ಬಾಗಲಕೋಟೆ: ಬೆಳಗಾವಿ ಅಧಿವೇಶನದಲ್ಲಿ (Belagavi Session) ಮತಾಂತರ (Religion Conversion) ನಿಷೇಧ ಕಾಯ್ದೆ ಚರ್ಚೆ ವಿಚಾರಕ್ಕೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ (Minister Shobha Karandlaje) ಬೆಂಬಲ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮತಾಂತರ ಕಾಯ್ದೆ ವಿಚಾರದಲ್ಲಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕು. ಮಂಗಳೂರು ಆತ್ಮಹತ್ಯೆ, ಲವ್ ಜಿಹಾದಿ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆ ಆಗ್ತಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ ವರ್ಗದ ಜನರನ್ನ ಅವರ ಬಡತನ, ಆರೋಗ್ಯ ಸಂದರ್ಭ, ಅವರ ರೋಗವನ್ನ ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಯೌವನ ತುಂಬಿದಾಗ ಮದುವೆ ಯಾರು, ಯಾಕೆ ಬೇಡ ಅಂತಾರೆ? ಸಿ.ಎಂ.ಇಬ್ರಾಹಿಂ
ಇದರ ಬಗ್ಗೆ ಸರಕಾರ ಸೀರಿಯಸ್ಸಾಗಿ ಯೋಚನೆ ಮಾಡಬೇಕು. ಸಾಮಾಜಿಕ ಅಸಮತೋಲನೆ ನಿರ್ಮಾಣ ಆಗಬಾರದು. ನಮ್ಮ ಬಡತನ ನಮ್ಮ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ನಾವು ಕೂಡ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗೋದಕ್ಕೆ ಸಾಧ್ಯವಾಗಿದೆ. ಇದಕ್ಕೆ ಜಾತಿ ಕಾರಣವೋ.. ಆರೋಗ್ಯ ಕಾರಣವೋ.. ಆರ್ಥಿಕ ಪರಿಸ್ಥಿತ ಕಾರಣವೋ.. ಸಾಮಾಜಿಕ ಅಡತಡೆಗಳು ಕಾರಣವೋ ಅನ್ನೋದನ್ನ ಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು. ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದರು.
ಹೆಚ್ಚು ಕಾಂಟ್ರವರ್ಸಿಯಾಗಿ ಮಾತನಾಡುವುದಿಲ್ಲ
ಇದೆ ವೇಳೆ ಮತಾಂತರ ನಿಷೇಧ ಕಾಯ್ದೆ ಚರ್ಚೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನವರಿಗೆ ಮಾನಸಿಕತೆ ಇರೋದು. ನಾನು ಹೆಚ್ಚಾಗಿ ಮಾತನಾಡುವುದಿಲ್ಲ, ಚುನಾವಣೆ ನೀತಿ ಸಂಹಿತೆ ಮತ್ತು ನಾನು ಕೇಂದ್ರಮಂತ್ರಿ ಆಗಿದ್ದೇನೆ. ಹೆಚ್ಚು ಕಾಂಟ್ರವರ್ಸಿಯಾಗಿ ಮಾತನಾಡುವುದಿಲ್ಲ. ನಾವು ನೋಡಿದ್ದೇವೆ, ನಾನೇ ಕೆಲವು ಕೇಸುಗಳಿಗೆ ಅಟೆಂಡ್ ಆಗಿದ್ದೇನೆ. ವೆಸ್ಟ್ ಬೆಂಗಲ್, ಅಸ್ಸಾಂ ಬಾಂಗ್ಲಾದೇಶ, ನಾರ್ಥ್ ಈಸ್ಟ್ ನಿಂದ ಬರುವ, ಒಂದು ಸಮಾಜದ ಮಕ್ಕಳನ್ನ ಹೇಗೆ ಇಲ್ಲಿ ಪ್ರೊಟೆಕ್ಟ್ ಮಾಡಲಾಗುತ್ತೆ. ಅವರಿಗೆ ವೋಟರ್ ಐಡಿ ಕೊಟ್ಟು ಮುಂದೆ ಅವರನ್ನ ಮತದಾರನಾಗಿ ಮಾಡಲಾಗುತ್ತದೆ. ನಾವು ತನಿಖೆ ಮಾಡಬೇಕು ಇದಕ್ಕೆ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು.ಈ ಮನಸ್ಥಿತಿ ಇರೋದು ಕಾಂಗ್ರೆಸ್ ನಲ್ಲಿ. ಕಾಂಗ್ರೆಸ್ ನವರು ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಾರೆ. ನರೇಂದ್ರಮೋದಿಯವರು ಅಭಿವೃದ್ಧಿ ಹೆಸರಲ್ಲಿ ವೋಟ್ ಕೇಳ್ತಾರೆ ಎಂದು ಆರೋಪಿಸಿದರು.
ಡಿಕೆ ಶಿವಕುಮಾರ್ಗೆ ಶೋಭಾ ತಿರುಗೇಟು
ಡಿ.ಕೆ.ಶಿವಕುಮಾರ್ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡದೆ ಇರುವುದು ಒಳ್ಳೆಯದು. ಅವರ ಪಕ್ಷ ನಿಂತಿರುವುದು ಒಂದು ವರ್ಗವನ್ನ, ಜಾತಿಯನ್ನ, ಧರ್ಮವನ್ನ ಓಲೈಸುವ ಆಧಾರದ ಮೇಲೆ. ಓಲೈಸಿಕೊಂಡು ಅಧಿಕಾರದಲ್ಲಿ ಇರಬಹುದಾ ಅನ್ನೋದನ್ನ, ದೇಶದ ಜನ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು. ಇನ್ನು ಇದೆ ವೇಳೆ, ರಾವತ್ ಸಾವಿಗೆ ವಿಕೃತ ಮನಸ್ಸುಗಳ ಸಂಭ್ರಮಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ದೇಶದ ಸಿಡಿಎಸ್ ರಾವತ್ ಅವರ ಸಾವಿಗೆ ನಿಧನರಾದ ಸಂದರ್ಭದಲ್ಲಿ ಕೆಲವು ವಿಕೃತ ಮನಸ್ಸುಗಳು ಸಂಭ್ರಮಿಸಿದ್ದಾರೆ. ಅವರು ವಿಕೃತ ಮನಸ್ಸುಗಳಲ್ಲ, ದೇಶದ್ರೋಹಿಗಳು. ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಕೈಗೊಳ್ಳುತ್ತಾರೆ. ಇಂಥವರಿಗೆ ಕಠಿಣವಾದ ಶಿಕ್ಷೆಯನ್ನು ಕೊಡಬೇಕು ಅನ್ನುವುದು ನಮ್ಮೆಲ್ಲರ ಆಗ್ರಹ. ಇದು ದೇಶದ ಜನರ ಆಗ್ರಹವಾಗಿದೆ. ಇದರಲ್ಲೇನು ರಾಜಕೀಯವಿಲ್ಲ, ರಾಜಕೀಯ ಪಕ್ಷಗಳನ್ನು ದೇಶಭಕ್ತರಿದ್ದಾರೆ. ಕೆಲವರು ದೇಶಕ್ಕಾಗಿ ವಿರೋಧ ಮಾಡುವವರು ವಿರೋಧಿಗಳಾಗಿಯೇ ಇರ್ತಾರೆ. ಅಂತವರಿಗೆ ಪಕ್ಷ ಇಲ್ಲ, ಪಂಗಡ ಇಲ್ಲ, ಜಾತಿ ಇಲ್ಲ, ಪಂಥ ಇಲ್ಲ. ಅಂಥವರ ಮೇಲೆ ಉಗ್ರ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಬದ್ಧವಾಗಿದೆ ಎಂದರು.
ಇದನ್ನೂ ಓದಿ: BJP ಒಮ್ಮೆ ಅಧಿಕಾರಕ್ಕೆ ಬಂದರೆ ಮೂವರು CM ಆಗೋದು ಅವರ ಸಂಪ್ರದಾಯ: DK Shivakumar ವ್ಯಂಗ್ಯ
ಇನ್ನು ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರಕ್ಕೆ ಉತ್ತರಿಸಿ, ಆಹಾರಪದ್ಧತಿಯನ್ನ ಯಾರೂ ಹೇರೋದಕ್ಕೆ ಆಗೋದಿಲ್ಲ. ಅವರ ವಯಕ್ತಿಕ ಆಯ್ಕೆಯನ್ನ ವ್ಯಕ್ತಿಗೆ ಅಥವಾ ಕುಟುಂಬಕ್ಕೆ ಬಿಟ್ಟುಬಿಡಬೇಕು. ಯಾರೂ ಒತ್ತಡ ಪೂರ್ವಕವಾಗಿ ಯಾವುದನ್ನೂ ತಿನ್ನುತ್ತೇವೆ ಅನ್ನೋದು ತಪ್ಪು. ಮಗುವಿಗೆ ಏನು ಕೊಡಬೇಕು ಅನ್ನೋದು ತಾಯಿಯ ಆಯ್ಕೆ. ತಾಯಿನೇ ನಿರ್ಧಾರ ಮಾಡಬೇಕು, ನನ್ನ ಮಗು ಹೇಗೆ ಇರಬೇಕು, ಏನು ಕೊಡಬೇಕು ಅನ್ನೋದು. ಮೊಟ್ಟೆ ಕೊಡಬೇಕೋ ಬೇಡವೋ ಎನ್ನುವುದರ ಬಗ್ಗೆ ಚರ್ಚೆ ಮಾಡುವ ಬದಲು, ಮೊಟ್ಟೆಯ ಹಣವನ್ನ ತಾಯಿ ಕೈಗೆ ಕೊಟ್ಟರೆ ಅವಳು ಹೆಚ್ಚಿನ ಒಳ್ಳೆಯ ಆಹಾರವನ್ನು ಕೊಡಬಹುದು ಎನ್ನೋದು ನನ್ನ ವಾದ..ಇದರ ಬಗ್ಗೆ ರಾಜ್ಯದಲ್ಲಿ ಚರ್ಚೆ ಆಗಬೇಕು. ವಿಶ್ಲೇಷಣೆ ಆಗಬೇಕು.ಆ ಕಾರಣಕ್ಕಾಗಿ ಆಹಾರ ಪದ್ಧತಿಯನ್ನು ಅವರವರಿಗೆ ಬಿಡೋದು ಒಳ್ಳೇದು ಅನ್ಸುತ್ತೆ ಎಂದರು.
ವರದಿ: ಮಂಜುನಾಥ್ ತಳವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ