ಶಿವಮೊಗ್ಗ: ಉನ್ನತ ವ್ಯಾಸಾಂಗ (Education) ಮಾಡುತ್ತಿದ್ದ ಯುವತಿಯೊಬ್ಬಳನ್ನು ಕಿಡ್ನಾಪ್ (Kidnap Case) ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎನ್ನಲಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು (Police) ಯುವತಿಯನ್ನು ಪತ್ತೆ ಹಚ್ಚಿದ್ದು, ಆಕೆಯನ್ನು ಯಾರು ಕಿಡ್ನಾಪ್ ಮಾಡಿಲ್ಲ ಎನ್ನುವುದು ಬಯಲಾಗಿದೆ. ವಿದ್ಯಾರ್ಥಿನಿ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು (Conversion) ಹೋಗಿ, ಕಿಡ್ನಾಪ್ ಕಥೆ ಸೃಷ್ಟಿಸಿದ್ದಾಳೆ ಎಂದು ತಿಳಿದುಬಂದಿದೆ. ಆಕೆ ಕ್ರಿಶ್ಚಿಯನ್ ಧರ್ಮಕ್ಕೆ (Christian Religion) ಮತಾಂತರವಾಗಲು ಪ್ರಯತ್ನಿಸಿದ್ದಳು. ಸದ್ಯ ಯುವತಿಯನ್ನು ರಕ್ಷಿಸಿರುವ ಪೊಲೀಸರು ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.
ಕಿಡ್ನಾಪ್ ಪ್ರಕರಣ ದಾಖಲು
ದಾವಣಗೆರೆಯ ಚೆನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಯುವತಿ, ಉನ್ನತ ವ್ಯಾಸಾಂಗಕ್ಕಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಲೇಜಿಗೆ ಸೇರಿಕೊಂಡಿದ್ದಳು. ಆದರೆ ಆಕೆಯ ಪೋಷಕರು ಬೆಳಿಗ್ಗೆ ತಮ್ಮ ಮಗಳನ್ನು ಯಾರೋ ಕಿಡ್ನಾಪ್ ಮಾಡಿದ್ದು, 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಶಿವಮೊಗ್ಗದ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೇರಳ ಮೂಲದ ಕ್ರಿಶ್ಚಿಯನ್ ವಿದ್ಯಾರ್ಥಿನಿಯರಿಂದ ಪ್ರಭಾವ
20 ವರ್ಷದ ಯುವತಿ ಹೈಸ್ಕೂಲ್ ಓದುವಾಗಿನಿಂದಲೂ ಕ್ರಿಶ್ಚಿಯನ್ ಧರ್ಮದ ಬಗ್ಗೆ ಒಲವು ಹೊಂದಿದ್ದಳು. ಚೆನ್ನಗಿರಿಯ ನವಚೇತನ ಕ್ರಿಶ್ಚಿಯನ್ ಶಾಲೆಯಲ್ಲಿ ಓದಿದ್ದ ಆಕೆ,
ಪಿಯುಸಿ ಬಳಿಕ ಫಿಸಿಯೋ ಥೆರಫಿ ವ್ಯಾಸಾಂಗಕ್ಕಾಗಿ ಶಿವಮೊಗ್ಗದ ನಂಜಪ್ಪ ನರ್ಸಿಂಗ್ ಕಾಲೇಜು ಸೇರಿದ್ದಳು. ನರ್ಸಿಂಗ್ ಕಾಲೇಜಿನಲ್ಲೂ ಕೇರಳ ಮೂಲದ ಕ್ರಿಶ್ಚಿಯನ್ ವಿದ್ಯಾರ್ಥಿನಿಯರ ಸಂಪರ್ಕದಿಂದ ತೀವ್ರ ಪ್ರಭಾವಿತಳಾಗಿದ್ದಳು. ಇದೇ ಕಾರಣಕ್ಕೆ ತಾನೂ ಮುಂಬೈ ಹೋಗಿ ಮತಾಂತರಗೊಳ್ಳಲು ನಿರ್ಧರಿಸಿದ್ದಳೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮುಂಬೈಗೆ ಪರಾರಿಯಾಗಲು ಕಿಡ್ನಾಪ್ ನಾಟಕ
ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮುಂಬೈನ ಕ್ಯಾಥೊಲಿಕ್ ಚರ್ಚ್ಗೆ ಸೇರಿ, ಸನ್ಯಾಸಿನಿಯಾಗಿ ಸೇವೆ ಮಾಡಲು ನಿರ್ಧರಿಸಿದ್ದಾಳೆ. ಆದರೆ ಮುಂಬೈನಂತಹ ದೊಡ್ಡ ನಗರದಲ್ಲಿ ವಾಸಿಸಲು ಹಣದ ಅವಶ್ಯಕತೆ ಇದ್ದ ಹಿನ್ನೆಲೆ ಕಿಡ್ನಾಪ್ ನಾಟಕ ಸೃಷ್ಟಿಸಿದ್ದಾಳೆ. ತಾನೇ ಪೋಷಕರಿಗೆ ತನ್ನ ಮೊಬೈಲ್ನಿಂದಲೇ ಕರೆ ಮಾಡಿ 20 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.
ಇದನ್ನೂ ಓದಿ: Horror News: ಪೆನ್ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!
ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದ ಪೊಲೀಸರು
ಯುವತಿ ತನ್ನ ಬ್ಯಾಂಕ್ ಖಾತೆಯಿಂದ 5 ಸಾವಿರ ಹಣ ಡ್ರಾ ಮಾಡಿ, ಶಿವಮೊಗ್ಗದಿಂದ ಮುಂಬೈಗೆ ಹೊರಟಿದ್ದಳು. ಆಕೆ ಶಿವಮೊಗ್ಗ- ತೀರ್ಥಹಳ್ಳಿ- ಶೃಂಗೇರಿ-ಬೆಂಗಳೂರು ಮೂಲಕ ಹುಬ್ಬಳ್ಳಿಗೆ ಹೋಗಿದ್ದಳು. ಹುಬ್ಬಳ್ಳಿಯಿಂದ ಮುಂಬೈಗೆ ಹೋಗಲು ತಯಾರಿ ಕೂಡ ಮಾಡಿಕೊಂಡಿದ್ದಳು. ಈ ವೇಳೆ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಕೌನ್ಸೆಲಿಂಗ್ ಬಳಿಕ ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ