ಜನ ಸಾಮಾನ್ಯರಂತೆ ಗೂಡ್ಸ್ ವಾಹನದಲ್ಲಿ ಪ್ರಯಾಣಿಸುವ ಮೂಲಕ ಬೆಳಗಾವಿ ಗಡಿಗೆ ನುಗ್ಗಲು ಕೊಲ್ಲಾಪುರ ಶಿವಸೇನೆ ಅಧ್ಯಕ್ಷ ವಿಜಯ್ ದೇವನೆ (Vijay Devane, Shivsena Leader)) ಪ್ರಯತ್ನ ವಿಫಲ ಯತ್ನ ನಡೆಸಿದ್ದನು. ಉದ್ಧವ್ ಠಾಕ್ರೆ ಬಣದ ಶಿವಸೇನೆ ಪುಂಡ ನಾಯಕನನನ್ನು ಬೆಳಗಾವಿ ಜಿಲ್ಲೆಯ ಗಡಿ (Belagavi Border) ಭಾಗ ನಿಪ್ಪಾಣಿ ಬಳಿಯ ಕೋಗನೋಳಿ ಚೆಕ್ ಪೋಸ್ಟ್ ಬಳಿ ತಡೆಯಲಾಗಿದೆ. ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವಗೆ (MES Maha Melav) ಬ್ರೇಕ್ ಹಿನ್ನಲೆ ಇಂದು ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ವಿಜಯ ದೇವನೆ ಪ್ರಯತ್ನಿಸಿದ್ದನು. ನಿಪ್ಪಾಣಿ ಪೊಲೀಸರು ವಿಜಯ ದೇವನೆ ತಡೆದು ವಾಪಸ್ ಕಳಿಸಿದ್ದಾರೆ.
MESನಿಂದ ನಾಡದ್ರೋಹಿ ಘೋಷಣೆ
ಬೆಳಗಾವಿಯಲ್ಲಿ ಮತ್ತೆ MES ನಾಡದ್ರೋಹಿ ಘೋಷಣೆ ಕೂಗಿದೆ. ಬೆಳಗಾವಿ, ಕಾರವಾರ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕಂತೆ. ಹೌದು ಛತ್ರಪತಿ ಶಿವಾಜಿ ಪಾರ್ಕ್ನಲ್ಲಿ ಸೇರಿದ್ದ MES ಮುಖಂಡರು, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ಉದ್ಧವ್ ಠಾಕ್ರೆ ಕಿರಿಕ್
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತಾಡಿದ ಉದ್ಧವ್, ಸುಪ್ರೀಂ ಆದೇಶ ಬರೋವರೆಗೂ ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶ ಮಾಡಿ. ಕರ್ನಾಟಕ ಸಿಎಂ ಬೊಮ್ಮಾಯಿ ತುಂಬಾ ಅಗ್ರೆಸಿವ್ ಆಗಿದ್ದಾರೆ ಎಂದು ಹೇಳಿದರು.
ಆದ್ರೆ ನಮ್ಮ ಸಿಎಂ ಶಿಂಧೆ ಸೈಲೆಂಟ್ ಆಗಿದ್ದಾರೆ ಎಂದು ಹೇಳಿದ್ರು. ಉದ್ಧವ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಫಡ್ನವಿಸ್ ಒಂದಿಂಚು ಭೂಮಿಗೂ ಹೋರಾಟ ಮಾಡ್ತೀವಿ. ಗಡಿಯಲ್ಲಿರೋ ನಮ್ಮವರನ್ನು ಏಕಾಂಗಿಯಾಗಿ ಬಿಡೋಕಾಗಲ್ಲ ಎಂದರು.
40% ವಿರುದ್ಧ ಕಾಂಗ್ರೆಸ್ ಸಮರ
ಸರ್ಕಾರದ 40 ಪರ್ಸೆಂಟ್ ಕಮಿಷನ್ ವಿರುದ್ಧ ಬೆಳಗಾವಿಯಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ನಾಕಾದಿಂದ ಸಾಗಿದ ಯಾತ್ರೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಸುವರ್ಣ ಸೌಧ ಮುತ್ತಿಗೆ ಹಾಕಲು ಯತ್ನಿಸಿದ್ರು. ಆದ್ರೆ, ಕಾಂಗ್ರೆಸ್ ಕಾರ್ಯಕರ್ತರನ್ನು ಬಳ್ಳಾರಿ ನಾಲಾ ಬ್ರಿಡ್ಜ್ ಬಳಿ ಪೊಲೀಸರು ತಡೆದರು.
ಇದನ್ನೂ ಓದಿ: Belagavi Session: ಸದನದಲ್ಲಿ ಜಲೀಲ್ ಹತ್ಯೆ ಕೇಸ್ ಸದ್ದು; UAPA ಅಡಿ ಪ್ರಕರಣ ದಾಖಲಿಸಲು ಖಾದರ್ ಒತ್ತಾಯ
ಮೊಹಮ್ಮದ್ ನಲಪಾಡ್, ಮೃನಾಲ್ ಹೆಬ್ಬಾಳ್ಕರ್ ಸೇರಿದಂತೆ ಅನೇಕ ಕಾರ್ಯಕರ್ತರರನ್ನ ವಶಕ್ಕೆ ಪಡೆದರು. ಇದೇ ಸಂದರ್ಭದಲ್ಲಿ ಪೊಲೀಸರಿಗೆ ನಲಪಾಡ್ ಅವಾಜ್ ಹಾಕಿದ ಪ್ರಸಂಗ ನಡೆಯಿತು.
ಚರಂಡಿಗೆ ಬಿದ್ದ ಕಾಂಗ್ರೆಸ್ ಕಾರ್ಯಕರ್ತ
ಕಾಂಗ್ರೆಸ್ ಪ್ರತಿಭಟನೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಕಾಂಗ್ರೆಸ್ ಕಾರ್ಯಕರ್ತನೋರ್ವ ಚರಂಡಿಗೆ ಬಿದ್ದಿದ್ದಾನೆ. ಹತ್ತು ಅಡಿ ಆಳದ ಚರಂಡಿಗೆ ಬಿದ್ದ ಯೂಥ್ ಕಾಂಗ್ರೆಸ್ ಕಾರ್ಯಕರ್ತನನ್ನ ಪೊಲೀಸರು ರಕ್ಷಿಸಿದರು.
ರೈತರ ಮುಖಂಡರು ಖಾಕಿ ವಶಕ್ಕೆ
ಪ್ರತಿ ಟನ್ ಕಬ್ಬಿಗೆ 5 ಸಾವಿರದ 500 ರೂಪಾಯಿ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ಪ್ರತಿಭಟನೆ ನಡೆಸ್ತಿದ್ದಾರೆ. ಇಂದು ರೈತರು ಸುವರ್ಣ ಸೌಧ ಮುತ್ತಿಗೆ ಹಾಕಬೇಕಿತ್ತು. ಆದ್ರೆ ರಾತ್ರೋರಾತ್ರಿ ಮನೆಯಲ್ಲಿ ಮಲಗಿದ್ದ ರೈತ ಮುಖಂಡರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದ್ದರಿಂದ ಪೊಲೀಸರು ಮತ್ತು ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯ ಮಾರ್ಕೆಟ್ ಠಾಣೆ ಮುಂದೆ ಪೊಲೀಸರು ರೈತರ ನಡುವೆ ತಳ್ಳಾಟ ನೂಕಾಟ ನಡೆಯಿತು.
ಠಾಣೆ ಮುಂದೆ ಪ್ರತಿಭಟನೆ
ರೈತ ಮುಖಂಡ ಚೂನಪ್ಪ ಪೂಜಾರಿ ಸೇರಿದಂತೆ ಮೂವರನ್ನ ಬಿಡುವಂತೆ ಆಗ್ರಹಿಸಲಾಯ್ತು. ಠಾಣೆ ಮುಂದೆ ಧರಣಿ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದ ರೈತರನ್ನೂ ಪೊಲೀಸರು ವಶಕ್ಕೆ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ