HOME » NEWS » State » SHOBHA KARANDLAJE ATTACK ON HDK OVER CD RELEASED ISSUE RH

ಸಿಡಿ ತಯಾರಾಗಿದ್ದು, ಬಂಗಾಳದಲ್ಲಾ ಇಲ್ಲ ಜೆಎನ್​ಯುನಲ್ಲಾ?; ಎಚ್​ಡಿಕೆ ವಿರುದ್ಧ ಹರಿಹಾಯ್ದ ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರಲ್ಲಿ ಎಷ್ಟು ಪಿಜಿಗಳಿವೆ. ಆ ಪಿಜಿಗಳಲ್ಲಿ ಯಾರಾರು ಇದ್ದಾರೆ? ಅವರು ಯಾವ ಯಾವ ಕಾಲೇಜುಗಳಿಗೆ ಓದಲು ಹೋಗ್ತಿದ್ದಾರೆ ಅನ್ನೋದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ್ಬೇಕು ಎಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಿದ ಶೋಭಾ ಕರಂದ್ಲಾಜೆ ಉಡುಪಿ ಚಿಕ್ಕ ಜಿಲ್ಲೆ ಅನ್ಕೋಬಹುದು. ಅಲ್ಲಿ ಡ್ರಗ್ಸ್ ಮಾಫಿಯಾ ಇದೆ. ಅಲ್ಲಿ ಎಲ್ಲವೂ ನಡಿತಿದೆ ಎಂದು ಆರೋಪಿಸಿದರು.

HR Ramesh | news18-kannada
Updated:January 10, 2020, 4:29 PM IST
ಸಿಡಿ ತಯಾರಾಗಿದ್ದು, ಬಂಗಾಳದಲ್ಲಾ ಇಲ್ಲ ಜೆಎನ್​ಯುನಲ್ಲಾ?; ಎಚ್​ಡಿಕೆ ವಿರುದ್ಧ ಹರಿಹಾಯ್ದ ಸಂಸದೆ ಶೋಭಾ ಕರಂದ್ಲಾಜೆ
ಎಚ್​ಡಿಕೆ ಮತ್ತು ಶೋಭಾ ಕರಂದ್ಲಾಜೆ.
  • Share this:
ಬೆಂಗಳೂರು: ಮಂಗಳೂರು ಘಟನೆ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿಡಿ ಬಿಡುಗಡೆ ಮಾಡಿದ್ದಾರೆ. ಅವರು ಸಿಡಿ ಪ್ರಿಯರು. ಸಾಕಷ್ಟು ಸಿಡಿ ಬಿಡುಗಡೆ ಮಾಡಿದ್ದಾರೆ. ಆದರೆ ತುದಿ ಮುಟ್ಟಿಸುವ ಕೆಲಸ ಮಾತ್ರ ಮಾಡಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಕುಮಾರಸ್ವಾಮಿ ಅವರಿಗೂ ಮಂಗಳೂರು ಘಟನೆಗೂ ಏನು ಸಂಬಂಧ?  ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಚುನಾವಣೆ ಸಮಯದಲ್ಲಿ ಸಿಡಿ, ಗಿಡಿ ಅಂತಾ ಹೋರಾಡೋಣ. ಸಿಡಿ ಬಿಡುಗಡೆ ಮೂಲಕ ಪೊಲೀಸ್ ಅಧಿಕಾರಿಗಳ ನೈತಿಕ ಬಲ ಕುಗ್ಗಿಸಿದ್ದೀರಿ. ನೀವು ಸಿಡಿ ಬಿಡುಗಡೆ ಮಾಡಿದ್ದು ಕಟ್ ಆಂಡ್ ಪೇಸ್ಟ್. ಈ ಸಿಡಿ ಜೆಎನ್​ಯುಯಿಂದ ಬಂತಾ? ಅಥವಾ ಪಶ್ಚಿಮ ಬಂಗಾಳದಿಂದ ಬಂತಾ?. ಅದನ್ನು ಯಾರು ಕೊಟ್ಟಿದ್ದಾರೆ ಅನ್ನೋದನ್ನು ಬಹಿರಂಗ ಮಾಡಿ. ಮಂಗಳೂರು ಘಟನೆ ಆಗಿ ಎಷ್ಟು ದಿನ ಆಯ್ತು? ಇಷ್ಟು ದಿನ ಸುಮ್ಮನೇಕೆ ಕುಳಿತಿದ್ರಿ? ವಿದೇಶ ಪ್ರವಾಸ ಮುಗಿಸಿಕೊಂಡು ಈಗ ಬಂದಿದ್ದೀರಿ. ಮಂಗಳೂರಿನಲ್ಲಿ ಕುಮಾರಸ್ವಾಮಿ ಅವರಿಗೆ ರಾಜಕೀಯದ ಯಾವುದೇ ಬೇಸ್ ಇಲ್ಲ. ಆಗೋದು ಇಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ಈ ಸಿಡಿ ಕೊಟ್ಟವರು ಯಾರು? ಅದು ರೆಡಿಯಾಗಿದ್ದು ಕೇರಳದಲ್ಲಾ, ಪಶ್ಚಿಮ ಬಂಗಾಳದಲ್ಲಾ ಅಥವಾ ಜೆಎನ್‌ಯುನಲ್ಲಾ?  ಮೊದಲು ಅದರ ಬಗ್ಗೆ ತನಿಖೆ ಆಗಬೇಕು. ಘಟನೆಯಲ್ಲಿ 85 ಪೊಲೀಸರು ಗಾಯಗೊಂಡಿದ್ದಾರೆ. ಆ ಬಗ್ಗೆ ಒಂದು ಸಣ್ಣ ಸಾಂತ್ವನವನ್ನೂ ಹೇಳಲಿಲ್ಲ ಯಾಕೆ? ಆ ಪೊಲೀಸ್ ಕುಟುಂಬಗಳು ನಿಮ್ಮ ಕಣ್ಣಿಗೆ ಕಾಣಿಸಲಿಲ್ವಾ? ಮಂಗಳೂರಿನ ಪೊಲೀಸರಿಗೆ ಅಭಿನಂದನೆ ಸಲ್ಲಿಸಬೇಕಿತ್ತು. ಮಂಗಳೂರು ಘಟನೆಗೆ ಸಂಬಂಧಪಟ್ಟಂತೆ ಸಾವಿರ ವಿಡಿಯೋಗಳು ಡೌನ್​ಲೋಡ್ ಆಗಿವೆ.  ಯಾರ ಓಲೈಕೆಗೆ ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಹೇಳಬೇಕು. ಪ್ರಕರಣದ ದಿಕ್ಕು ತಪ್ಪಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಕೇರಳದಿಂದ ಪಿಎಫ್ಐ ಗೂಂಡಾಗಳು ಬರ್ತಾರೆ. ಗಲಾಟೆ ಮಾಡಿದ್ರೆ ಸುಮ್ಮನಿರಬೇಕಾ? ಮೆಕ್ಕಾ, ಮದೀನಾಕ್ಕೆ ಹೋದರೆ ಮುಸಲ್ಮಾನರು ಸೈಥಾನ್ ಮೇಲೆ ಕಲ್ಲು ಎಸಿತ್ತಾರೆ. ಹಾಗಾದ್ರೆ ಮಂಗಳೂರಲ್ಲಿ‌ ಸೈತಾನ್ ಯಾರು? ಎಂದು ಪ್ರಶ್ನೆ ಮಾಡಿದರು.

ನೀವು ನಿಮ್ಮ ಶಾಸಕರನ್ನು ನಂಬಲ್ಲ. ಪೊಲೀಸರನ್ನು ನಂಬಲ್ಲ. ಅದಕ್ಕಾಗಿಯೇ ನೀವು ಆಡಳಿತದಿಂದ ಕೆಳಗೆ ಇಳಿಯಬೇಕಾಯ್ತು. ನಿಮಗೆ ಯಾರ ಮೇಲೂ ನಂಬಿಕೆ ಇಲ್ಲ. ಅದಕ್ಮೆ ಅಧಿಕಾರ ಕಳೆದು ಕೊಳ್ಳಬೇಕಾಯ್ತು. ಇಂದಿರಾಗಾಂಧಿ ಅವರು ತಮ್ಮ ತಂದೆಯ ಹೆಸರಲ್ಲಿ ಜೆಎನ್​ಯು ಸ್ಥಾಪಿಸಿದರು. ಆರಂಭದಲ್ಲೇ 45 ದಿನ ವಿವಿಯನ್ನ ಇಂದಿರಾಗಾಂಧಿ ಮುಚ್ಚಿಸಿದ್ದರು. ಯಾವ ಮುಸುಕುಧಾರಿಗಳು ಕಾಶ್ಮೀರದಲ್ಲಿ ಪತ್ತೆಯಾಗಿದ್ರು. ಅವರು ಮಂಗಳೂರಲ್ಲಿ ಪತ್ತೆಯಾಗಿದ್ದಾರೆ. ಕಾಶ್ಮೀರದಲ್ಲಿ ಹೇಗೆ ಘೋಷಣೆ ಕೂಗ್ತಾರೋ ಅದೇ ರೀತಿ ಜೆಎನ್​ಯುನಲ್ಲಿ ಘೋಷಣೆ ಕೂಗ್ತಾರೆ. ಇದೀಗ ಜೆಎನ್​ಯು ಹಾಗೆಯೇ ಮೈಸೂರು ವಿಶ್ವವಿದ್ಯಾಲಯ ಆಗ್ತಿದೆ. ಅನಧಿಕೃತವಾಗಿ ಯಾರೇ ಆಗಲಿ, ಯಾವುದೇ ವಿಶ್ವ ವಿದ್ಯಾಲಯದಲ್ಲಾಗಲಿ ಅವರನ್ನು ಹೊರಗೆ ಹಾಕಲಿ. ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಇದನ್ನು ಓದಿ: ಮಂಗಳೂರು ಗಲಭೆಯಲ್ಲಿ ಪೊಲೀಸರ ದೌರ್ಜನ್ಯದ ಹೊಸ ವಿಡಿಯೋ ಬಿಡುಗಡೆ ಮಾಡಿದ ಮಾಜಿ ಸಿಎಂ ಎಚ್​ಡಿಕೆ

ಬೆಂಗಳೂರಲ್ಲಿ ಎಷ್ಟು ಪಿಜಿಗಳಿವೆ. ಆ ಪಿಜಿಗಳಲ್ಲಿ ಯಾರಾರು ಇದ್ದಾರೆ? ಅವರು ಯಾವ ಯಾವ ಕಾಲೇಜುಗಳಿಗೆ ಓದಲು ಹೋಗ್ತಿದ್ದಾರೆ ಅನ್ನೋದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ್ಬೇಕು ಎಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಿದ ಶೋಭಾ ಕರಂದ್ಲಾಜೆ ಉಡುಪಿ ಚಿಕ್ಕ ಜಿಲ್ಲೆ ಅನ್ಕೋಬಹುದು. ಅಲ್ಲಿ ಡ್ರಗ್ಸ್ ಮಾಫಿಯಾ ಇದೆ. ಅಲ್ಲಿ ಎಲ್ಲವೂ ನಡಿತಿದೆ ಎಂದು ಆರೋಪಿಸಿದರು.
Published by: HR Ramesh
First published: January 10, 2020, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories