆಳಗಾವಿಯ ಆಯುಷ್ ಔಷಧ ತಯಾರಿಕಾ ಘಟಕಕ್ಕೆ ಗ್ರಿನ್ ಸಿಗ್ನಲ್ ನೀಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಘಟಕ ತಯಾರಿಕಾ ಕಾಮಗಾರಿ ಆರಂಭವಾಗಬೇಕಿತ್ತು. ಸರ್ಕಾರ ಬದಲಾದ ಹಿನ್ನಲೆಯಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರದಲ್ಲಿ ಕಾಮಗಾರಿ ಆರಂಭವಾಗಬೇಕಿದ್ದ ಘಟಕವನ್ನಈಗ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿಲ್ಲ ಹಾಗೂ ಬೆಂಗಳೂರಿನಲ್ಲಿರುವ ಕೇಂದ್ರಿಯ ಔಷಧಾಗಾರವನ್ನ ಬಲವರ್ದನೆಗೊಳಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಮಾಡಲು ಮುಂದಾಗಿದ್ದ ಘಟಕ ಸ್ಥಾಪನೆಯನ್ನ ಕೈಬಿಟ್ಟು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಕಾರಣ ಹೇಳಿ ಏಕಾ ಏಕಿ ಘಟಕ ಸ್ಥಳಾಂತರ ಮಾಡಿದ್ದಾರೆ.

ಇದೇ ರೀತಿ ಅನ್ಯಾಯ ಮುಂದು ವರೆದಿದ್ದೇ ಆದ್ರೇ ಮುಂದಿನ ದಿನಗಳಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೆ ಸಿದ್ದಗೊಳ್ಳಬೇಕಾಗುತ್ತದೆ. ಸರ್ಕಾರದ ಧೋರಣೆ ನೋಡುತ್ತಿದ್ದರೆ ಈ ಭಾಗವನ್ನ ಸರ್ಕಾರವೇ ಒಡೆಯುವ ಯೋಚನೆ ಮಾಡಿಕೊಂಡಂತೆ ಕಾಣುತ್ತಿದೆ. ಈ ಕೂಡಲೇ ಕೆಶಿಪ್ ಕಚೇರಿ ಮರುಸ್ಥಳಾಂತರ ಹಾಗೂ ಔಷಧ ಘಟಕ ಕಾಮಗಾರಿ ಆರಂಭಿಸಬೇಕು ಇಲ್ಲವಾದರೆ ಹೋರಾಟ ಮಾಡುವುದಾಗಿ ಸಾರ್ವಜನಿಕರು ಸರ್ಕಾರಕ್ಕೆ ಎಚ್ಚರಿಸುತ್ತಿದ್ದಾರೆ..

ಸದ್ಯ ಸರ್ಕಾರ ಬೆಳಗಾವಿಯಲ್ಲಿರುವ ಕಚೇರಿಗಳನ್ನ ಏಕಾ ಎಕಿ ದಕ್ಷಣ ಕರ್ನಾಟಕ ಭಾಗಕ್ಕೆ ಸ್ಥಳಾಂತರ ಮಾಡಿಕೊಳ್ಳುವುದರ ಹಿಂದೆ ಇರುವ ಉದ್ದೇಶವ ಆದರೂ ಏನು. ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಕೂಗು ಕೇಳಿ ಬರುತ್ತಿರುವ ಸಂದರ್ಭದಲ್ಲೂ ಈ ರೀತಿ ಸರ್ಕಾರ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ನಿಜವಾಗಲೂ ಸರ್ಕಾರಕ್ಕೆ ಈ ಭಾಗದ ಮೇಲೆ ಮಲತಾಯಿ ಧೋರಣೆ ಮಾಡುತ್ತಿದ್ದೇಯಾ ಇವೆಲ್ಲದಕ್ಕೂ ಸರ್ಕಾರವೇ ಉತ್ತರ ಕೊಡಬೇಕಿದೆ. ಆದರೆ ಹೀಗೆ ಮುಂದುವರೆದಿದ್ದೇ ಆದಲ್ಲಿ ಉತ್ತರ ಕರ್ನಾಟಕದ ಜನರು ಪ್ರತ್ಯೇಕ ರಾಜಕ್ಕಾಗಿ ಬೀದಿಗಿಳಿಯುತ್ತಾರೆ. 
First published:August 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ