ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಮಧ್ಯವರ್ತಿಗಳೇ ಹೊರತು ರೈತರಲ್ಲ: ಸಚಿವೆ ಶೋಭಾ ಕರಂದ್ಲಾಜೆ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೇಕಡಾ 14 ರಷ್ಟಿದ್ದ ಜಿಡಿಪಿ ಈಗ ಶೇಕಡಾ 20 ಗೆ ಏರಿಕೆಯಾಗಿದೆ,

ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

  • Share this:
ಚಾಮರಾಜನಗರ (ಆ.16) ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರೇ ಅಲ್ಲ ಎಂದು ಕೇಂದ್ರ  ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಚಾಮರಾಜನಗರದಲ್ಲಿ  ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು ದೆಹಲಿ ಯಲ್ಲಿ ಹಲವು ತಿಂಗಳಿಂದ ಹೋರಾಟ ಮಾಡುತ್ತಿರುವವರೆಲ್ಲಾ ಮಧ್ಯವರ್ತಿಗಳೇ ಹೊರತು ರೈತರಲ್ಲ ಎಂದು ದೂರಿದ್ದಾರೆ

ಎಪಿಎಂಸಿ ಲಾಭಿಯ ಮಧ್ಯವರ್ತಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ, ಎಪಿಎಂಸಿಗಳಲ್ಲಿ ಯಾರಿಗೆ ಲಾಭ ಸಿಗುತ್ತಿತ್ತೋ ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಪಂಜಾಬ್ ಮತ್ತು ಹರಿಯಾಣ ರಾಜ್ಯ ಗಳಲ್ಲಿ ಯಾರು  ಹೆಚ್ಚು ಕಮಿಷನ್ ಹೊಡೆಯುತ್ತಿದ್ವರೋ ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರ್ನಾಟಕದಲ್ಲೂ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ ಎಂದು ಆರೋಪಿಸಿದ ಅವರು ಪ್ರತಿಭಟನೆ ಮಾಡುತ್ತಿರುವವರು ಹೇಳುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದರು

ಪ್ರಧಾನಿ ನರೇಂದ್ರ ಮೋದಿಗೆ ದೇಶದಲ್ಲಿ ಸರಿಸಾಟಿಯಾದ ನಾಯಕನಿಲ್ಲ,  ಅವರಂತೆ ದೇಶಭಕ್ತಿ , ಜನಸಾಮಾನ್ಯರು  ಹಾಗು ರೈತರ ಬಗ್ಗೆ ಹೆಚ್ಚಿನ ಕಾಳಜಿ  ಹೊಂದಿರುವ  ನಾಯಕ ಮತ್ತೊಬ್ಬರಿಲ್ಲ ಎಂದ ಅವರು ಬಜೆಟ್ ನಲ್ಲಿ  ಕೃಷಿ ಕ್ಷೇತ್ರಕ್ಕೆ  ಹೆಚ್ಚಿನ ಅನುದಾನ ಮೀಸಲಿಟ್ಟಿದ್ದು ನರೇಂದ್ರ  ಮೋದಿ.  2013-14 ರಲ್ಲಿ ಕೃಷಿಗೆ 29 ಸಾವಿರ ಕೋಟಿ ರೂಪಾಯಿ ಇದ್ದ ಅನುದಾನವನ್ನು ಈಗ 1 ಲಕ್ಷ 23 ಸಾವಿರ ಕೋಟಿ ರೂಪಾಯಿ ಹೆಚ್ಚಿಸಿದ್ದಾರೆ. ಕೇವಲ ಆರೇಳು ವರ್ಷಗಳಲ್ಲಿ  ಶೇಕಡಾ 460 ರಷ್ಟು ಹೆಚ್ಚು ಅನುದಾನವನ್ನು ಕೃಷಿ ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ವಿವರಣೆ ನೀಡಿದರು

ಇದರಿಂದ ದೇಶದ ಜಿಡಿಪಿಗೆ ಕೃಷಿ ಯಿಂದ ಶೇಕಡ 6 ರಷ್ಟು ಸೇರ್ಪಡೆಯಾಗಿದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೇಕಡಾ 14 ರಷ್ಟಿದ್ದ ಜಿಡಿಪಿ ಈಗ ಶೇಕಡಾ 20 ಗೆ ಏರಿಕೆಯಾಗಿದೆ, ಇದೆಲ್ಲವನ್ನು ನೋಡಿದರೆ ನರೇಂದ್ರ ಮೋದಿ ಅವರಿಗೆ ಹೋಲಿಕೆಯಾಗುವ ಮತ್ತೊಬ್ಬ ನಾಯಕನಿಲ್ಲ ರಂದು ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರ ಕೃಷಿಕರ ಪರವಾಗಿದೆ ಎಂದು ಸಮರ್ಥಿಸಿಕೊಂಡರು

ಇದನ್ನು ಓದಿ: ಹಲ್ಲಿನ ಸೆಟ್​ ಒಡೆದು ಹಾಕಿದ ಒಂದೇ ಕಾರಣಕ್ಕೆ 6 ವರ್ಷದ ಬಾಲಕಿ ಪ್ರಾಣ ತೆಗೆದ

2023 ನೇ ಇಸವಿಯನ್ನು ಸಿರಿ ಧಾನ್ಯಗಳ‌ ವರ್ಷವೆಂದು ಆಚರಿಸಲು ನಿರ್ಧರಿಸಲಾಗಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿ ಧಾನ್ಯಗಳ ವರ್ಷಾಚರಣೆಗೆ ಸಂಯುಕ್ತ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಅವರು  ತಿಳಿಸಿದರು. ಕೃಷಿ ಮೂಲ ಸೌಕರ್ಯಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. 10 ಸಾವಿರ ರೈತ ಉತ್ಪಾಧಕ ಘಟಕಗಳನ್ನ ತೆರೆಯಲು ಉದ್ದೇಶಿಸಲಾಗಿದ್ದು ರೈತರ ಆದಾಯ ದ್ವಿಗುಣಗೊಳಿಸುವುದೇ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಸಚಿವರ ಶೋಭಾ ಕರಂದ್ಲಾಜೆ ಹೇಳಿದರು

ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ನಶೀಸಿ ಹೋಗುತ್ತಿದೆ ಎಂಬ ಎಚ್.ಡಿ. ಕೆ ಹೇಳಿಕೆಗೆ ಮೊದಲು ಅವರೆಲ್ಲಿದ್ದಾರೆ ಎಂಬುದನ್ನ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದ ಅವರು,  ಟೀಕೆಗಳಿಗೆ ನಾವು ಉತ್ತರ ಕೊಡುವುದಿಲ್ಲ ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: