ಅಪ್ಪು ಕಳೆದುಕೊಂಡು ತಿಂಗಳಾಗಿದೆ, ಮತ್ತೆ ದೇವರು ನೋವು ನೀಡುತ್ತಿದ್ದಾನೆ : ಶಿವರಾಂ ಸ್ಥಿತಿ ಕಂಡು ಶಿವಣ್ಣ ಭಾವುಕ!

ಶಿವರಾಜ್​ ಕುಮಾರ್​ ಅವರು ಸಹ ಇಂದು ಆಸ್ಪತ್ರೆಗೆ ಭೇಟಿ ನೀಡಿ ಶಿವರಾಂ ಅವರ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಶಿವರಾಜ್​ಕುಮಾರ್​ ದೇವರು ಕೈ ಬಿಡಲ್ಲ ಹುಷಾರಾಗಿ ಬರ್ತಾರೆ ಅಂತ ಭಾವುಕರಾಗಿದ್ದಾರೆ. 

ಶಿವರಾಜ್​​ಕುಮಾರ್​​

ಶಿವರಾಜ್​​ಕುಮಾರ್​​

  • Share this:
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ(Shivaram) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹನುಮಂತನಗರ ಬಳಿ ಇರುವ ಪ್ರಶಾಂತ್(Prashanth)​  ಆಸ್ಪತ್ರೆಯ ಐಸಿಯುನಲ್ಲಿ ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಟ ಶಿವರಾಂ ಅವರು  ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ನಟ ಶಿವರಾಂ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮೂರು ದಿನಗಳ ಹಿಂದೆಯಷ್ಟೇ ಕಾರು ಅಪಘಾತ(Car Accident) ಸಂಭವಿಸಿತ್ತು. ಕಾರು ಅಪಘಾತದಲ್ಲಿ ನಟ ಶಿವರಾಂ ಗಾಯಗೊಂಡಿದ್ದರು. ಅದಾದ ಬೆನ್ನಲ್ಲೇ ಅಯ್ಯಪ್ಪ(Ayyappa) ಸ್ವಾಮಿ ಪೂಜೆ ಮಾಡಲು ಶಿವರಾಂ ತೆರಳಿದ್ದರು. ಅಲ್ಲಿ ಬಿದ್ದು ಅವರ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ಪರಿಣಾಮ, ಮೆದುಳಿ(Brain)ನಲ್ಲಿ ರಕ್ತಸ್ರಾವ ಉಂಟಾಗಿದೆ. ನಿನ್ನೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಸಿನಿಮಾ ರಂಗದ ಗಣ್ಯರೆಲ್ಲ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಶಿವಾರಂ ಅವರ ಆರೋಗ್ಯ ವಿಚಾರಿಸಲು ನಿನ್ನೆಯಿಂದ ಹಲವು ಗಣ್ಯರು ಪ್ರಶಾಂತ್​ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಶಿವರಾಜ್​ ಕುಮಾರ್​(Shiva rajkumar) ಅವರು ಸಹ ಇಂದು ಆಸ್ಪತ್ರೆಗೆ ಭೇಟಿ ನೀಡಿ ಶಿವರಾಂ ಅವರ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಶಿವರಾಜ್​ಕುಮಾರ್​ ದೇವರು ಕೈ ಬಿಡಲ್ಲ ಹುಷಾರಾಗಿ ಬರ್ತಾರೆ ಅಂತ ಭಾವುಕರಾಗಿದ್ದಾರೆ. 

ದೇವರು ಕೈ ಬಿಡಲ್ಲ ಎಂದ ಶಿವಣ್ಣ!

ನಮ್ಮ ಫ್ಯಾಮಿಲಿಯ ಯಾವುದೇ ಪರಿಸ್ಥಿತಿಯಲ್ಲಿಯೂ ಅವರು ನಮ್ಮ ಜೊತೆ ಇದ್ದರು. ಚಿಕ್ಕ ವಯಸ್ಸಿನಿಂದಲೂ ಶಿವರಾಂ ಅವರನ್ನು ನೋಡಿದ್ದೇವೆ. ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ. ನಮ್ಮ ಕುಟುಂಬದಲ್ಲಿ ಅವರು ಒಬ್ಬರು. ಅವರಿಗೆ ಅಯ್ಯಪ್ಪ ಮೇಲೆ ತುಂಬಾ ಭಕ್ತಿ. ನಾವೆಲ್ಲ ಅಯಪ್ಪ ದೇವಸ್ಥಾನಕ್ಕೆ ಮೂರು ವರ್ಷಗಳ ಹಿಂದೆ ಹೋಗಿದ್ವಿ. ಆಗ ಅವರಿಗೆ 81 ವರ್ಷ ..ಆದ್ರೂ ಯಾವುದೇ ಸಹಾಯವಿಲ್ಲದೆ ಬೆಟ್ಟ ಹತ್ತುತ್ತಿದ್ದರು. ಮನಸ್ಸು ಬಂದಗೆಲ್ಲಾ ಅಯಪ್ಪ ದೇವಸ್ಥಾನಕ್ಕೆ ಅವರು ಹೋಗುತ್ತಿದ್ದರು.  ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಈ ತರ ಆಗಿದೆ ಅಂದ್ರೆ ದೇವರು ಅವರನ್ನ ಕೈ ಬಿಡಲ್ಲ. ಹುಷಾರಾಗಿ ಬರುತ್ತಾರೆ ಅಂತಾ ಶಿವರಾಜ್​ ಕುಮಾರ್​ ನೋವಿನಿಂದ ಮಾತನಾಡಿದ್ದಾರೆ.

ಇದನ್ನು ಓದಿ : ಹಿರಿಯ ನಟ ಶಿವರಾಮ್ ಆರೋಗ್ಯ ಪರಿಸ್ಥಿತಿ ಗಂಭೀರ: ICUನಲ್ಲಿ ಚಿಕಿತ್ಸೆ

‘ಅಪ್ಪು ಕಳೆದುಕೊಂಡ ನೋವು ಮಾಸಿಲ್ಲ, ಆಗಲೇ ಮತ್ತೊಂದು ನೋವು’

ಪುನೀತ್​ ರಾಜ್​ಕುಮಾರ್​ ಕಳೆದುಕೊಂಡು ಇಡೀ ಕರ್ನಾಟಕ ದುಖಃದಲ್ಲಿದೆ. ಪ್ರೀತಿಯ ತಮ್ಮನನ್ನು ಕಳೆದುಕೊಂಡು ಶಿವಣ್ಣ ಕೆಲ ದಿನಗಳಿಂದ ಬಹಳ ನೋವಿನಲ್ಲಿದ್ದಾರೆ. ಇತ್ತ ಶಿವರಾಂ ಅವರ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಇವರನ್ನು ನೋಡಲು ಬಂದಾಗ ಶಿವಣ್ಣ ಅಪ್ಪು ಅವರನ್ನು ನೆನೆಸಿಕೊಂಡಿದ್ದಾರೆ. ನಾವು ತಮ್ಮನ ಕಳೆದುಕೊಂಡ ನೋವಲ್ಲಿ ಇದ್ವಿ..ದೇವರು ನಮ್ಮಗೆ ಯಾಕೆ ಪದೇ ಪದೇ ಇತರ ನೋವು ಕೊಡ್ತರೋ ಗೊತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಅವರನ್ನ ನೋಡೋಕೆ ತುಂಬಾ ಕಷ್ಟ ಆಗುತ್ತೆ. ಮತ್ತೆ ಅವರು ಗುಣಮುಖರಾಗಿ ಬರಬೇಕು ಅಂತ ನಮ್ಮಗೂ ಆಸೆ ಇದೆ. ಖಂಡಿತ ಹುಷಾರಾಗಿ ಬರುತ್ತಾರೆ ಅಂತ ಶಿವಣ್ಣ ಹೇಳಿದ್ದಾರೆ.

ಇದನ್ನು ಓದಿ : ಕಿಚ್ಚನ ಬಳಿಕ ರಾಜಮೌಳಿ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡ ನಟ​: RRR​ ಚಿತ್ರದಲ್ಲಿ ಅರುಣ್​ ಸಾಗರ್​!

‘ಶರಪಂಜರ’, ‘ನಾಗರಹಾವು’, ‘ಶುಭಮಂಗಳ’, ‘ಬಂಗಾರದ ಪಂಜರ’, ‘ಚಲಿಸುವ ಮೋಡಗಳು’, ‘ಶ್ರಾವಣ ಬಂತು’, ‘ಹಾಲು ಜೇನು’, ‘ಹೊಂಬಿಸಿಲು’, ‘ಗುರು ಶಿಷ್ಯರು’ ಮುಂತಾದ ಅನೇಕ ಸಿನಿಮಾಗಳಲ್ಲಿ ಶಿವರಾಂ ಪೋಷಕ ಪಾತ್ರ ನಿರ್ವಹಿಸಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಶಿವರಾಂ ಗುರುತಿಸಿಕೊಂಡಿದ್ದಾರೆ. ನಿನ್ನೆ ಅವರು ಆಸ್ಪತ್ರೆ ಸೇರಿರುವ ವಿಷಯ ತಿಳಿದು ಅನೇಕ ಹಿರಿಯ ಕಲಾವಿದರು ಪ್ರಶಾಂತ್​ ಆಸ್ಪತ್ರೆಗೆ ಭೇಟಿ ನೀಡಿದ್ದರು.
Published by:Vasudeva M
First published: