• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kolara: ಮಾಲೂರಿನಲ್ಲಿ 39 ಸಾವಿರ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, 3,500 ಇ ಶ್ರಮ್ ಕಾರ್ಡ್ ವಿತರಣೆ

Kolara: ಮಾಲೂರಿನಲ್ಲಿ 39 ಸಾವಿರ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, 3,500 ಇ ಶ್ರಮ್ ಕಾರ್ಡ್ ವಿತರಣೆ

ಕಾರ್ಯಕ್ರಮದ ದೃಶ್ಯ

ಕಾರ್ಯಕ್ರಮದ ದೃಶ್ಯ

ಮಾಲೂರು ಪಟ್ಟಣದ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಶೋಭಾ ಕರಂದ್ಲಾಜೆ, ಎಂಟಿಬಿ ನಾಗರಾಜ್, ಕೋಟಾ ಶ್ರೀನಿವಾಸ ಪೂಜಾರಿ ಭಾಗಿಯಾಗಿದ್ದರು, ಕಾರ್ಯಕ್ರಮದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ಆಡಳಿತವನ್ನ ಆಡಳಿತ ಪಕ್ಷದ ನಾಯಕರು ಹಾಡಿ ಕೊಂಡಾಡಿದರು.

  • Share this:

ಕೋಲಾರ(ಜು.10): ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಬಿಜೆಪಿ (BJP) ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ (Vijay Kumar) ಆಯೋಜಿಸಿದ್ದ 39 ಸಾವಿರ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಚಾಲನೆ ನೀಡಿದರು. ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ, ಸಚಿವರಾದ ಎಂಟಿಬಿ ನಾಗರಾಜ್, ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ಎಚ್ ನಾಗೇಶ್, ಪೂರ್ಣಿಮಾ ಶ್ರೀನಿವಾಸ್, ಭಾರತಿ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು, ಸಾವಿರಾರು ಜನರು ಭಾಗಿಯಾಗಿದ್ದರು.


ಕಾರ್ಯಕ್ರಮದಲ್ಲಿ ಪ್ರಾಯೋಗಿಕವಾಗಿ ಫಲಾನುಭಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಂಟಿಬಿ ನಾಗರಾಜ್, ಕೋಟಾ ಶ್ರೀನಿವಾಸ್ ಪೂಜಾರಿ ವಿತರಣೆ ಮಾಡಿದರು.


ಶೋಭಾ ಕರಂದ್ಲಾಜೆ ಮಾತು


ಬಳಿಕ ವೇದಿಕೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜನರು ವಿವಿಧ ಆರೋಗ್ಯ ಸಮಸ್ಯೆಗಳಿಂದ ನೊಂದಿರುವ ಮಾಹಿತಿ ಅರಿತು, ಪ್ರಧಾನಿಯವರು ಆಯುಷ್ಮಾನ್ ಭಾರತ್ ಕಾರ್ಡ್ ಜಾರಿಗೆ ತಂದಿದ್ದಾರೆ. ಮೆಡಿಕಲ್ ಶಾಪ್ ಗಳಲ್ಲಿ ದುಬಾರಿ ವೆಚ್ಚಕ್ಕೆ ಸಿಗುತ್ತಿದ್ದ ಔಷಧಿಗಳು ಬಡವರಿಗೆ ಕೈಗೆಟುಕುವ ದರದಲ್ಲಿ ಸಿಗಲಿ ಎಂಬ ಉದ್ದೇಶದಿಂದ, ಜನೌಷಧಿ ಕೇಂದ್ರಗಳನ್ನ ತೆರೆಯಲಾಗಿದೆ ಎಂದರು.


ಲಸಿಕೆ ಕುರಿತು ಸಚಿವೆ ಮಾತು


ಕೊರೊನಾ ಸಮಯದಲ್ಲಿ ಜಗತ್ತೆ ವೈರಸ್ ಭಯದಿಂದ ನಡುಗಿತ್ತು, ಅಂತಹ ಸಂದರ್ಭದಲ್ಲು ಭಾರತದಲ್ಲಿ ಕೊರೊನಾ ಲಸಿಕೆ ಕಂಡು ಹಿಡಿದು ದೇಶದ ಜನರಿಗೆ ಉಚಿತವಾಗಿ ನೀಡಲಾಯಿತು. ಇದು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯವಾಗಿರುವ ವಿಚಾರ. ಈ ಹಿಂದೆ ಲಸಿಕೆಗಳಿಗಾಗಿ ವಿದೇಶಗಳನ್ನ ಅವಲಂಬಿಸಬೇಕಿತ್ತು, ಆದರೆ ಭಾರತದಲ್ಲೆ ಸ್ವದೇಶಿ ಲಸಿಕೆ ಕಂಡುಹಿಡಿದು, ವಿಶ್ವಕ್ಕೆ ಭಾರತ ರಪ್ತು ಮಾಡಿದ್ದು ದೇಶವೇ ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.


ಇದನ್ನೂ ಓದಿ: AICC: ರಾಜಕೀಯ ವ್ಯವಹಾರ ಸಮಿತಿ ರಚಿಸಿದ ಎಐಸಿಸಿ; ರಾಜ್ಯಕ್ಕೆ ಐವರು ಕಾರ್ಯದರ್ಶಿಗಳ ನೇಮಕ


ನರೇಂದ್ರ ಮೋದಿಯವರು ಭಾರತವನ್ನ ವಿಶ್ವ ನಾಯಕರ ಹಾದಿಯಲ್ಲಿ ಕೊಂಡುಯ್ಯುತ್ತಿದ್ದು ಮುಂದಿನ ಭಾರಿಯು ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.


ಕಾರ್ಯಕ್ರಮದಲ್ಲಿ ಮಾಲೂರು ತಾಲೂಕಿನ ಅಭಿವೃದ್ದಿ ಕುರಿತು ಬೇಸರ ವ್ಯಕ್ತಪಡಿಸಿದ ಸಚಿವೆ ಶೋಭಾ ಕರಂದ್ಲಾಜೆ, ಮಾಲೂರಿನಲ್ಲಿ ಈ ಹಿಂದೆ ಬಿಜೆಪಿ ಶಾಸಕರಿದ್ದ ವೇಲೆ ಸಾಕಷ್ಟು ಅಭಿವೃದ್ದಿ ಕಂಡಿದೆ. ಆದರೆ ಈಗಿನ ಆಡಳಿತದಲ್ಲಿ ಅಭಿವೃದ್ದಿ ದೂರವಾಗಿದೆ ಎಂದು ಕಿಡಿಕಾರಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಆಯೋಜಕ ಹೂಡಿ ವಿಜಯ್ ಕುಮಾರ್, ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಅಡ್ಟಿಪಡಿಸಲು ಕಾಣದ ಕೈಗಳು ಸಾಕಷ್ಟು ಪ್ರಯತ್ನ ನಡೆಸಿದೆ ಎಂದರು.


ಆದರೆ ಅದು ಸಪಲವಾಗಲಿಲ್ಲ ಎಂದು ಸ್ವಪಕ್ಷದ ವಿರೋದಿಗಳ ಹೆಸರನ್ನ ಹೇಳದೆ ಕಿಡಿಕಾರಿದರು. ಕಾರ್ಯಕ್ರಮ ಮುಗಿದ ನಂತರ ವಿರೋದಿಗಳು ಯಾರೆಂದು ಹೂಡಿ ವಿಜಯ್ ಕುಮಾರ್ ರನ್ನ ಪ್ರಶ್ನಿಸಿದರು, ಅದಕ್ಕೆ ಸೂಕ್ತ ಉತ್ತರ ನೀಡದ ಹೂಡಿ ವಿಜಯ್ ಕುಮಾರ್, ಕಾರ್ಯಕ್ರಮ ಯಶಸ್ಸು ಕಂಡಿದ್ದಕ್ಕೆ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿ ಹೊರಟರು


ಹೂಡಿ ವಿಜಯ್ ಕುಮಾರ್ ಕಾರ್ಯಕ್ರಮದಲ್ಲಿ ಎಂಟಿಬಿ ನಾಗರಾಜ್ ಭಾಗಿ


ಹೊಸಕೋಟೆ ವಿಧಾನಸಭಾ ಉಪ ಚುನಾವಣೆ ವೇಳೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ರಿಗೆ ಮಂಜುನಾಥ್ ಗೌಡ ಅವರ ಸಹೋದರ ಬಹಿರಂಗವಾಗಿ ಬೆಂಬಲಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು, ಶರತ್ ಬಚ್ಚೇಗೌಡ ಗೆಲುವಿನಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ಅವ್ರ ಪಾತ್ರವೂ ಇತ್ತೆಂಬ ಮಾತುಗಳು ಹರಿದಾಡಿತ್ತು, ಇದೀಗ ಮಂಜುನಾಥ್ ಗೌಡ ಮಾಲೂರು ಬಿಜೆಪಿ ಟಿಕೆಟ್ ಗಾಗಿ ಪಕ್ಷ ಸೇರ್ಪಡೆಯಾಗಿದ್ದು ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ, ತಮ್ಮನ್ನ ಸೋಲಿಸಿದ್ದಾರೆಂಬ ಬೇಸರ ಎಂಟಿಬಿ ನಾಗರಾಜ್ ಅವರಿಗೆ ಇನ್ನೂ ದೂರವಾಗಿಲ್ಲ, ಮಂಜುನಾಥ್ ಗೌಡ, ವಿರುದ್ದವಾಗಿ ಹೂಡಿ ವಿಜಯ್ ಕುಮಾರ್ ಸಹ ಕ್ಷೇತ್ರದಲ್ಲಿ ಕಳೆದ ಮೂರುವರೆ ವರ್ಷದಿಂದ ಸಂಚರಿಸುತ್ತಿದ್ದು, ಮುಂದಿನ ವಿಧಾನಸಭೆ ಟಿಕೆಟ್ ಆಕಾಂಕ್ಷಿಯು ಆಗಿದ್ದಾರೆ.


ಇದನ್ನೂ ಓದಿ: Heavy Rain: ರಾಜ್ಯದಲ್ಲಿ 48 ಗಂಟೆಗಳ ಅವಧಿಯಲ್ಲಿ ಭಾರೀ ಮಳೆ ಸಾಧ್ಯತೆ; ರೆಡ್ ಅಲರ್ಟ್ ಘೋಷಣೆ


ಹೀಗಾಗಿ ಹೂಡಿ ವಿಜಯ್ ಕುಮಾರ್ ಗೆ ಬೆಂಬಲಿಸಿ, ಎಂಟಿಬಿ ನಾಗರಾಜ್ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೆಚ್ಚುಗೆಯ ಮಾತನ್ನಾಡಿದರು, ಬಳಿಕ ಮಾದ್ಯಮಗಳ ಜೊತೆಗೆ ಮಾತನಾಡಿದ ಎಂಟಿಬಿ, ಪಕ್ಷಕ್ಕೆ ಯಾರೆ ಬಂದರು ಸ್ವಾಗತಿಸುತ್ತೇವೆ, ಆದರೆ ಕ್ಷೇತ್ರದ ಜನತೆಯ ಜೊತೆಗೆ ನಿಕಟ ಸಂಪರ್ಕ ಹೊಂದಿ ಸಮಾಜಸೇವೆಯಲ್ಲಿ ಗುರ್ತಿಸಿಕೊಂಡವರನ್ನ ಯಾರು ಮರೆಯಬಾರದು, ಕಾರ್ಯಕರ್ತರು ಅಂತವರನ್ನೆ ಬೆಂಬಲಿಸಬೇಕು ಎನ್ನುವ ಮೂಲಕ ತಮ್ಮ ಬೆಂಬಲ ಹೂಡಿ ವಿಜಯ್ ಕುಮಾರ್ ಗೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದರು.


ಇನ್ನು ಸಿದ್ದರಾಮೋತ್ಸವ ಕಾರ್ಯಕ್ರಮ ಕುರಿತು ಮಾತನಾಡಿದ ಎಂಟಿಬಿ, ಆ ಕಾರ್ಯಕ್ರಮಕ್ಕೆ ನಮ್ಮನ್ನ ಕರೆದಿಲ್ಲ, ಅವರ ಇಷ್ಟ ಮಾಡಿಕೊಳ್ಳಲಿ, ಸಿದ್ದರಾಮಯ್ಯ ಅವರು ನನ್ನ ಗುರುಗಳು, ನಾನು ಅವರ ಶಿಷ್ಯ, ಆದರೆ ಗುರುವನ್ನ ಬಿಟ್ಟು, ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು