ಬೆಂಗಳೂರು: ಹಿಂದುತ್ವ ಚುನಾವಣಾ ಅಜೆಂಡಾ ಅಲ್ಲ. ಹಿಂದುತ್ವ (Hindutva) ನಮ್ಮ ಭಾವನೆ ಮತ್ತು ಶಕ್ತಿ, ನಮ್ಮದು ಚುನಾವಣೆಗಾಗಿ ಹಿಂದುತ್ವ ಅಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje) ಹೇಳಿದ್ದಾರೆ. ಬಿಜೆಪಿ (BJP) ಚುನಾವಣಾ ಸಮಯದಲ್ಲಿ ಮಾತ್ರ ಕೆಲಸ ಮಾಡುವ ಪಾರ್ಟಿ ಅಲ್ಲ. 365 ದಿನವೂ ಪಾರ್ಟಿ ಕಾರ್ಯಕರ್ತರು ಸಕ್ರಿಯರಾಗಿರುತ್ತಾರೆ. ಯೋಜನೆಗಳನ್ನು ಜನರ ಮಧ್ಯೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಲೇ ಬಂದಿದ್ದೇವೆ. ಕಾಂಗ್ರೆಸ್ (Congress) ಚುನಾವಣಾ ಬಂದಾಗ ಎಚ್ಚರಗೊಂಡು, ಒಡೆದು ಆಳುವ ನೀತಿ ಅನುಸರಿಸುತ್ತಾರೆ. ಚುನಾವಣೆ ಬಂದಾಗ ಪುಕ್ಕಟೆ ಭರವಸೆ ನೀಡುವ ಪಾರ್ಟಿ ಕಾಂಗ್ರೆಸ್. ಸಿದ್ದರಾಮಯ್ಯ ಕಳೆದ ಬಾರಿ ಚುನಾವಣಾ ಸಮಯದಲ್ಲಿ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದರು ಎಂದು ಹೇಳಿದರು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತರಲಾಗಿತ್ತು. 55 ಲಕ್ಷ ರೈತ ಕುಟುಂಬ ಇದ್ರೂ, ನಮ್ಮ ಸರ್ಕಾರ ಇಲ್ಲದ ಕಾರಣ ಕೇವಲ 17 ಜನ ನೋಂದಣಿ ಆಗಿದ್ದರು. ಕೇರಳದಲ್ಲಿ ಕೂಡ ಹೋರಾಟ ಮಾಡಬೇಕಾಯ್ತು. ಕೇಂದ್ರ ಕೊಟ್ರು ಕೆಲ ರಾಜ್ಯಗಳಲ್ಲಿ ಯೋಜನೆ ಸಿಗದಂತಾಗಿದೆ. ಬಿಜೆಪಿ ಇಲ್ಲದ ಕಡೆ ಜನರಿಗೆ ಯೋಜನೆಗಳು ಸಿಗುತ್ತಿಲ್ಲ ಎಂದರು.
ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವೆ
ಮೇ 10ರ ಚುನಾವಣೆಗೆ ಜನ ಹೆಚ್ಚು ಬಹುಮತ ಕೊಡ್ತಾರೆ ಅಂತ ಬಾವಿಸುತ್ತೇನೆ. ಮನೆ ಮನೆಗೆ ತೆರಳಿ ಕೇಂದ್ರ, ರಾಜ್ಯದ ಯೋಜನೆ ತಿಳಿಸ್ತೇವೆ. ಕಾಡು ಕುರುಬ, ಕೊರಗ ಸಮುದಾಯಕ್ಕೆ ಪ್ರತ್ಯೇಕ ಮತದಾನ ಕೇಂದ್ರ ಮಾಡಲಾಗಿದೆ.
ಯಾವುದೇ ಸಮಸ್ಯೆ ಇಲ್ಲದೇ ಚುನಾವಣೆ ನಡೆಯಲಿ
ಕರ್ನಾಟಕದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರ ಯೋಜನೆ ಜನರಿಗೆ ಮುಟ್ಟಿಸೋ ಕೆಲಸವನ್ನು ಚುನಾವಣೆ ಇಲ್ಲದಿದ್ದಾಗಲೂ ಮಾಡಿದ್ದೇವೆ. ಬಿಜೆಪಿ ಸರ್ವ ಜನಾಂಗದ ಅಭಿವೃದ್ಧಿ ಮಾಡುವ ಪಕ್ಷ. ಮೇ 10ರಂದು ಚುನಾವಣೆ ಮಾಡಲು ನಿರ್ಧಾರವಾಗಿದೆ.
ನಗರ ಪ್ರದೇಶ ಹಾಗೂ ಗ್ರಾಮದಲ್ಲಿ ಶಾಂತಿಯುತ ಮತದಾನ ಆಗಬೇಕು. ಮರು ಮತದಾನ ಆಗುವಂತಹ ಕೆಲಸ ಆಗಬಾರದು. ಗಲಭೆ, ಇವಿಎಂ ಸಮಸ್ಯೆ ಇಂದ ಮರು ಮತದಾನ ಆಗಬಾರದು ಅನ್ನೋದು ನಮ್ಮ ಆಶಯ ಎಂದು ತಿಳಿಸಿದರು.
ಇದನ್ನೂ ಓದಿ: Karnataka Assembly Election: ಈ ಬಾರಿ ಮನೆಯಿಂದಲೇ ಮತದಾನಕ್ಕೆ ಅವಕಾಶ! ಜೊತೆಗೆ ಚುನಾವಣೆಯಲ್ಲಿ ಇರಲಿದೆ ಹತ್ತಾರು ವಿಶೇಷ
80 ವರ್ಷ ಮೇಲ್ಪಟ್ಟವರು, ದಿವ್ಯಾಂಗರು ಮನೆಯಲ್ಲೇ ಕುಳಿತು ಮತದಾನ ಮಾಡಲು ಆಯೋಗ ಅವಕಾಶ ನೀಡಿದೆ. ಅಶಕ್ತರನ್ನ ಹೊತ್ತು ಕರೆತರ್ತಿದ್ರು. ನಮ್ಮ ಸರ್ಕಾರ ಒತ್ತು ಕೊಟ್ಟ ಹಿನ್ನೆಲೆ, ಮನೆಯಲ್ಲೇ ಕುಳಿತು ಮತ ಹಾಕಬಹುದಾಗಿದೆ ಎಂದು ಸರ್ಕಾರದ ಯೋಜನೆಗಳನ್ನು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ