Shivarajkumar: ಚಾಮರಾಜನಗರದಲ್ಲಿ ಬೈರಾಗಿ ಹವಾ, ರಾಯಭಾರಿಯಾಗಲು ಸಿದ್ಧ ಎಂದ ಶಿವಣ್ಣ

ಒನ್ ಮ್ಯಾನ್ ಷೋ ಮಾಡುವುದು ದೊಡ್ಡ ವಿಷಯವಲ್ಲ, ಅದನ್ನು ಎಲ್ಲರು ಮಾಡಬಹುದು ಆದರೆ ಎಲ್ಲರ ಜೊತೆ ಎಲ್ಲರ ಭಾವನೆಗಳ ಜೊತೆ ಹೋಗುವ ಪಾತ್ರ ಮಾಡುವುದೆಂದರೆ  ನನಗೆ ತುಂಬಾನೆ ಇಷ್ಟ ಎಂದು ಶಿವಣ್ಣ ಹೇಳಿದ್ದಾರೆ.

ಬೈರಾಗಿ ಚಿತ್ರದ ಪ್ರಚಾರ

ಬೈರಾಗಿ ಚಿತ್ರದ ಪ್ರಚಾರ

  • Share this:
ಚಾಮರಾಜನಗರ: ಹಾಟ್ರಿಕ್ ಹೀರೋ (Hattrick Hero) ಡಾ. ಶಿವರಾಜ್‌ಕುಮಾರ್ ಗೆ (Dr. Shivarajkumar) ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಕೊಟ್ಟು ಸಮನಾಗಿ ಹೋಗುವ ಪಾತ್ರ (Character) ಇಷ್ಟವಂತೆ. ಹೀಗಂತ ಸ್ವತಃ ಡಾ. ಶಿವರಾಜ್‌ಕುಮಾರ್ ಅವರೇ ತಮ್ಮ ಮನದಾಳದ ಮಾತು ಹೊರಹಾಕಿದ್ದಾರೆ. ಬೈರಾಗಿ (Bairagi) ಚಲನಚಿತ್ರ ಬಿಡುಗಡೆಯಾಗಿರುವ ಹಿನ್ನಲೆಯಲ್ಲಿ ಚಿತ್ರದ ಪ್ರಮೋಷನ್‌ಗೆ (Promotion) ಚಾಮರಾಜನಗರಕ್ಕೆ (Chamarajanagar) ಆಗಮಿಸಿದ್ದ ಶಿವಣ್ಣ ಒನ್ ಮ್ಯಾನ್ ಷೋ (One Man Show) ಮಾಡುವುದು ದೊಡ್ಡ ವಿಷಯವಲ್ಲ, ಅದನ್ನು ಎಲ್ಲರು ಮಾಡಬಹುದು. ಆದರೆ ಎಲ್ಲರ ಜೊತೆ ಎಲ್ಲರ ಭಾವನೆಗಳ ಜೊತೆ ಹೋಗುವ ಪಾತ್ರ (Character) ಮಾಡುವುದೆಂದರೆ ನನಗೆ ತುಂಬಾನೆ ಇಷ್ಟ ಎಂದು ಶಿವಣ್ಣ ಹೇಳಿದರು.

ಚಿತ್ರದಲ್ಲಿ ಎಲ್ಲರ ಪಾತ್ರಗಳಿಗೂ ಪ್ರಾಮುಖ್ಯತೆ

ಬೈರಾಗಿ ಚಿತ್ರದಲ್ಲಿ ಎಲ್ಲರ ಪಾತ್ರಗಳಿಗು ಪ್ರಾಮುಖ್ಯತೆ ಕೊಟ್ಟಿರೋದು ನನಗೆ ಹಿಡಿಸಿತು,  ಬೈರಾಗಿ ಚಿತ್ರದಲ್ಲಿರುವ ಅಂತಹ ನನ್ನ ಪಾತ್ರ ಬಹಳ ನನಗೆ ಇಷ್ಟ ಆಯ್ತು. ಈ ಚಿತ್ರದಲ್ಲಿ ನನ್ನದೊಂದೆ  ಪಾತ್ರವಲ್ಲ, ಎಲ್ಲಾ ಪಾತ್ರಗಳಿಗು ಮಹತ್ವ ನೀಡಲಾಗಿದೆ, ಧನಂಜಯ್, ಪೃಥ್ವಿ ಅಂಬರ್, ಸಪ್ತ, ಶಶಿಕುಮಾರ್, ಅಂಜಲಿ ಹೀಗೆ ಪ್ರತಿಯೊಬ್ಬರ ಪಾತ್ರಕ್ಕು ಸಂಬಂಧವಿದ್ದು  ಸಮನಾದ ಪ್ರಾಮುಖ್ಯತೆ ನೀಡಲಾಗಿದೆ.

ಎಲ್ಲಿಯೂ ಬೋರ್ ಹೊಡೆಸುವುದಿಲ್ಲ

ನಿರ್ದೇಶಕರ ವಿಜಯ್ ಮಿಲ್ಟನ್,  ಪ್ರೇಕ್ಷಕರಿಗೆ ಎಲ್ಲಿಯೂ ಬೋರ್ ಹೊಡೆಸದಂತೆ, ಮನರಂಜನೆಯ ಜೊತೆಗೆ ಒಳ್ಳೆಯ ಹಾಗು ಮಾನವೀಯತೆಯ ಸಂದೇಶ ಇಟ್ಟು  ಚಿತ್ರವನ್ನು ಉತ್ತಮ ರೀತಿಯಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಪ್ರಶಂಸಿಸಿದರg.

ಇದನ್ನೂ ಓದಿ: Shiva Rajkumar: ಬೈರಾಗಿ 2 ಬಗ್ಗೆ ಸುಳಿವು ಕೊಟ್ಟ ಶಿವಣ್ಣ, ಶಕ್ತಿಧಾಮದ ಮಕ್ಕಳ ಜೊತೆ ಸಿನಿಮಾ ವೀಕ್ಷಿಸಿದ ಹ್ಯಾಟ್ರಿಕ್ ಹೀರೋ

ಬೈರಾಗಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ

ಬೈರಾಗಿ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಒಳ್ಳೆಯ ಸಾಮಾಜಿಕ ಸಂದೇಶ ಇರುವ ಉತ್ತಮ ಕಥೆಯುಳ್ಳ ವಿಭಿನ್ನ ಸಿನಿಮಾ ಇದಾಗಿದೆ, ಮಾಮೂಲಿ ಚಿತ್ರಕಥೆಗೆ ಸಿನಿಮಾ ಮಾಡಬಹುದು. ಆದರೆ ಬೈರಾಗಿ ವಿಭಿನ್ನವಾಗಿದ್ದು ಎಲ್ಲಾ ಪಾತ್ರಗಳಿಗು ಪ್ರಾಮುಖ್ಯತೆ ಕೊಟ್ಟು ಸಮನಾಗಿ ಹೋಗುವುದು ಬಹಳ ವಿಶೇಷವಾಗಿದೆ. ಇಂತಹ ಪಾತ್ರ ನನಗೆ ಮೆಚ್ಚುಗೆ ಆಯ್ತು ಎಂದು ಶಿವಣ್ಣ ಪುನರುಚ್ಚರಿಸಿದರು

ಚಾಮರಾಜನಗರ ರಾಯಭಾರಿಯಾಗಲು ಸಿದ್ದ

ಪ್ರಾಕೃತಿಕ ಶ್ರೀಮಂತಿಕೆಯ ಹಾಗೂ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿರುವ ಚಾಮರಾಜನಗರ ಜಿಲ್ಲೆಯ ಪ್ತವಾಸೋಧ್ಯಮ ಅಭಿವೃದ್ಧಿಗಾಗಿ ಚಾಮರಾಜನಗರ ಜಿಲ್ಲಾಡಳಿತ ಸಿದ್ದಪಡಿಸಿದ್ದ "ಚಲುವ ಚಾಮರಾಜನಗರ " ಪರಿಕಲ್ಪನೆಗೆ  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರಾಯಭಾರಿಯಾಗಿದ್ದರು. ಆದರೆ ಅವರ ಅಕಾಲಿಕ ನಿಧನ ನಂತರ  ಆ ಸ್ಥಾನ ತುಂಬಲು ಡಾ.ಶಿವರಾಜ್‌ಕುಮಾರ್ ಬರಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ರಾಯಭಾರಿ ಆಗುವ ಪ್ರಸ್ತಾಪ ಬಂದರೆ ಒಪ್ಪಿಕೊಳ್ಳುತ್ತೇನೆ

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಣ್ಣ ಅಂತಹ ಭಾಗ್ಯ ಬಂದರೆ ಯಾರು ತಾನೆ ಒಪ್ಪಿಕೊಳ್ಳಲ್ಲ. ಅದು ನನ್ನ ಪುಣ್ಯ ಎಂದು ಭಾವಿಸುತ್ತೇನೆ ಎಂದು ವಿನಮ್ರವಾಗಿ ನುಡಿದರು. ಚಾಮರಾಜನಗರ ಜಿಲ್ಲಾಡತದಿಂದ ಪ್ರಸ್ತಾಪ ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆ ಎನ್ನುವ ಮೂಲಕ  ಚಲುವ ಚಾಮರಾಜನಗರದ  ರಾಯಭಾರಿಯಾಗಲು ಶಿವಣ್ಣ ಸಮ್ಮತಿ ವ್ಯಕ್ತಪಡಿಸಿದರು.

ರಾಜ್‌ಕುಮಾರ್ ಮನೆ ರಿಪೇರಿ ಮಾಡಿಸಿದ್ದೇವೆ

ಗಾಜನೂರಿನಲ್ಲಿರುವ ನಮ್ಮ ತಂದೆ ಡಾ.ರಾಜ್‌ಕುಮಾರ್ ಅವರು  ಜನಿಸಿದ ಮನೆಯನ್ನು ಸ್ಮಾರಕ ಮಾಡುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದ ಅವರು ಶಿಥಿಲಾವಸ್ಥೆಯಲ್ಲಿದ್ದ ಮನೆ ರಿಪೇರಿ ಮಾಡಿಸಿದ್ದೇವೆ  ಎಂದಷ್ಟೇ ಹೇಳಿದರು.

ಇದನ್ನೂ ಓದಿ: Gandhada Gudi: ಶೀಘ್ರದಲ್ಲೇ ರಿಲೀಸ್​ ಆಗಲಿದೆ ಅಪ್ಪು ಕನಸಿನ ಪ್ರಾಜೆಕ್ಟ್​, ‘ಗಂಧದಗುಡಿ‘ ಬಿಡುಗಡೆ ಬಗ್ಗೆ ಹೊಸ ಅಪ್​​ಡೇಟ್ಸ್​

ಬೈರಾಗಿ 2 ಬಗ್ಗೆ ಸುಳಿವು ಕೊಟ್ಟ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ 123ನೇ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಹಾಗೆಯೇ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಲಭಿಸಿದೆ. ಈ ನಡುವೆ ಶಿವಣ್ಣ ಬೈರಾಗಿ 2 ಬಗ್ಗೆ ಸಹ ಸುಳಿವು ನೀಡಿದ್ದಾರೆ. ಈ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್​ ನೋಡಿ ಬಹಳ ಖುಷಿಯಾಗಿದ್ದು, ಬೈರಾಗಿ 2 ಬರಬಹುದು ಎಂದು ಹೇಳಿ ನಗುತ್ತಾ ಹೋಗಿದ್ದಾರೆ. ಒಟ್ಟಾರೆಯಾಗಿ ಶಿವಣ್ಣನ ಈ ಹೇಳಿಕೆ ಖುಷಿ ಕೊಟ್ಟಿದ್ದು, ಹೆಚ್ಚಿನ ಅಪ್​ಡೇಟ್​ಗೆ ಕಾಯುತ್ತಿದ್ದಾರೆ.
Published by:Annappa Achari
First published: