• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shobha Karandlaje: ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ: ಶೋಭಾ ಕರಂದ್ಲಾಜೆ

Shobha Karandlaje: ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ: ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕರ್ನಾಟಕದ ಸಾರ್ವಭೌಮತ್ವದ ವಿರುದ್ಧ ಮಾತಾಡಿದ್ದಾರೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, ನಾವು ದೇಶದ ಏಕತೆ ಅಂತ ಮಾತಾಡ್ತೀವಿ. ಜೆಎನ್‌ಯುನಲ್ಲಿ ತುಕಡೆ ಗ್ಯಾಂಗ್ ದೇಶ ವಿಭಜನೆ ಬಗ್ಗೆ ಮಾತಾಡ್ತಿದ್ರು, ಆ ಭಾಷೆಯನ್ನ ಸೋನಿಯಾ ಗಾಂಧಿ ಇಲ್ಲಿ ಬಳಸಿದ್ದಾರೆ ಎಂದು ಹೇಳಿದರು.

ಮುಂದೆ ಓದಿ ...
  • Share this:

ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ವಿರುದ್ಧ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿ, ಸಂಸದೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಶೋಭಾ ಕರಂದ್ಲಾಜೆ (Shobha Karandlaje), ಇಂದು ಎಲೆಕ್ಷನ್ ಕಮಿಷನ್‌ಗೆ (Election Commission) ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದೇವೆ ಎಂದು ಹೇಳಿದರು.


ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕರ್ನಾಟಕದ ಸಾರ್ವಭೌಮತ್ವದ ವಿರುದ್ಧ ಮಾತಾಡಿದ್ದಾರೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, ನಾವು ದೇಶದ ಏಕತೆ ಅಂತ ಮಾತಾಡ್ತೀವಿ. ಜೆಎನ್‌ಯುನಲ್ಲಿ ತುಕಡೆ ಗ್ಯಾಂಗ್ ದೇಶ ವಿಭಜನೆ ಬಗ್ಗೆ ಮಾತಾಡ್ತಿದ್ರು, ಆ ಭಾಷೆಯನ್ನ ಸೋನಿಯಾ ಗಾಂಧಿ ಇಲ್ಲಿ ಬಳಸಿದ್ದಾರೆ. ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಅಂತ ನಾವೆಲ್ಲಾ ಬಾಳ್ತಿದ್ದೀವಿ ಎಂದು ಹೇಳಿದರು.


ಇದನ್ನೂ ಓದಿ: BSY on Modi: ನರೇಂದ್ರ ಮೋದಿಯಂತಹ ಪ್ರಧಾನಿ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ: ಬಿಎಸ್‌ ಯಡಿಯೂರಪ್ಪ


ಮುಂದುವರಿದು ಮಾತನಾಡಿದ ಶೋಭಾ ಕರಂದ್ಲಾಜೆ, ಯಾವ ದೇಶ ಒಗ್ಗಟ್ಟಾಗಿ ಇರಬೇಕು ಅಂತ ದೇಶದ ಭದ್ರತೆಯ ಬಗ್ಗೆ, ಸಾರ್ವಭೌಮತ್ವದ ಬಗ್ಗೆ ಜನರಲ್ ತಿಮ್ಮಯ್ಯ ಮಾತನಾಡಿದ್ರೋ ಈಗ ಅದನ್ನ ಹೊಡೆಯುವ ಕೆಲಸ ಮಾಡಿದ್ರಿ. ಹಿಂದೆ ಇದೇ ರೀತಿ ಮಾತಾಡಿ ಕಾಶ್ಮೀರ ದೂರ ಮಾಡಿದ್ರಿ. ಹೀಗಾಗಿ ಕಾಶ್ಮೀರ ಭಾರತದಿಂದ ದೂರ ಉಳಿಯಿತು. ಕಾಶ್ಮೀರದಲ್ಲಿ ಬೇರೆಯೇ ಧ್ವಜ ಇತ್ತು. ಮೊನ್ನೆ ಆರ್ಟಿಕಲ್ 370 ತಂದ ಬಳಿಕ ಕಾಶ್ಮೀರ ಭಾರತದ ಭಾಗ ಆಯ್ತು ಎಂದು ಹೇಳಿದರು.


ಇನ್ನು, ಸೋನಿಯಾ ಗಾಂಧಿ ಅವರ ನಿರ್ಧಾರ ಏನು ಅಂತ ತಕ್ಷಣ ಹೇಳಬೇಕು ಎಂದ ಶೋಭಾ ಕರಂದ್ಲಾಜೆ, ಇದನ್ನ ದೇಶ ನೋಡ್ತಿದೆ. ಭಾರತದ ವಿರುದ್ಧ ಮಾತನಾಡುವ ಕೆಲಸ ಸೋನಿಯಾ ಗಾಂಧಿ ಮಾಡಿದ್ದಾರೆ. ಎಲೆಕ್ಷನ್ ಕಮಿಷನ್ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾವು ಯಾವುದೇ ಕಾರಣಕ್ಕೂ ಇದನ್ನ ಸಹಿಸಲ್ಲ. ರಾಷ್ಟ್ರಕವಿ ಕುವೆಂಪು ಅವರು ಜಯ ಭಾರತ ಜನನಿಯ ತನುಜಾತೆ ಅಂತ ಹೇಳಿದ್ದಾರೆ. ಅದರಂತೆ ನಾವು ನಡೆದುಕೊಳ್ತಿದ್ದೇವೆ‌. ಅಂತಹ ಒಗ್ಗಟ್ಟಿಗೆ ಧಕ್ಕೆ ತರುವ ಕೆಲಸ ಸೋನಿಯಾ ಗಾಂಧಿ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ: Karnataka Election 2023 Live Updates: ಚುನಾವಣಾ ರಂಗದಲ್ಲಿ ಕೊನೇ ಕ್ಷಣದ ಕಸರತ್ತು; ಏನೇನಿದೆ ಇವತ್ತಿನ ಮಸಲತ್ತು?


ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಅಗತ್ಯ ಇದೆ


ಬೆಂಗಳೂರು: ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಅಗತ್ಯ ಇದೆ. ಪ್ರಧಾನಿ ನರೇಂದ್ರ ಮೋದಿಯಂತಹ ಮುತ್ಸದ್ದಿ ಪ್ರಧಾನಿ ದೇಶದ ಅಭಿವೃದ್ಧಿ ಬಗ್ಗೆ ಹಗಲಿರುಳು ಕೆಲಸ ಮಾಡ್ತಿದ್ಸಾರೆ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ ಯಡಿಯೂರಪ್ಪ, ದೇಶ ವಿದೇಶಕ್ಕೆ ಹೋಗಿ ಬಂದರೂ ವಿಶ್ರಾಂತಿ ತೆಗೆದುಕೊಳ್ಳದೇ ದೇಶದ ಉದ್ದಗಲಕ್ಕೂ ನರೇಂದ್ರ ಮೋದಿ ಓಡಾಡ್ತಿದ್ದಾರೆ. ಇವಾಗ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅಮಿತ್ ಶಾ ಮತ್ತು ನರೇಂದ್ರ ಮೋದಿ ವಿಶೇಷ ಪ್ರಯತ್ನ ಮಾಡ್ತಿದ್ದಾರೆ. ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ಬರುವ ಪ್ರಧಾನಿ ನಮಗೆಲ್ಲರಿಗೂ ಸಿಕ್ಕಿರುವುದು ಸೌಭಾಗ್ಯ ಎಂದು ಹೇಳಿದರು.

top videos
    First published: