• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Murugha Shri: ಪೊಲೀಸ್ ಭದ್ರತೆಯೊಂದಿಗೆ ಮಠಕ್ಕೆ ಆಗಮಿಸಿದ ಸ್ವಾಮೀಜಿ; ಮುರುಘಾ ಶ್ರೀಗಳು ಹೇಳಿದ್ದೇನು?

Murugha Shri: ಪೊಲೀಸ್ ಭದ್ರತೆಯೊಂದಿಗೆ ಮಠಕ್ಕೆ ಆಗಮಿಸಿದ ಸ್ವಾಮೀಜಿ; ಮುರುಘಾ ಶ್ರೀಗಳು ಹೇಳಿದ್ದೇನು?

ಮುರುಘಾ ಶ್ರೀ

ಮುರುಘಾ ಶ್ರೀ

ಮುರುಘಾ ಶರಣರ ಬಂಧನ ಸುದ್ದಿ ಬೆನ್ನಲ್ಲೇ ಸ್ವಾಮೀಜಿಗಳು (Murugha Mutt) ಮಠಕ್ಕೆ ಆಗಮಿಸಿದ್ದಾರೆ. ಬಂಧನದ ಸುದ್ದಿ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಸ್ವಾಮೀಜಿ ಪರ ವಕೀಲರು, ಶ್ರೀಗಳ ಬಂಧನ ಆಗಿಲ್ಲ. ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆ ಹಾವೇರಿಗೆ ತೆರಳಿದ್ದಾರೆ ಅಂತ ಹೇಳಿದರು.

  • Share this:

ಮುರುಘಾ ಮಠದ ಶಿವಮೂರ್ತಿ ಶರಣರನ್ನು (Murugha Mutt Shivamurthy Swamiji) ಬಂಧಿಸಿರುವ ಸುದ್ದಿಯ ಬೆನ್ನಲ್ಲೇ ಮಠ ಆವರಣದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು (Police) ನಿಯೋಜನೆ ಮಾಡಲಾಗಿದೆ. ಇತ್ತ ಬೆಳಗ್ಗೆ ಮಠಕ್ಕೆ ಬಂದ ಪೊಲೀಸರು ಸ್ಥಳದಲ್ಲಿಯೇ ಇದ್ದರು. ಇನ್ನು ಮುರುಘಾ ಶರಣರ ಬಂಧನ ಸುದ್ದಿ ಬೆನ್ನಲ್ಲೇ ಸ್ವಾಮೀಜಿಗಳು (Murugha Mutt) ಮಠಕ್ಕೆ ಆಗಮಿಸಿದ್ದಾರೆ. ಬಂಧನದ ಸುದ್ದಿ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಸ್ವಾಮೀಜಿ ಪರ ವಕೀಲರು, ಶ್ರೀಗಳ ಬಂಧನ ಆಗಿಲ್ಲ. ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆ ಹಾವೇರಿಗೆ ತೆರಳಿದ್ದಾರೆ ಅಂತ ಹೇಳಿದರು.


ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದ ಶಿವಮೂರ್ತಿ ಸ್ವಾಮೀಜಿ, ಯಾವುದೇ ಪ್ರತಿಕ್ರಿಯೆ ನೀಡದೇ ಮಠದೊಳಗೆ ಹೋದರು. ಮಠದ ಮೊದಲ ಮಹಡಿಯಲ್ಲಿ ಬಂದ ಸ್ವಾಮೀಜಿ ಭಕ್ತರತ್ತ ಕೈ ಬೀಸಿ ಮಾತನಾಡಿದರು.


ಇದೊಂದು ನೋವಿನ ಸಂಗತಿ


ಇದೊಂದು ನೋವಿನ ಸಂಗತಿಯಾಗಿದ್ದು, ಎಲ್ಲಾ ಭಕ್ತರು ಅತಂಕಪಡಬೇಕಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕಿದೆ. ಒಳಗಡೆ ನಡೆಯುತ್ತಿದ್ದ ಪಿತೂರಿಗಳು, ಈಗ ಹೊರಗಡೆ ನಡೆಯುತ್ತಿವೆ. ತಾರ್ಕಿಕವಾಗಿ ಅಂತ್ಯವಾಗಬೇಕಿದೆ. ಇದೊಂದು ನೋವಿನ ಸಂಗತಿಯಾಗಿದೆ.


ಇದನ್ನೂ ಓದಿ:  Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು


ಇದು ಪಲಯಾನವಾದ ಅಲ್ಲ


ಈ ನೆಲದ ಕಾನೂನು ಗೌರವಿಸುವಂತಹ ಮಠಾಧೀಶನಾಗಿದ್ದಾನೆ. ಇದರಲ್ಲಿ ಯಾವುದೇ ಪಲಯಾನವಾದ ಇಲ್ಲ. ಯಾವುದೇ ಉಹಾಪೋಗಳಿಗೆ ಅವಕಾಶ ಇಲ್ಲ. ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಮುರುಘಾ ಮಠ ಒಂದಾನೊಂದು ಕಾಲದಲ್ಲಿ ಚಲಿಸುವ ನ್ಯಾಯಾಲಯವಾಗಿತ್ತು.


ತನಿಖೆಗೆ ಸಂಪೂರ್ಣ ಸಹಕಾರ


ನಾವು ಸಹ ನ್ಯಾಯದ ಸ್ಥಾನದಲ್ಲಿದ್ದೇವೆ. ಭಕ್ತರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಕಾನೂನು ಗೌರವಿಸೋಣ. ಇಂತಹ ನೋವಿನ ಸಂಗತಿಯಲ್ಲಿ ಮಠದ ಭಕ್ತರು ಜೊತೆಗಿದ್ದಾರೆ. ತನಿಖೆಗ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ. ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು.


ಒಡನಾಡಿ ಸಂಸ್ಥೆ ಮುಖ್ಯಸ್ಥರ ಹೇಳಿಕೆ


24 ಗಂಟೆಯಲ್ಲಿ ಸಂತ್ರಸ್ತರ ಹೇಳಿಕೆಯನ್ನು ಸಿಆರ್​ಪಿಸಿ ಸೆಕ್ಷನ್ 164ರ ಅಡಿ ದಾಖಲಿಸಬೇಕಿತ್ತು. ಆದ್ರೆ 52 ಗಂಟೆ ಕಳೆದರೂ ಇದುವರೆಗೂ ಹೇಳಿಕೆ ದಾಖಲಿಸಿರೋದು ಅನುಮಾನಕ್ಕೆ ಕಾರಣವಾಗಿದೆ. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು ಎಂಬುವುದು ನಮ್ಮ ಉದ್ದೇಶ. ನಾನು ನಂಬಿದ್ದ ಸ್ವಾಮೀಜಿ ವಿಕೃತಕಾಮಿ ಆಗಿದ್ದು ಹೇಗೆ ಎಂಬುದರ ಬಗ್ಗೆ ನನಗೆ ಆತಂಕವಾಗಿದೆ ಎಂದು ಒಡನಾಡಿ ಸಂಸ್ಥೆಯ ಪರಶು ಆಕ್ರೋಶ ಹೊರಹಾಕಿದರು.


ಬಂಧನ ಆಗಿದೆಯೋ ಇಲ್ಲವೋ ಎಂಬುವುದು ನನಗೆ ಗೊತ್ತಿಲ್ಲ. ಮಕ್ಕಳಿಗೆ ಅದೆಷ್ಟು ಬಾರಿ ಕೌನ್ಸಿಲಿಂಗ್ ಮಾಡುತ್ತಾರೆ. ಈ ಪ್ರಕರಣದ ಬೆನ್ನಲ್ಲೇ ಸುಮಾರು 30 ವಿದ್ಯಾರ್ಥಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ ಅಂದ್ರೆ ಅಲ್ಲಿಯ ಜನರಿಗೆ ತನಿಖಾಧಿಕಾರಿಗಳ ಮೇಲೆ ನಂಬಿಕೆ ಇಲ್ಲ ಎಂದರ್ಥ ಅಲ್ಲವಾ ಎಂದು ಸ್ಪೋಟಕ ಹೇಳಿಕೆ ನೀಡಿದರು.


ಯಾರ ಜೊತೆಯೂ ರಾಜಿ ಇಲ್ಲ


ನನ್ನ ಹೆಗಲ ಮೇಲೆ ಯಾರೂ ಬಂದೂಕು ಇರಿಸಲು ಸಾಧ್ಯವಿಲ್ಲ. ಮಕ್ಕಳು ನನ್ನ ಬಳಿ ಬಂದಾಗ ಅವರ ಧ್ವನಿಯನ್ನು ಕೇಳಿದ್ದೇವೆ. ತಂದೆಯಾದವನು ವಿಕೃತಿ ಆಗಿರೋದು ಕೇಳಿ ಶಾಕ್ ಆಗಿತ್ತು. ನಾನು ಯಾರ ಜೊತೆಯೂ ರಾಜಿ ಆಗಲ್ಲ. ಬೇಕಾದ್ರೆ ನನ್ನ ಸಂಸ್ಥೆ ಇಂದೇ ಮುಚ್ಚಿ ಹೋದ್ರೂ ನನಗೆ ಚಿಂತೆ ಇಲ್ಲ ಎಂದು ಹೇಳಿದರು.


ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳ ಲೈಂಗಿಕ ಕಿರುಕುಳದ ಬಗ್ಗೆ 6 ತಿಂಗಳ ಹಿಂದೆಯೇ ಗೊತ್ತಿದ್ರೆ HDK ದೂರು ದಾಖಲಿಸಲಿಲ್ಲ ಏಕೆ?


ಬಾಲಕಿಯರ 164 ಹೇಳಿಕೆ ಬಳಿಕ ಏನಾಗಬಹದು?


ಬಾಲಕಿಯರು ಹೇಳಿಕೆ ನೀಡಿದ ಬಳಿಕ ನ್ಯಾಯಾಲಯ ಆರೋಪಿಯ ಬಗ್ಗೆ ಕೇಳಬಹುದು. ಆರೋಪಿ ಬಂಧನ ಆಗಿದ್ದಾರಾ ಅಂತ ತನಿಖಾಧಿಕಾರಿಗೆ ಕೇಳಬಹುದು. ಬಂಧನ ಆಗಿಲ್ಲ ಅಂತ ಹೇಳಿದರೆ. ಯಾಕೆ ಬಂಧಿಸಿಲ್ಲ ಅಂತಾನೂ ಕೋರ್ಟ್ ತನಿಖಾಧಿಕಾರಿಗೆ ಕೇಳಬಹುದು. ಜೊತೆಗೆ ಆರೋಪಿಯ ಬಂಧನ ಮಾಡುವಂತೆ ಕೋರ್ಟ್ ಸೂಚನೆಯೂ ನೀಡಬಹುದು. ಪೋಕ್ಸೋ ಪ್ರಕರಣದಲ್ಲಿ ಕೇಸ್ ದಾಖಲಾದರೆ ಆರೋಪಿಯ ಬಂಧನ ಆಗುತ್ತದೆ. ಆದ್ರೆ ಈ ಪ್ರಕರಣದಲ್ಲಿ ಎರಡೂ ದಿನಗಳಾದರೂ ಆರೋಪಿಯ ಬಂಧನ ಆಗಿಲ್ಲ.

Published by:Mahmadrafik K
First published: