HOME » NEWS » State » SHIVAMOGGA RANGAYANA WILL BE STARTS FROM MARCH 6TH HRNS LG

ಶಿವಮೊಗ್ಗ: ಮಾರ್ಚ್ 6ರಿಂದ ನಾಲ್ಕು ದಿನಗಳ ಕಾಲ ಮಹಿಳಾ ರಂಗೋತ್ಸವ

ಮಾರ್ಚ್ 7 ರಂದು ಭಾನುವಾರ ಸಂಜೆ 6.30 ಕ್ಕೆ ಬೆಂಗಳೂರಿನ ರಂಗಪಯಣ ಪ್ರಸ್ತುತಿಯ ರಾಜ್‌ಗುರು ಹೊಸಕೋಟೆ ನಿರ್ದೇಶನದ, ಪ್ರವೀಣ್ ಸೂಡ ರಚನೆಯ ‘ಗುಲಾಬಿ ಗ್ಯಾಂಗ್-ಭಾಗ 01’ ನಾಟಕ ಪ್ರದರ್ಶನ ನಡೆಯಲಿದೆ.

news18-kannada
Updated:March 3, 2021, 3:30 PM IST
ಶಿವಮೊಗ್ಗ: ಮಾರ್ಚ್ 6ರಿಂದ ನಾಲ್ಕು ದಿನಗಳ ಕಾಲ ಮಹಿಳಾ ರಂಗೋತ್ಸವ
ರಂಗಾಯಣ
  • Share this:
ಶಿವಮೊಗ್ಗ(ಮಾ.03):  ಶಿವಮೊಗ್ಗ ರಂಗಾಯಣ ಮೊದಲ ಬಾರಿಗೆ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 6 ರಿಂದ 9 ರವರೆಗೆ ನಾಲ್ಕು ದಿನಗಳ ಕಾಲ ಮಹಿಳಾ ನಾಟಕೋತ್ಸವ ‘ಜೀವನ್ಮುಖಿ’ ಆಯೋಜಿಸಿದೆ.

ಈ‌‌ ಬಗ್ಗೆ ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಮಾಹಿತಿ ನೀಡಿದರು.

ಮಹಿಳೆಯರನ್ನು ರಂಗ ಭೂಮಿಯತ್ತ ಸೆಳೆದು ಕನ್ನಡ ರಂಗ ಭೂಮಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಎಂದರು.  ನಾಲ್ಕು ದಿನಗಳ ಉತ್ಸವದಲ್ಲಿ ಮಹಿಳಾ ವಿಚಾರಗಳನ್ನು ಪ್ರಧಾನವಾಗಿ ಹೊಂದಿರುವ ಅತ್ಯುತ್ತಮ ನಾಟಕಗಳ ಪ್ರದರ್ಶನ, ಏಕ ವ್ಯಕ್ತಿ ರಂಗ ಪ್ರಯೋಗ, ವಿಚಾರಗೋಷ್ಠಿ ಮತ್ತು ರಂಗಗೀತೆಗಳ ಕಾರ್ಯ ಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಮಾರ್ಚ್ 6 ರಂದು ಶನಿವಾರ ಖ್ಯಾತ ವೈದ್ಯೆ ರಜನಿ ಎ ಪೈ ಅವರು ಕಾರ್ಯಕ್ರಮ ಉದ್ಘಾಟಿಸುವರು.  ಮುಖ್ಯ ಅತಿಥಿಗಳಾಗಿ ಮೇಯರ್ ಸುವರ್ಣ ಶಂಕರ್, ರಂಗ ಸಮಾಜ ಸದಸ್ಯ ಆರ್.ಎಸ್.ಹಾಲಸ್ವಾಮಿ ಭಾಗವಹಿಸುವರು. ನಿರ್ದೇಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸುವರು. ಉದ್ಘಾಟನಾ ಸಮಾರಂಭದ ನಂತರ ರಂಗ ಕಲಾವಿದೆ ಗಾಯಕಿ ಸವಿತಕ್ಕ ಅವರು ಅಭಿನಯಿಸಿದ, ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ಏಕವ್ಯಕ್ತಿ ನಾಟಕ ‘ಉಧೋ ಉಧೋ ಎಲ್ಲವ್ವ’ ಪ್ರದರ್ಶನಗೊಳ್ಳಲಿದೆ.

ಮೈಸೂರಿನ ಬೀದಿ ಬೀದಿಗಳಲ್ಲಿ ಅಂಬಾರಿ ಸಂಚಾರ; 250 ಕೊಟ್ಟರೆ ಯಾರು ಬೇಕಾದ್ರೂ ಅಂಬಾರಿ ಏರಬಹುದು..!

ಮಾರ್ಚ್ 7 ರಂದು ಭಾನುವಾರ ಸಂಜೆ 6.30 ಕ್ಕೆ ಬೆಂಗಳೂರಿನ ರಂಗಪಯಣ ಪ್ರಸ್ತುತಿಯ ರಾಜ್‌ಗುರು ಹೊಸಕೋಟೆ ನಿರ್ದೇಶನದ, ಪ್ರವೀಣ್ ಸೂಡ ರಚನೆಯ ‘ಗುಲಾಬಿ ಗ್ಯಾಂಗ್-ಭಾಗ 01’ ನಾಟಕ ಪ್ರದರ್ಶನ ನಡೆಯಲಿದೆ.

ಮಾರ್ಚ್ 8 ರಂದು ಸೋಮವಾರ ಬೆಳಿಗ್ಗೆ 10.15 ರಿಂದ `ಕನ್ನಡರಂಗ ಭೂಮಿಯಲ್ಲಿ ಮಹಿಳೆಯರು ಅಂದು ಮತ್ತು ಇಂದು’ ಎಂಬ ವಿಚಾರವಾಗಿ ಸಂವಾದ ಏರ್ಪಡಿಸಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಹೆಗ್ಗೋಡಿನ ರಂಗಕರ್ಮಿ ವಿದ್ಯಾ ಹೆಗಡೆ ಭಾಗವಹಿಸುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ನೃತ್ಯ ಕಲಾವಿದೆ ಮತ್ತು ಮನೋ ವೈದ್ಯರಾದ ಡಾ.ಕೆ.ಎಸ್.ಪವಿತ್ರ ವಹಿಸುವರು. ಬೆಂಗಳೂರಿನ ರಂಗಕರ್ಮಿ ನಯನ ಸೂಡ ಭಾಗವಹಿಸುವರು.ವಿಚಾರಗೋಷ್ಠಿಯ ನಂತರ ಯುವ ರಂಗಕರ್ಮಿ ಕು.ಮೇದಿನಿ ಕೆಳಮನೆ ಇವರು ನಿರ್ದೇಶಿಸಿದ, ವೈದೇಹಿ ಕಥೆ ಆಧಾರಿತ ‘ದಾಳಿ’ ಕಿರು ಚಲನ ಚಿತ್ರ ಪ್ರದರ್ಶನ ನಡೆಯಲಿದೆ  ಎಂದು ಮಾಹಿತಿ ನೀಡಿದರು.  ಮಧ್ಯಾಹ್ನ 12.30 ರಿಂದ 1.30 ರವರೆಗೆ ಶಿವಮೊಗ್ಗದ ಮಧುರ ಕಲಾವೃಂದ ವತಿಯಿಂದ ಗಾಯಕಿ ನಾಗರತ್ನ ನೇತೃತ್ವದಲ್ಲಿ ರಂಗ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸಂಜೆ 6.30 ರಿಂದ ಗುಲಾಬಿ ಗ್ಯಾಂಗ್ ಭಾಗ-02 ನಾಟಕ ಪ್ರದರ್ಶನವಿರುತ್ತದೆ ಎಂದರು.

ಮಾರ್ಚ್  9 ರಂದು ಮಂಗಳವಾರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಮ್.ಎಲ್.ವೈಶಾಲಿ ಮತ್ತು ಅಪರ ಜಿಲ್ಲಾಧಿಕಾರಿ .ಜಿ.ಅನುರಾಧ ಭಾಗವಹಿಸುವರು. ರಂಸಮಾಜದ ಸದಸ್ಯೆ ಡಾ.ಹೆಲನ್ ಉಪಸ್ಥಿತರಿರುವರು.  ಸಭಾ ಕರ‍್ಯಕ್ರಮದ ನಂತರ ಶಿವಮೊಗ್ಗದ ಸಹಚೇತನ ನಾಟ್ಯಾಲಯ ವತಿಯಿಂದ ನೃತ್ಯಗುರು ಸಹನಾ ಚೇತನ್ ನಿರ್ದೇಶನದಲ್ಲಿ ಡಾ.ಎ.ಜಿ.ಗೋಪಾಲಕೃಷ್ಣ ಕೊಳ್ತಾಯ ರಚನೆಯ ಶರಣೆ ಅಕ್ಕ ಮಹಾದೇವಿಯ ಜೀವನ ಗಾಥೆಯ ‘ದಾಕ್ಷಿಣಾತ್ಯ ತಪಸ್ವಿನಿ’ ನೃತ್ಯ ನಾಟಕ ಪ್ರದರ್ಶನ ನಡೆಯಲಿದೆ.

ಮಹಿಳಾ ರಂಗೋತ್ಸವದ ನಾಟಕ ಪ್ರದರ್ಶನಗಳಿಗೆ ಪ್ರತಿ ನಾಟಕಕ್ಕೆ ರೂ.30 ಪ್ರವೇಶ ಶುಲ್ಕವಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಅವರು ಮನವಿ ಮಾಡಿದರು. ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.
Published by: Latha CG
First published: March 3, 2021, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories