Viral Audio: 200 ಕೋಟಿ ಮಾತು, 5 ನಿಮಿಷದ ಸಂಭಾಷಣೆ! ಏನಿದು ರಹಸ್ಯ? ವೈರಲ್ ಆಗಿರೋ ಆಡಿಯೋ ಯಾರದ್ದು?

5 ನಿಮಿಷಗಳ ಆಡಿಯೋದಲ್ಲಿ ಅಸಾಂವಿಧಾನಿಕ, ಅಶ್ಲೀಲ ಹಾಗೂ ಬರೀ ಕೀಳು ಮಟ್ಡದ ಪದಗಳಿಂದ ಬೈಯ್ಯಲಾಗಿದೆ. “************ ಮಗನೇ, ಚಪ್ಪಲಿಯಿಂದ ಹೊಡಿತಿನಿ.. ಲೋಫರ್ ***** ಮಗನೇ, ರೆಕಾರ್ಡ್ ಮಾಡ್ಕೊಂಡು ಯಾರಿಗೆ ಕೊಡ್ತಿಯಾ ಕೊಡು" ಅನ್ನೊ ಕೀಳು ಮಟ್ಟದ ಪದ ಬಳಕೆಯಾಗಿದೆ.

ಶಾಸಕ ಶಿವನಗೌಡ ನಾಯಕ್

ಶಾಸಕ ಶಿವನಗೌಡ ನಾಯಕ್

  • Share this:
ರಾಯಚೂರು: ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ (BJP MLA) ಶಿವನಗೌಡ ನಾಯಕ್ (Shivanagowda Nayak) ಅವರದ್ದು ಎನ್ನಲಾದ ಆಡಿಯೋ (Audio) ಒಂದು ಇದೀಗ ವೈರಲ್ (Viral) ಆಗಿದೆ. ಚೀಫ್ ಇಂಜಿನಿಯರ್ (Chief Engineer) ಒಬ್ಬರಿಗೆ ಅಸಾಂವಿಧಾನಿಕ ಪದ ಬಳಸಿ, ಅಶ್ಲೀಲವಾಗಿ ಬೈಯ್ದಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಕಾಲುವೆ ನವೀಕರಣ ಕಾಮಗಾರಿ, ಬಿಲ್ ಕ್ಲಿಯರ್ (Bill Clear) ವಿಚಾರವಾಗಿ ಆಕ್ರೋಶಗೊಂಡಿರೋ ಶಾಸರರು, ಮುಖ್ಯ ಇಂಜಿನಿಯರ್‌ಗೆ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಇದು ಸಚಿವ ಸಂಪುಟ (Cabinet) ವಿಸ್ತರಣೆ ಬೆನ್ನಲ್ಲೆ ಆಕಾಂಕ್ಷಿಗಳ ಕಾಲೆಳೆಯೋ ತಂತ್ರವಾಗಿದ್ದು, ಪ್ರತಿಸ್ಪರ್ಧಿಗಳಿಗೆ ಸಚಿವ ಸ್ಥಾನ ತಪ್ಪಿಸಲು ಮಾಡಿರುವ ಮೆಗಾ ಪ್ಲಾನ್ (Mega Plan) ಅಂತಲೂ ಹೇಳಲಾಗುತ್ತಿದೆ.

ಮುಖ್ಯ ಇಂಜಿನಿಯರ್‌ಗೆ ಬೈಯ್ದರಾ ಶಾಸಕರು?

ಶಾಸಕ ಶಿವನಗೌಡ ನಾಯಕ್‌ ಅವರು ಚೀಫ್ ಇಂಜಿನಿಯರ್ ಒಬ್ಬರಿಗೆ ಬೈಯ್ದಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ. ಗುತ್ತಿಗೆದಾರ ಕಂಪೆನಿಗೆ 200 ಕೋಟಿ ಬಿಲ್ ಕ್ಲಿಯರ್ ಮಾಡಿದ್ದಕ್ಕೆ ಶಾಸಕರು ಆಕ್ರೋಶಗೊಂಡಿದ್ದು, ಚೀಫ್ ಇಂಜಿನಿಯರ್ ಶಿವುಕುಮಾರ್ ಅನ್ನೋರಿಗೆ ಬೈಯಲಾಗಿದೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

2 ತಿಂಗಳ ಹಿಂದಿನ ಆಡಿಯೋ ಇದೀಗ ವೈರಲ್

ಇನ್ನು ಸುಮಾರು 2 ತಿಂಗಳ ಹಳೆಯ ಆಡಿಯೋ ಸದ್ಯ ವೈರಲ್ ಆಗಿದೆ. ಕಾಲುವೆ ನವೀಕರಣ ಕಾಮಗಾರಿ ಹಾಗೂ ಬಿಲ್ ಕ್ಲಿಯರ್ ವಿಚಾರವಾಗಿ ಆಕ್ರೋಶಗೊಂಡಿದ್ದ ಶಿವನಗೌಡ ನಾಯಕ್ ಹಾಗೂ ಶಿವುಕುಮಾರ್ ಅವರು ಕೃಷ್ಣ ಭಾಗ್ಯ ಜಲ ನಿಗಮದ ಚೀಫ್ ಇಂಜಿನಿಯರ್ ಆಗಿದ್ದಾಗ ನಡೆದಿದ್ದ ಸಂಭಾಷಣೆ ಇದು ಎನ್ನಲಾಗಿದೆ.

ಇದನ್ನೂ ಓದಿ: Karthi Chidambaram: ಕಾಂಗ್ರೆಸ್ ಮುಖಂಡ ಚಿದಂಬರಂ ಬಂಗಲೆಗಳ ಮೇಲೆ CBI ದಾಳಿ! ಪ್ರಕರಣ ದಾಖಲು

ಕಾಮಗಾರಿ ಗುತ್ತಿಗೆ ಪಡೆದಿದ್ದು ಯಾರು?

1 ರಿಂದ 18 ನೇ ಡಿಸ್ಟ್ರಿಬ್ಯುಷನ್ ಕಾಲುವೆಗಳ ನವೀಕರಣ ಕಾಮಗಾರಿ ವಿಚಾರವಾಗಿ ಕಿತ್ತಾಟ ನಡೆದಿದೆ. ನವೀಕರಣದ ಸುಮಾರು 1446 ಕೋಟಿ ರೂ. ಮೊತ್ತದ ಕಾಮಗಾರಿ ನಡೆದಿದ್ದು, ಬಿಜೆಪಿ ಮಾಜಿ ಶಾಸಕ‌ ಮಾನಪ್ಪ ವಜ್ಜಲ್ ಸಹೋದರ ನಾಗಪ್ಪ ವಜ್ಜಲ್ ಈ ಕಾಮಗಾರಿಯ ಗುತ್ತಿಗೆದಾರ. ಇವರ ಮಾಲೀಕತ್ವದ ಖಾಸಗಿ ಕಂಪೆನಿ ಮೂಲಕ ನಡೆಯುತ್ತಿರೊ ನವೀಕರಣ ಕಾಮಗಾರಿಯಾಗಿದ್ದು, ಚೀಫ್ ಇಂಜಿನಿಯರ್ ಶಿವುಕುಮಾರ್, ಒಟ್ಟು 200 ಕೋಟಿ ಬಿಲ್ ಕ್ಲಿಯರ್ ಮಾಡಿರೊ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪಿಸಲಾಗಿದೆ.

ವೈರಲ್ ಆಗಿರುವ ಆಡಿಯೋದಲ್ಲಿ ಏನಿದೆ?

5 ನಿಮಿಷಗಳ ಆಡಿಯೋದಲ್ಲಿ ಅಸಾಂವಿಧಾನಿಕ, ಅಶ್ಲೀಲ ಹಾಗೂ ಬರೀ ಕೀಳು ಮಟ್ಡದ ಪದಗಳಿಂದ ಬೈಯ್ಯಲಾಗಿದೆ. “************ ಮಗನೇ, ಚಪ್ಪಲಿಯಿಂದ ಹೊಡಿತಿನಿ.. ಲೋಫರ್ ***** ಮಗನೇ, ರೆಕಾರ್ಡ್ ಮಾಡ್ಕೊಂಡು ಯಾರಿಗೆ ಕೊಡ್ತಿಯಾ ಕೊಡು" ಅನ್ನೊ ಕೀಳು ಮಟ್ಟದ ಪದ ಬಳಕೆಯಾಗಿದೆ.

“ಕಾಮಗಾರಿ ಆಗದೇ ಬಿಲ್ ಕ್ಲಿಯರ್ ಮಾಡ್ತೀಯಾ?”

ಕಾಮಗಾರಿಯೇ ಆಗಿಲ್ಲ ಹೇಗೆ ಬಿಲ್ ಕ್ಲಿಯರ್ ಮಾಡಿರುವೆ..? ಬೋಗಸ್ ಬಿಲ್ ಮಾಡ್ತಿಯಾ..? ಅಂತ ಶಾಸಕರು ತರಾಟೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ತಿಳಿಸದೇ ಬಿಲ್ ಕ್ಲಿಯರ್ ಮಾಡಿದ್ದಕ್ಕೆ ಶಾಸಕರು ಆಕ್ರೋಶಗೊಂಡಿದ್ದು, ಅಶ್ಲೀಲ ಶಬ್ದ ಬಳಸಿ ಬೈಯ್ದಿದ್ದಾರೆ.

ಶಾಸಕರು ಎಂಜಿನಿಯರ್ ನಡುವಿನ ಸಂಭಾಷಣೆ

"ಏನೋ.. ಏನೋ ರಿಪೋರ್ಟ್ ಹಾಕ್ತಿನಿ‌ ಅಂತ ಹೇಳ್ತಿದ್ಯೆಂತೆ" ಅಂತ ಶಾಸಕರು ಕೇಳಿದ್ದಕ್ಕೆ, ಚೀಫ್ ಇಂಜಿನಿಯರ್, "ತಾವೀಗ ಕೆಟ್ಟದಾಗಿ ಬೈಯ್ದಿದ್ರಲ್ಲ ಅದನ್ನ ಎಂಡಿಯವರಿಗೆ, ಗೌರ್ನಮೆಂಟ್‌ಗೆ ಒಂದ್ ಕೊಡ್ತೇನೆ ಸರ್" ಎಂದಿದ್ದಾರೆ. ಅದಕ್ಕೆ ಕೋಪಗೊಂಡ ಶಾಸಕರು, "ಲೋಫರ್ **** ಮಗನೇ, ಏನ್ ರಿಪೋರ್ಟ್ ಹಾಕ್ತಿದೆಲೆ‌ ನೀನು? ಸರ್ಕಾರದ ದುಡ್ಡು ಅಂದ್ರ ಏನ್ ನಿಮ್ಮಪ್ಪನ ಮನಿದು ಅಂತ ತಿಳಕಂಡಿದಿಯಾ ನೀನು..?" ಅಂತ ಗದರಿದ್ದಾರೆ.

ಇದನ್ನೂ ಓದಿ: Kodagu: ಶಾಲಾ ಆವರಣದಲ್ಲಿ ತ್ರಿಶೂಲದೀಕ್ಷೆ, ಕೊಡಗಿನ ಇಬ್ಬರು ಶಾಸಕರ ವಿರುದ್ಧ ದೂರು

ಒಟ್ಟು 5 ನಿಮಿಷಗಳ ಆಡಿಯೋದಲ್ಲಿ ಅಶ್ಲೀಲವಾಗಿ ಬೈಯ್ಯಲಾಗಿದೆ. ಇದು ಶಾಸಕ ಶಿವನಗೌಡ ನಾಯಕ್ ಅವರದ್ದೇ ಆಡಿಯೋ ಎನ್ನಲಾಗಿದೆ. ಆದರೆ ಇದು ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಆಕಾಂಕ್ಷಿಗಳ ಕಾಲೆಳೆಯೋ ತಂತ್ರವಾಗಿದ್ದು, ಪ್ರತಿಸ್ಪರ್ಧಿಗಳಿಗೆ ಸಚಿವ ಸ್ಥಾನ ತಪ್ಪಿಸಲು ಮಾಡಿರುವ ಮೆಗಾ ಪ್ಲಾನ್ ಅಂತಲೂ ಹೇಳಲಾಗುತ್ತಿದೆ.
Published by:Annappa Achari
First published: