ರಾಜ್ಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಶಿವಮೊಗ್ಗದ (Shivamogga) ಬಜರಂಗದಳ ಕಾರ್ಯಕರ್ತ (Bajarangadal) ಹರ್ಷ ಹತ್ಯೆ ಕೇಸ್ಗೆ ಸಂಬಂಧಪಟ್ಟ ಆರೋಪಿಗಳು ಜೈಲಿನಿಂದ ಟಿಕ್ಟಾಕ್ ಮಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹರ್ಷ(Harsha) ಸಹೋದರಿ ಸುದ್ದಿಗೋಷ್ಠಿ (Pressmeet) ನಡೆಸಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹ ಮಾಡಿದ್ದಾರೆ.
ತಪ್ಪಿತಸ್ಥರನ್ನು ಕೆಲಸದಿಂದ ವಜಾ ಮಾಡಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಷ ಸಹೋದರಿ, ನಾನು ಗೃಹ ಸಚಿವರಿಗೆ 10 ನಿಮಿಷಗಳ ಸಮಯ ಕೇಳಿದ್ದೆ. ಆದರೆ ಗೃಹ ಸಚಿವರು ಸಮಯ ನೀಡಲಿಲ್ಲ. ತಮ್ಮನನ್ನು ಕಳೆದುಕೊಂಡ ನನಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದು ನಮಗೆ ಕುಗ್ಗಿಸಿದೆ. 10 ನಿಮಿಷ ಟೈಮ್ ನೀಡದಿರುವುದು ಎಲ್ಲೋ ಒಂದು ಕಡೆ ಬೇಜಾರಾಗುತ್ತದೆ ಎಂದು ನೋವನ್ನು ಹೊರಹಾಕಿದ್ದಾರೆ.
ತಪ್ಪಿತಸ್ಥರನ್ನು ಕೇವಲ ವರ್ಗಾವಣೆ ಮಾಡಬೇಡಿ. ಅವರನ್ನ ಕೆಲಸದಿಂದ ತೆಗೆಯಿರಿ ಎಂದು ಕೇಳಿಕೊಂಡಿದ್ದೆ. ವಿಡಿಯೋ ಮಾಡಲು ಬಿಟ್ಟ ಕಾರಾಗೃಹ ಪೊಲೀಸರನ್ನು ಕೆಲಸದಿಂದ ವಜಾ ಮಾಡಬೇಕು. ಅವರು ತುಂಬಾ ದೊಡ್ದವರು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ನನಗೆ ಯಾವುದೇ ಸ್ವಾರ್ಥ ಇಲ್ಲ, ನನ್ನ ತಮ್ಮನ ಸಾವಿಗೆ ನ್ಯಾಯ ಬೇಕು. ರಾತ್ರಿ 8 ಗಂಟೆಗೆ ಒಬ್ಬ ಹೆಣ್ಣು ಮಗಳು ಹೋದಾಗ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವರನ್ನು ವರ್ಗಾವಣೆ ಮಾಡಿದ್ದೀರಾ? ಇಲ್ಲವೇ ಕೆಲಸದಿಂದ ತೆಗೆಯುತ್ತೀರಾ ಅದನ್ನಾದರೂ ಹೇಳಿ ಎಂದು ಕೇಳಿದ್ದೆ ಅಷ್ಟೇ. ಗೃಹ ಸಚಿವರು ನಮಗೆ ಆಪ್ತರು ಎಂದು ಅದೇ ನಂಬಿಕೆ ಮೇಲೆ ನಾನೂ ಹೋಗಿದ್ದೆ. ಆದರೆ ಅಲ್ಲಿ ನಮಗೆ ನಂಬಿಕೆ ಹೋಯಿತು ಎಂದಿದ್ದಾರೆ.
ಹರ್ಷ ತೀರಿಕೊಂಡಾಗ ನಮ್ಮ ಮನೆಗೆ ಬಂದಾಗ, ನಿಮಗೆ ಕಷ್ಟ ಬಂದಾಗ ನನ್ನ ಬಳಿ ಬನ್ನಿ ಎಂದು ಹೇಳಿದ್ದರು. ಹೀಗಾಗಿ ನಾನು ಅವರ ಬಳಿ ಹೋಗಿದ್ದೆ.ಅವರು ನನ್ನ ಬಳಿ ಹೆಣ್ಣು ಮಗಳು ಎಂದು ನಿಧಾನವಾಗಿ ಮಾತನಾಡಬೇಕಿತ್ತು. ನಮಗೆ ನ್ಯಾಯ ಸಿಗಲ್ವಾ? ನಾವು ಹರ್ಷನ ಸಾವಿಗೆ ನ್ಯಾಯ ಕೇಳುತ್ತಿದ್ದೆವೆ ಅಷ್ಟೇ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಿಕ್ಷೆ ಬೇಡಿ ಶಾಲಾ ಮಕ್ಕಳಿಗೆ ಯೂನಿಫಾರ್ಮ್ ಕೊಡ್ತೀವಿ - ಬಿ ಸಿ ನಾಗೇಶ್ಗೆ ಟಾಂಗ್
ಜೈಲಿನಿಂದ ಟಿಕ್ಟಾಕ್ ಮಾಡಿದ್ದ ಆರೋಪಿಗಳು
ಜೈಲಿನಲ್ಲಿ ಆರೋಪಿಗಳಿಗೆ ನೀಡಿದ ರಾಜಾತಿಥ್ಯ ಖಂಡಿಸಿ ನಾಳೆ ಪ್ರತಿಭಟನೆ ನಡೆಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು. ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿಗಳು ಜೈಲಿಂದಲೇ ಟಿಕ್ ಟಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಆಟ ಆಡುತ್ತಿದ್ದಾರಾ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಜೈಲಿಂದಲೇ ಮನೆಯವರೊಂದಿಗೆ ವಿಡಿಯೋ ಕಾಲ್ ಮಾಡಿ ಕೂಡ ಮಾತನಾಡುತ್ತಾರೆ ಎನ್ನಲಾಗಿದೆ.
ಆರೋಪಿಗಳಾದ ಮಹಮ್ಮದ್ ಖಾಸಿಪ್, ಸಯ್ಯದ್ ನದೀಮ್, ಸೈಯದ್ ಫಾರೂಕ್, ರಿಹಾನ್ ಷರೀಪ್, ಆಸಿಪ್ ಉಲ್ಲಾ ಖಾನ್, ಅಬ್ದುಲ್ ಅಪಾನ್, ಮಹಮ್ಮದ್ ಇರ್ಪಾನ್, ಸಹೀದ್ ಉಲ್ಲಾ ಸಾರ್ಪಿ, ವಾಸಿಮ್ ಖಾನ್, ನಿಹಾರ್, ಮಗ್ದುಬ್ ಎಂಬುವರು ಈಗಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇದೀಗ ಅವರಿಗೆ ಅಲ್ಲಿ ರಾಜಾತಿಥ್ಯ ಸಿಗುತ್ತಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ನನ್ನ ಪ್ರಾಣ ಇರೋವರೆಗೂ ಈದ್ಗಾ ಮೈದಾನ ತೆಗೆಯಲು ಸಾಧ್ಯವೇ ಇಲ್ಲ - ಜಮೀರ್ ಅಹ್ಮದ್
ಜೈಲಿನಲ್ಲಿರುವ ಹತ್ಯೆ ಆರೋಪಿಗಳು ರಂಜಾನ್ ಹಬ್ಬದಂದು ಟಿಕ್ ಟಾಕ್ ಮಾಡಿ ಸ್ನೇಹಿತರಿಗೆ ಶುಭಾಶಯದ ವಿಡಿಯೋ ಕಳಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ವಿಡಿಯೋ ಕಾಲ್ ಮೂಲಕ ಸ್ನೇಹಿತರಿಗೆ ಹಾಗೂ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ