ಕಾಂಗ್ರೆಸ್​ ಮುಖವಾಡ ಡಿಕೆಶಿಯಿಂದ ಬಯಲಾಗಿದೆ; ಸಂಸದೆ ಶೋಭಾ ಕರಂದ್ಲಾಜೆ

Sushma Chakre | news18
Updated:October 18, 2018, 9:21 PM IST
ಕಾಂಗ್ರೆಸ್​ ಮುಖವಾಡ ಡಿಕೆಶಿಯಿಂದ ಬಯಲಾಗಿದೆ; ಸಂಸದೆ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
  • News18
  • Last Updated: October 18, 2018, 9:21 PM IST
  • Share this:
ಪರೀಕ್ಷಿತ್​ ಶೇಠ್, ನ್ಯೂಸ್​18 ಕನ್ನಡ

ಉಡುಪಿ (ಅ. 18): 70 ವರ್ಷದಲ್ಲಿ ಕಾಂಗ್ರೆಸ್​ ನಾಯಕರು ಜಾತಿ ಒಡೆಯುವ ಕೆಲಸವನ್ನೇ ಮಾಡಿದ್ದಾರೆ. ಧರ್ಮವನ್ನು ಒಡೆದು ಅಧಿಕಾರ ಪಡೆಯುವ ದುರಾಸೆಯಲ್ಲಿ ಕೈ ನಾಯಕರಿದ್ದಾರೆ. ಕಾಂಗ್ರೆಸ್​ನ ನಿಜವಾದ ಮುಖವಾಡ ಡಿ.ಕೆ. ಶಿವಕುಮಾರ್​ ಅವರಿಂದಲೇ ಬಯಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮಾತನಾಡಿರುವ ಅವರು, ವೋಟ್​ ಬ್ಯಾಂಕ್​ಗಾಗಿ ಧರ್ಮವನ್ನು ಒಡೆಯುವ ಷಡ್ಯಂತ್ರವನ್ನು ಕಾಂಗ್ರೆಸ್​ ಮಾಡಿದೆ. ಸಚಿವರನ್ನು ಛೂ ಬಿಟ್ಟು ಜಾತಿಗಳನ್ನು ಒಡೆಯುವ ಪ್ರಯತ್ನ ಮಾಡಿದ್ದಾರೆ.  ನಾವು ಮಾಡಿದ್ದು ತಪ್ಪಾಗಿದೆ, ಅಕ್ಷಮ್ಯ ಅಪರಾಧ ಮಾಡಿದ್ದೇವೆ ಎಂದು ಸಚಿವ  ಡಿಕೆಶಿಯೇ ಒಪ್ಪಿಕೊಂಡಿದ್ದಾರೆ.  ಕಾಂಗ್ರೆಸ್​ಗೆ ಈಗಲಾದರೂ ಜ್ಞಾನೋದಯವಾಯಿತಲ್ಲ ಎಂಬುದೇ ಸಮಾಧಾನಕರ ವಿಷಯ ಎಂದು  ಹೇಳಿದ್ದಾರೆ.

ಯೂಸ್​ ಆ್ಯಂಡ್​ ಥ್ರೋ ರಾಜಕಾರಣ:

ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣವನ್ನು ಜನರು ತಿಳಿದಿದ್ದಾರೆ. ಹಾಗಾಗಿಯೇ 120 ಸ್ಥಾನವಿದ್ದ ಕಾಂಗ್ರೆಸ್ ಪಕ್ಷವನ್ನು 78ಕ್ಕೆ ಇಳಿಸಿದ್ದಾರೆ. ಈಗ 78 ಸ್ಥಾನ 8ಕ್ಕೆ ಇಳಿಯುವ ಸೂಚನೆ ರಾಜ್ಯದಲ್ಲಿ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಅವರೊಳಗೆ ಕಿತ್ತಾಟ ನಡೆಯುತ್ತಿದೆ. ಸಚಿವರಾದವರಿಗೆ, ಆಗದವರಿಗೂ ಅಸಮಾಧಾನವಿದೆ. ಎಂ.ಬಿ. ಪಾಟೀಲ್, ಕುಲಕರ್ಣಿ ಅವರನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಜಾತಿ ಒಡೆಯಲು ಪ್ರಯತ್ನ ಮಾಡಿದರು. ಆದರೆ, ಇಂದು ಅದೇ ಎಂ.ಬಿ. ಪಾಟೀಲ್ ಅವರನ್ನು ಪಕ್ಷ ದೂರ ಇಟ್ಟಿದೆ.  ಕಾಂಗ್ರೆಸ್ ನ ರಾಜಕಾರಣ ಕೇವಲ ಅವಕಾಶವಾದಿ ರಾಜಕಾರಣ. ಉಪಯೋಗಿಸಿ ಬಿಸಾಡುವುದಷ್ಟೇ ಅವರ ಕೆಲಸ.
ಮಂದಿನ ದಿನಗಳಲ್ಲಿ ಕಾಂಗ್ರೆಸ್ ಅನ್ನು ರಾಜ್ಯದ ಜನ ಕಸದ ಬುಟ್ಟಿಗೆ ಹಾಕುವುದು ಖಂಡಿತ ಎಂದು ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ:  ನೀತಿ ಸಂಹಿತೆ ಉಲ್ಲಂಘನೆ ಆರೋಪ; ರಾಹುಲ್​ ಗಾಂಧಿ ವಿರುದ್ಧ ಶೋಭಾ ಕರಂದ್ಲಾಜೆ ದೂರುಸಾ.ರಾ. ಮಹೇಶ್​ ಮತ್ತು ಜಿ.ಟಿ. ದೇವೆಗೌಡರ ನಡುವೆ ಕಿತ್ತಾಟ ನಡೆಯುತ್ತಿದೆ. ಜೆಡಿಎಸ್​ನ ಒಳಗೊಳಗೇ ಅಸಮಾಧಾನ ಹೆಚ್ಚುತ್ತಿದೆ. ಕಾಂಗ್ರೆಸ್ ನ ಯಾವುದೇ ಶಾಸಕರು ದಸರಾದಲ್ಲಿ ಭಾಗವಹಿಸಿಲ್ಲ. ಅವರೆಲ್ಲರೂ ಕಾರ್ಯಕ್ರಮವನ್ನು ಬಹಿಷ್ಕಾರ ಹಾಕಿದ್ದಾರೆ. ಕಾಂಗ್ರೆಸ್ ನ ಒಬ್ಬ ಕಾರ್ಯಕರ್ತನೂ ದಸರಾ ಸಮಿತಿಗೆ ಹೋಗಿಲ್ಲ. ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ದಸರಾ ಸಮಿತಿಯೇ ರಚನೆ ಆಗಿಲ್ಲ ಎಂದು ಆರೋಪಿಸಿದ್ದಾರೆ.

First published:October 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading