HOME » NEWS » State » SHOCK TO CM YEDDYURAPPA IN DELHI AMIT SHAH HINTED AT A LEADERSHIP CHANGE RHHSN

ದೆಹಲಿಯಲ್ಲಿ ಸಿಎಂ ಯಡಿಯೂರಪ್ಪಗೆ ಶಾಕ್; ನಾಯಕತ್ವ ಬದಲಾವಣೆಯ ಸುಳಿವು ನೀಡಿದ ಅಮಿತ್ ಶಾ?

ಬಳಿಕ ಪುತ್ರ ವಿಜಯೇಂದ್ರ ಜೊತೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ನಾಯಕತ್ವ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಆ ಗೊಂದಲ ಇರುವುದು ಮಾಧ್ಯಮದಲ್ಲಿ ಮಾತ್ರ ಎಂದಷ್ಟೇ ಹೇಳಿದರು.

news18-kannada
Updated:January 10, 2021, 7:20 PM IST
ದೆಹಲಿಯಲ್ಲಿ ಸಿಎಂ ಯಡಿಯೂರಪ್ಪಗೆ ಶಾಕ್; ನಾಯಕತ್ವ ಬದಲಾವಣೆಯ ಸುಳಿವು ನೀಡಿದ ಅಮಿತ್ ಶಾ?
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ನವದೆಹಲಿ; ಬಿಜೆಪಿ ಹೈಕಮಾಂಡ್ ಬುಲಾವ್ ಮೇರೆಗೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಪುತ್ರ ವಿಜಯೇಂದ್ರ ಅವರೊಂದಿಗೆ ದೆಹಲಿಗೆ ಬಂದಿದ್ದರು. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಿಎಸ್​ವೈ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಈ ವೇಳೆ ಅಮಿತ್ ಶಾ ಅವರು ನಾಯಕತ್ವ ಬದಲಾವಣೆಯ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

ಭೇಟಿ ವೇಳೆ ಅಮಿತ್ ಶಾ ಅವರು ನೇರವಾಗಿ ನಾಯಕತ್ವ ಬದಲಾವಣೆಯ ವಿಷಯ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಹುದ್ದೆ ತ್ಯಜಿಸಿದರೆ ಪರ್ಯಾಯ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರಂತೆ. ಮುಂದಿನ ವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು,  ಪುತ್ರ ರಾಘವೇಂದ್ರನಿಗೆ ಕೇಂದ್ರ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಕರ್ನಾಟಕದ ಕೋಟಾ ತುಂಬಲು ಚಿಂತನೆ ನಡೆಸಲಾಗಿದೆ.

ಇದನ್ನು ಓದಿ: ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಬಿಎಸ್ ಯಡಿಯೂರಪ್ಪ

ಅಲ್ಲದೇ, ಯಡಿಯೂರಪ್ಪ ಅವರಿಗೂ ಉನ್ನತ ಹುದ್ದೆ ಕೊಡುವ ಭರವಸೆ ನೀಡಲಾಗಿದೆ. ಯಡಿಯೂರಪ್ಪ ಅವರಿಗೆ ರಾಜ್ಯಪಾಲ ಹುದ್ದೆ ನೀಡುವುದಾಗಿ ಹೈಕಮಾಂಡ್ ತಿಳಿಸಿದೆ ಎನ್ನಲಾಗಿದೆ. ಶೀಘ್ರದಲ್ಲೇ ತಮ್ಮ ನಿರ್ಧಾರ ತಿಳಿಸುವಂತೆಯೂ ಯಡಿಯೂರಪ್ಪ ಅವರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.  ಅಮಿತ್ ಶಾ ಇಟ್ಟ ಪ್ರಸ್ತಾವನೆಯಿಂದ ಬಿಎಸ್​ವೈ ಶಾಕ್ ಆಗಿದ್ದು, ಅಮಿತ್ ಶಾ ನಿವಾಸದಿಂದ ತೆರಳುವಾಗ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹಾಗೆ ತೆರಳಿದರು.

ಬಳಿಕ ಪುತ್ರ ವಿಜಯೇಂದ್ರ ಜೊತೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ನಾಯಕತ್ವ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಆ ಗೊಂದಲ ಇರುವುದು ಮಾಧ್ಯಮದಲ್ಲಿ ಮಾತ್ರ ಎಂದಷ್ಟೇ ಹೇಳಿದರು.
Published by: HR Ramesh
First published: January 10, 2021, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories