ಶಾಸಕ ರಮೇಶ್​ ಜಾರಕಿಹೊಳಿ ಭೇಟಿಯಾದ ಶಿವನಗೌಡ ನಾಯಕ್​; ಮತ್ತೆ ಗರಿಗೆದರಿತೆ ಆಪರೇಷನ್​ ಕಮಲ?

ಗುರುಮಿಠಕಲ್​ ಶಾಸಕ ನಾಗನಗೌಡ ಮಗ ಶರಣಗೌಡನಿಗೆ ಬಿಜೆಪಿ ಆಪರೇಷನ್​ ನಡೆಸಲು ಮುಂದಾದಾಗ ದೇವದುರ್ಗದ ಶಾಸಕ ಶಿವನಗೌಡ ಅವರೇ ಮಧ್ಯಸ್ಥಿಕೆವಹಿಸಿದ್ದರು.

Seema.R | news18
Updated:March 9, 2019, 2:22 PM IST
ಶಾಸಕ ರಮೇಶ್​ ಜಾರಕಿಹೊಳಿ ಭೇಟಿಯಾದ ಶಿವನಗೌಡ ನಾಯಕ್​; ಮತ್ತೆ ಗರಿಗೆದರಿತೆ ಆಪರೇಷನ್​ ಕಮಲ?
ರಮೇಶ್​ ಜಾರಕಿಹೊಳಿ - ಶಿವನಗೌಡ ನಾಯಕ್​
Seema.R | news18
Updated: March 9, 2019, 2:22 PM IST
ಬೆಂಗಳೂರು (ಮಾ.9): ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಶಾಸಕ ಸ್ಥಾನದ ಅನರ್ಹತೆ ಭೀತಿ ಎದುರುಸುತ್ತಿರುವ ಕಾಂಗ್ರೆಸ್​ ನಾಯಕರಾದ ರಮೇಶ್​ ಜಾರಕಿಹೊಳಿ ನಿವಾಸಕ್ಕೆ ಇಂದು ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್​ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಕಾಂಗ್ರೆಸ್​ ಭಿನ್ನಮತೀಯರ ಗುಂಪಿನಲ್ಲಿ ಕಂಡು ಬಂದಿದ್ದ ರಮೇಶ್​ ಜಾರಕಿಹೊಳಿ ಭೇಟಿ ಹಿಂದೆ ಆಪರೇಷನ್​ ಕಮಲ ನಡಯುತ್ತಿದೆಯಾ ಎಂಬ ಅನುಮಾನ ಮೂಡಿದೆ. ಈಗಾಗಲೇ ಅನರ್ಹತೆಯ ಗಾಳದಿಂದ ತಪ್ಪಿಸಿಕೊಳ್ಳಲು ಉಮೇಶ್​ ಜಾಧವ್​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಮಲ ಪಾಳಯ ಸೇರಿದ್ದಾರೆ. ಈ ನಡುವೆ ಮತ್ತಷ್ಟು ಭಿನ್ನಮತೀಯರಿಗೆ ಬಿಜೆಪಿ ಗಾಳ ಹಾಕುವುದನ್ನು ಮುಂದುವರೆಸಿದೆ. ಏನನ್ಮಧ್ಯೆ ಇಂದು ರಮೇಶ್​ ಜಾರಕಿಹೊಳಿ ಅವರನ್ನು ಶಿವನಗೌಡ ಸಂಪರ್ಕಿಸಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

ಗುರುಮಿಠಕಲ್​ ಶಾಸಕ ನಾಗನಗೌಡ ಮಗ ಶರಣಗೌಡನಿಗೆ ಬಿಜೆಪಿ ಆಪರೇಷನ್​ ನಡೆಸಲು ಮುಂದಾದಾಗ ದೇವದುರ್ಗದ ಶಾಸಕ ಶಿವನಗೌಡ ಅವರೇ ಮಧ್ಯಸ್ಥಿಕೆ ವಹಿಸಿದ್ದರು. ಆಡಿಯೋ ಪ್ರಕರಣದಲ್ಲಿ ಆಪರೇಷನ್​ ಕಮಲ ಜಗಜಾಹೀರಾತಾದರೂ, ಲೋಕಸಭಾ ಚುನಾವಣೆ ಹಿನ್ನೆಲೆ ಮತ್ತೆ ಕಾಂಗ್ರೆಸ್​ ನಾಯಕರಿಗೆ ಗಾಳ ಹಾಕಲು ಮುಂದಾಗಿದ್ದಾರೆಯೇ ಎನ್ನುವ ಅನುಮಾನ ಹುಟ್ಟುಹಾಕಿದೆ.

ಇದನ್ನು ಓದಿ: ಪ್ರಧಾನಿ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ; ಬರ ಪರಿಹಾರಕ್ಕೆ ಮನವಿ

ಈಗಾಗಲೇ ಕಾಂಗ್ರೆಸ್​ ಸಭೆಗೆ, ಸದನಕ್ಕೆ ಗೈರಾದ ಹಿನ್ನೆಲೆ ಕ್ರಮಕ್ಕೆ ಮುಂದಾಗುವಂತೆ ಪಕ್ಷ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದೆ. ಪಕ್ಷಾಂತರ ಕಾಯ್ದೆ ಜಾರಿಯಾಗಿ ಶಾಸಕ ಸ್ಥಾನದಿಂದ ಅನರ್ಹರಾಗುವ ಸಂಭವ ಕೂಡ ಎದುರಾಗಿರುವ ಹಿನ್ನೆಲೆ ಬಿಜೆಪಿ ಅವರನ್ನು ತಮ್ಮತ್ತ ಸೆಳೆಯಲು ಮುಂದಾಗಿದೆ.

ಇತ್ತೀಚಿಗಷ್ಟೇ ಜಾರಕಿಹೊಳಿಯನ್ನು ಕುಮಾರಸ್ವಾಮಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಜಾರಕಿಹೊಳಿ ನನಗೆ ಕಾಂಗ್ರೆಸ್​ ಮೇಲೆ ಸಿಟ್ಟಿದೆ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಎಸ್​ವೈ ರೆಬೆಲ್​ ನಾಯಕ ಜಾರಕಿಹೊಳಿ ಮೇಲೆ ಕಣ್ಣಿಟ್ಟಿದ್ದಾರಾ ಎಂಬ ಅನುಮಾನ ಮೂಡಿದೆ.
Loading...

First published:March 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626