ಮುಂದೆ ಸಿದ್ದರಾಮಯ್ಯ, ಡಿಕೆಶಿನೇ ಅದನ್ನು ನೋಡ್ತಾರೆ, ಕಾಯ್ತಿರಿ.. Shobha Karandlaje ಎಚ್ಚರಿಕೆ!

ಕಾಂಗ್ರೆಸ್ ಇನ್ನಷ್ಟು ಹೀನಸ್ಥಿತಿಗೆ ಹೋಗುತ್ತದೆ. ಡಿಕೆಶಿ, ಸಿದ್ದರಾಮಯ್ಯ ನೀವು ನಿಮ್ಮ ಕಣ್ಣಿನಲ್ಲಿ ಅದನ್ನು ನೋಡುತ್ತೀರಿ ಎಂದು ಕಾಪುವಿನಲ್ಲಿ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

  • Share this:
ಉಡುಪಿ: ಮತಾಂತರ ನಿಷೇಧ ಕಾಯ್ದೆಯನ್ನು (Anti Conversion Bill) ವಿಪಕ್ಷ ಕಾಂಗ್ರೆಸ್​ (Congress) ವಿರೋಧಿಸುತ್ತಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Central Minister Shobha Karandlaje) ಕಿಡಿಕಾರಿದರು. ಮತಾಂತರ ನಿಷೇಧ ಕಾಯ್ದೆ ಗ್ಗೆ ಕಾಂಗ್ರೆಸ್ ಗೆ ಯಾಕೆ ಹೊಟ್ಟೆ ಉರಿ? ಕಾಯ್ದೆ ರಾಜ್ಯದ, ದೇಶದ ಜನರ ಅಪೇಕ್ಷೆಯಾಗಿದೆ. ಲವ್ ಜಿಹಾದ್​​, ಬಡತನ ದುರುಪಯೋಗ ಮಾಡಲಾಗುತ್ತಿದೆ. ಮತಾಂತರ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲಾಗುತ್ತದೆ. ಸಮಾಜದ ಶಾಂತಿ ಕಾಪಾಡಲು ಕಾಯ್ದೆ ಅಗತ್ಯ ಇದೆ. ಓಟ್ ಬ್ಯಾಂಕಿಗಾಗಿ ಕಾಂಗ್ರೆಸ್ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನದ್ದು ಅಲ್ಪಸಂಖ್ಯಾತ ಓಟಲ್ಲಿ ಗೆಲ್ಲುವ ಪ್ಲ್ಯಾನ್. ಕಾಂಗ್ರೆಸಿಗರೇ ನಿಮಗೆ ಬಹು ಸಂಖ್ಯಾತರ ಓಟ್ ಬೇಡ್ವಾ? ಅಲ್ಪಸಂಖ್ಯಾತರ ಓಟಲ್ಲಿ ಗೆದ್ದು ಬರ್ತೀರಾ? ಅವರವರು ಅವರ ಧರ್ಮದಲ್ಲಿ ಇದ್ದರೆ ನಿಮಗೆ ಏನು ಸಮಸ್ಯೆ? ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ದೆಹಲಿಯ ನಾಯಕರು ಓಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರ ಶುಭನುಡಿಗಳನ್ನು ಜನ ನೋಡ್ತಿದ್ದಾರೆ. ಕಾಂಗ್ರೆಸ್ಸಿಗೆ ರಾಜ್ಯದ ಸರಿಯಾದ ಪಾಠ ಕಲಿಸುತ್ತಾರೆ ಎಂದರು.

ಡಿಕೆಶಿ, ಸಿದ್ದರಾಮಯ್ಯ ನೀವು ನಿಮ್ಮ ಕಣ್ಣಿನಲ್ಲಿ ಅದನ್ನು ನೋಡುತ್ತೀರಿ

ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತೇವೆ ಎಂದಿರುವ ಡಿಕೆ ಶಿವಕುಮಾರ್​ಗೆ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ರು. ಡಿಕೆಶಿ ಎಲ್ಲಾ ಕಾಯ್ದೆಯನ್ನು ತೆಗೆಯುತ್ತೇವೆ ಎಂದಿದ್ದಾರೆ. ಕಾಶ್ಮೀರದ 370ನೇ ವಿಧಿ, ಸಿಎಎ ಕಾಯ್ದೆ ತೆಗಿತೀವಿ ಎಂದಿದ್ದಾರೆ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆ ತೆಗಿತೀನಿ ಎಂದಿದ್ದಾರೆ. ಡಿಕೆಶಿ ಮತ್ತು ಕಾಂಗ್ರೆಸ್ ಎಲ್ಲಾ ಕಾಯ್ದೆಗಳನ್ನು ತೆಗೆಯುವುದರಲ್ಲೇ ಇದೆ. ಜಾತಿವಾದ-ಧರ್ಮವಾದ ಮಾಡಿದ್ದು ಕಾಂಗ್ರೆಸ್. ಕಾಶ್ಮೀರದಲ್ಲಿ ಬೆಂಕಿ ಹಚ್ಚಲು ಕಾರಣಕರ್ತರಾದವರು ಕಾಂಗ್ರೆಸ್ಸಿಗರು ಎಂದು ಗಂಭೀರ ಆರೋಪ ಮಾಡಿದರು. ಕಾಯ್ದೆಗಳನ್ನು ತೆಗೆಯುವ ಅವಕಾಶ ರಾಜ್ಯದ ಜನ ಕೊಡಲ್ಲ. ಕಾಂಗ್ರೆಸ್ಸನ್ನು ಎಲ್ಲಿಡಬೇಕು ಜನ ಅಲ್ಲೇ ಇಟ್ಟಿದ್ದಾರೆ, ಕಾಂಗ್ರೆಸ್ ಇನ್ನಷ್ಟು ಹೀನಸ್ಥಿತಿಗೆ ಹೋಗುತ್ತದೆ. ಡಿಕೆಶಿ, ಸಿದ್ದರಾಮಯ್ಯ ನೀವು ನಿಮ್ಮ ಕಣ್ಣಿನಲ್ಲಿ ಅದನ್ನು ನೋಡುತ್ತೀರಿ ಎಂದು ಕಾಪುವಿನಲ್ಲಿ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಬ್ರಾಹ್ಮಣರನ್ನು ಮದುವೆಯಾಗಿರುವ ಸಿನಿಮಾ ನಟರನ್ನು ಜೈಲಿಗೆ ಹಾಕ್ತೀರಾ.. ಏನಿದು H Vishwanath ವರಸೆ?

ಸ್ವರ್ಣವಲ್ಲಿ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ

ಮದುವೆ ವಯಸ್ಸನ್ನು 21ಕ್ಕೆ ಏರಿಸಿರುವ ಕೇಂದ್ರ ಸರ್ಕಾರದ ನಿಧಾರವನ್ನು ಸಚಿವೆ ಸಮರ್ಥಿಸಿಕೊಂಡರು. ಸರ್ಕಾರದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸ್ವರ್ಣವಲ್ಲಿ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮದುವೆ ವಯಸ್ಸಿಗೂ ಜನಸಂಖ್ಯೆಗೆ ಸಂಬಂಧ ಇಲ್ಲ. ವಯಸ್ಸು 21 ಆದರೆ ಯುವತಿಯ ಪದವಿ ಆಗಿರುತ್ತದೆ. ಯುವತಿಗೆ 21 ವಯಸ್ಸಿಗೆ ಪ್ರಬುದ್ಧತೆ ಬಂದಿರುತ್ತದೆ. ವಯಸ್ಸು 21 ಆಗುವ ಮೊದಲು ಯಾರು ಮದುವೆ ಮಾಡಬಾರದು. ಇಡೀ ದೇಶದಲ್ಲಿ ಹದಿನೆಂಟನೇ ವಯಸ್ಸಿಗೆ ಮದುವೆ ಮಾಡುತ್ತಾರೆ ಎಂಬ ಅಭಿಪ್ರಾಯ ತಪ್ಪು. ಸ್ವರ್ಣವಲ್ಲಿ ಸ್ವಾಮೀಜಿ ಮಾತಿಗೆ ನಾನು ವಿರೋಧ ಮಾಡಲ್ಲ ಎಂದರು.

ಕಾನೂನು ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ

ವಯಸ್ಸು 21 ಆದ ನಂತರ ಮಹಿಳೆಯರು ಹೆರುತ್ತಾರೆ, ಈ ಕಾನೂನು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಕಾನೂನು ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ. ಈ ಕಾನೂನನ್ನ ದೇಶದ ಎಲ್ಲರೂ ಪಾಲನೆ ಮಾಡಬೇಕು. ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಗರ್ಭಪಾತ ಆಗಬಹುದು. ಮಕ್ಕಳ, ಬಾಣಂತಿಯ ಸಾವುಗಳು ಜಾಸ್ತಿಯಾಗಿದೆ. ತಾಯಿ ಮಗುವಿನ ಮರಣಪ್ರಮಾಣ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೈಜ್ಞಾನಿಕ ವರದಿ ಪರಿಶೀಲನೆ ಮಾಡಿ ಈ ನಿರ್ಧಾರಕ್ಕೆ ಬರಲಾಗಿದೆ. ಶಿಶು ಮರಣ ಮತ್ತು ಗರ್ಭಿಣಿ ಮರಣ ತಪ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದರು ತಿಳಿಸಿದರು.
Published by:Kavya V
First published: