• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivamogga: ಫ್ಲೆಕ್ಸ್ ಗಲಾಟೆಗೆ ಟ್ವಿಸ್ಟ್​, ಗಲಭೆಗೂ ಮುನ್ನ ಜನರನ್ನ ಸೇರಿಸುವ ದೃಶ್ಯ ವೈರಲ್; ಪೊಲೀಸರ ಮೇಲೆ ರಾಜಕೀಯ ಒತ್ತಡ ಇದೆಯಾ?

Shivamogga: ಫ್ಲೆಕ್ಸ್ ಗಲಾಟೆಗೆ ಟ್ವಿಸ್ಟ್​, ಗಲಭೆಗೂ ಮುನ್ನ ಜನರನ್ನ ಸೇರಿಸುವ ದೃಶ್ಯ ವೈರಲ್; ಪೊಲೀಸರ ಮೇಲೆ ರಾಜಕೀಯ ಒತ್ತಡ ಇದೆಯಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತ ಗಲಾಟೆ ಶಾಂತವಾಗುತ್ತಲೇ ಶಿವಮೊಗ್ಗ ಪೊಲೀಸರಿಗೆ ಸಾಲು ಸಾಲು ಸವಾಲುಗಳು ಎದುರಾಗಿವೆ. ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರಲಿದ್ದು, ಸಾರ್ವಜನಿಕ ಆಚರಣೆಗೆ ಅನುಮತಿ ನೀಡಬೇಕಾ ಅಥವಾ ಬೇಡವಾ ಎಂಬುದರು ಬಗ್ಗೆ ಚರ್ಚೆಗಳು ನಡೆದಿವೆ.

  • Share this:

    ಶಿವಮೊಗ್ಗ ನಗರ (Shivamogga City) ಸಹಜ ಸ್ಥಿತಿಗೆ ಮರಳಿದ್ದು, ನಿನ್ನೆಗಿಂತಲೂ ಇಂದು ವಾಹನಗಳ ಸಂಖ್ಯೆ ಮತ್ತು ಜನರ ಸಂಚಾರ ಹೆಚ್ಚಳವಾಗಿದೆ. ರಸ್ತೆ ಬದಿಯ ಸಣ್ಣ ಸಣ್ಣ ಅಂಗಡಿಗಳು (Shops Open) ಓಪನ್ ಮಾಡಲಾಗಿದ್ದು, ವ್ಯವಹಾರ ವಹಿವಾಟು ನಡೆದಿದೆ. ಇಂದು ಸೆಕ್ಷನ್ 144 (Section 144) ಅಂತ್ಯವಾಗಲಿದ್ದು, ನಿನ್ನೆಯಿಂದಲೇ ಶಾಲಾ-ಕಾಲೇಜುಗಳು (School And Colleges) ಆರಂಭಗೊಂಡಿವೆ. ಮತ್ತೆ 144 ಸೆಕ್ಷನ್ ಮುಂದುವರಿಸುವ ಸಾಧ್ಯತೆಗಳು ಕಡಿಮೆ ಇವೆ. ಇತ್ತ ಅಮೀರ್ ಅಹ್ಮದ್ ಸರ್ಕಲ್‌ನಲ್ಲಿ ಪೊಲೀಸರನ್ನು (Police) ನಿಯೋಜಿಸಲಾಗಿದೆ.  ಇಡೀ‌ ಶಿವಮೊಗ್ಗದಾದ್ಯಂತ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಹಳ ಪರಿಶೀಲನೆ ನಡೆಸಲಾಗುತ್ತಿದೆ. ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮೇಲೆಯೂ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.


    ಶಿವಮೊಗ್ಗದಲ್ಲಿ ಗಲಾಟೆ ವೇಳೆ ಮುಸ್ಲಿಂ ಮುಖಂಡನ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಅಮೀರ್ ಅಹ್ಮದ್ ಸರ್ಕಲ್​ನಲ್ಲಿ ನಡೆದ ಗಲಾಟೆ ವೇಳೆ ಈ ಹೇಳಿಕೆ ನೀಡಲಾಗಿತ್ತು.


    ಮುಸ್ಲಿಂ ಮುಖಂಡನ ಹೇಳಿಕೆ ವೈರಲ್


    ಯಾರೂ ಎಲ್ಲಿಗೂ ಹೋಗ್ಬೇಡಿ, ನಿಂತ್ಕೊಳ್ರಪ್ಪ. ನಿಮಗಿಂತ ಹೆಚ್ಚು ನಮಗೆ ರೊಚ್ಚಿದೆ. ಯಾರೂ ಕಲ್ಲು ಎತ್ತಿಕೊಳ್ಳಬಾರದು. ನಿಮಗೆ ತೊಂದರೆ ಆಗಬಾರದು, ನಾವು ಹೋರಾಟ ಮಾಡ್ತೀವಿ. ಯಾರೂ ಅಲ್ಲಾಗೋಸ್ಕರ ಕಲ್ಲು ಎತ್ತಿಕೊಳ್ಳಬಾರದು. ಏನಾದ್ರೂ ಮಾಡಿದ್ರೆ ನಿಮ್ಮ ಜೀವನ ಬರ್ಬಾದ್ ಆಗಿ ಹೋಗುತ್ತೆ. ನೀವೆಲ್ಲಾ ಸುಮ್ಮನೆ ನಿಂತ್ಕೊಂಡಿರಿ ಎಂದು ಹೇಳಲಾಗಿದೆ. ಈ ವೇಳೆ ಮುಸ್ಲಿಂ ಮುಖಂಡ ಅವಾಚ್ಯ ಪದ ಸಹ ಬಳಸಿದ್ದಾರೆ.


    ಇದನ್ನೂ ಓದಿ:  Hubballi: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಿಂದೂಪರ ಸಂಘಟನೆಗಳ ಪಟ್ಟು; ಅಂದು ಉಮಾ ಭಾರತಿ ಸಿಎಂ ಸ್ಥಾನ ಕಳೆದುಕೊಂಡಿದ್ದು ಹೇಗೆ?


    ಇತ್ತ ಗಲಾಟೆ ಶಾಂತವಾಗುತ್ತಲೇ ಶಿವಮೊಗ್ಗ ಪೊಲೀಸರಿಗೆ ಸಾಲು ಸಾಲು ಸವಾಲುಗಳು ಎದುರಾಗಿವೆ. ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರಲಿದ್ದು, ಸಾರ್ವಜನಿಕ ಆಚರಣೆಗೆ ಅನುಮತಿ ನೀಡಬೇಕಾ ಅಥವಾ ಬೇಡವಾ ಎಂಬುದರು ಬಗ್ಗೆ ಚರ್ಚೆಗಳು ನಡೆದಿವೆ. ಈ ಸಂಬಂಧ ADGP ಅಲೋಕ್ ಕುಮಾರ್ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿವೆ.


    ಸಾರ್ವಜನಿಕ ಪ್ರದೇಶದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಇಂದಿನಿಂದಲೇ ಎಲ್ಲಾ ಪೊಲೀಸ್ ಸಿಬ್ಬಂದಿ ಅಲರ್ಟ್ ಆಗಿರುವಂತೆ ADGP ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ. ಗಣೇಶ ಕೂರಿಸಲು ಹೇಗೆ ಭದ್ರತೆ ಇರಬೇಕು ಎಂಬುದರ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ.  ಕೆಲ ಷರತ್ತುಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ ನೀಡುವ ಕುರಿತು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.


    ಪೊಲೀಸರ ಚಿಂತನೆಗಳೇನು?


    *ವಾರ್ಡ್​ಗೆ ಒಂದೇ ಗಣಪತಿ ಕೂಡಿಸಲು ಅನುಮತಿ


    *ಮೆರವಣಿಗೆ ಬೇಡ ಎಂಬ ಷರತ್ತು ಹಾಕಿ ಅನುಮತಿ


    *ಅನುಮತಿ ಕೊಟ್ಟ ಸ್ಥಳದಲ್ಲಿ ಪೊಲೀಸರು ಭದ್ರತೆ


    *ಆಯೋಜಕರ ಬಳಿ ಬಾಂಡ್ ಪೇಪರ್ ಬರೆಸಿಕೊಳ್ಳಲು ಚರ್ಚೆ


    ಪೊಲೀಸರ ಮೇಲೆ ರಾಜಕೀಯ ಒತ್ತಡ ಇದೆಯಾ?


    ಇನ್ನು ಶಿವಮೊಗ್ಗ ಗಲಾಟೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಾಲ್ಕು ಎಫ್​ಐಆರ್ ದಾಖಲಾಗಿದೆ. ನಾಲ್ಕು ಎಫ್​ಐಆರ್​ಗಳ ಪೈಕಿ ಮೂರರಲ್ಲಿ ಯಾರನ್ನು ಬಂಧಿಸಿಲ್ಲ. ಪ್ರೇಮ್ ಸಿಂಗ್ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಅಬ್ದುಲ್ ರೆಹಮಾನ್, ನದೀಂ, ಜಬೀವುಲ್ಲಾ, ಶಕೀಲ್ ಎಂಬವರನ್ನು ಬಂಧಿಸಸಲಾಗಿದೆ.


    ಇನ್ನುಳಿದ ಮೂರು ಎಫ್​ಐಆರ್​ಗೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸರು ಯಾರನ್ನೂ ಸಹ ಬಂಧಿಸಿಲ್ಲ. ಈ ಬೆಳವಣಿಗೆ ಗಮನಿಸಿದ್ರೆ ಪೊಲೀಸರ ಮೇಲೆ ರಾಜಕೀಯ ಒತ್ತಡ ಇದೆಯಾ ಅನ್ನೋ ಅನುಮಾನಗಳು ವ್ಯಕ್ತವಾಗಿವೆ.


    ಇದನ್ನೂ ಓದಿ:  Kodagu: ಮನೆ ಕೊಡಿ ಅಥವಾ ದಯಾಮರಣಕ್ಕೆ ಅವಕಾಶ ಕೊಡಿ- ಮಂಗಳಮುಖಿಯ ಮನವಿ!


    ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಕೇಸ್​​, ಸದ್ದಾಂ ಹುಸೇನ್ ಮೇಲಿನ ಹಲ್ಲೆ ಸಂಬಂಧ ಇದುವರೆಗೂ ಯಾರ ಬಂಧನ ಆಗದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


    ಒಂದಿಷ್ಟು ಅನುಮಾನ


    ಅಮೀರ್ ಅಹ್ಮದ್ ಸರ್ಕಲ್ ಗಲಾಟೆಯ ವಿಡಿಯೋಗಳಿವೆ. ಘಟನೆ ನೋಡಿದ ಹಲವು ಪ್ರತ್ಯಕ್ಷದರ್ಶಿಗಳೂ ಇದ್ದಾರೆ. ಖುದ್ದು ಕೆಲ ಪೊಲೀಸರು ಗಲಾಟೆಯ ವಿಡಿಯೋಗಳನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಇಷ್ಟೆಲ್ಲಾ ಎವಿಡೆನ್ಸ್ ಇದ್ರೂ ಆರೋಪಿಗಳ ಬಂಧನ ಮಾತ್ರ ಆಗಿಲ್ಲ.

    Published by:Mahmadrafik K
    First published: