• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Veer Savarkar Vs Tipu Sultan: ಮುಸ್ಲಿಂ ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾಗಿಲ್ಲ: ಕೆ ಎಸ್ ಈಶ್ವರಪ್ಪ

Veer Savarkar Vs Tipu Sultan: ಮುಸ್ಲಿಂ ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾಗಿಲ್ಲ: ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ನಮ್ಮ ಶಿವಮೊಗ್ಗದವರು ಶಾಂತಿಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆ ಇರಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ ಎಂದರು.

  • Share this:

ಶಿವಮೊಗ್ಗದಲ್ಲಿ (Shivamogga) ಸಾವರ್ಕರ್ ವರ್ಸಸ್ ಟಿಪ್ಪು ಫ್ಲೆಕ್ಸ್ (Veer Savarkar Vs Tipu Sultan) ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರನ್ನ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು. ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು. ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಮುಸ್ಲಿಂ (Muslim) ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾವಣೆ ಆಗಿಲ್ಲ. ಹಿಂದೂ ಸಮಾಜ (Hindu Community) ಎದ್ದರೆ ಮುಸ್ಲಿಂರ ಕಥೆ ಏನಾಗುತ್ತದೆ? ಅದಕ್ಕಾಗಿ ಶಿವಮೊಗ್ಗದ ಮುಸ್ಲಿಂ ಮುಖಂಡರು (Muslim Leaders) ನಿಮ್ಮ ಯುವಕರಿಗೆ ಬುದ್ಧಿ ಹೇಳಿ. ಇಲ್ಲವಾದಲ್ಲಿ ಸರ್ಕಾರದಿಂದಲೇ ಅವರ ವಿರುದ್ಧ ಕ್ರಮ ಆಗುತ್ತದೆ ಎಂದು ಹೇಳಿದರು.


ಇದರಲ್ಲಿ ಕಾಂಗ್ರೆಸ್ ಮೇಲೆ ನಾನು ನೇರ ಆರೋಪ ಮಾಡ್ತಿದ್ದೇನೆ. ಕಾಂಗ್ರೆಸ್ ಕಾರ್ಪೋರೇಟರ್​ ಗಂಡನಿಂದ ಈ ಘಟನೆ ನಡೆದಿದೆ. ಇವನ ವಿರುದ್ಧ ಸಿದ್ದರಾಮಯ್ಯ ಹಾಗೂ ಡಿಕೆಶಿ ಕ್ರಮ ತೆಗೆದುಕೊಳ್ಳಬೇಕು. ಈ ಘಟನೆಯಿಂದ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತವರಣ ಶುರುವಾಯ್ತು. ಈ ಮಧ್ಯೆ ಗಾಂಧಿಬಜಾರ್ ನಲ್ಲಿ ಪ್ರೇಮಸಿಂಗ್ ಹಾಗೂ ಶರವಣ ಹೋಗ್ತಿರುವ ಸಂದರ್ಭದಲ್ಲಿ 6 ಜನ ಮುಸ್ಲಿಂ ಗೂಂಡಾಗಳು ಪ್ರೇಮ್ ಸಿಂಗ್​ಗೆ ಚಾಕು ಹಾಕಿದ್ದಾರೆ.


ಕೊಲೆ ಮಾಡುವ ಎಸ್​​ಡಿಪಿಐ ಮನಸ್ಥಿತಿ ಬದಲಾಗಿಲ್ಲ


ಹೊಟ್ಟೆಗೆ ಚಾಕು ಬಿದ್ದಿರೋದ್ರಿಂದ ನರನಾಡಿಗಳು ಕಟ್ ಆಗಿವೆ. ಬದುಕುಳಿಯೋದು ಕಷ್ಟ ಎನ್ನಲಾಗ್ತಿದೆ. ಪೊಲೀಸರು ಬಹಳ ಶ್ರಮಹಾಕಿ ಹುಡುಕುಹಾಕುವ ಸಂದರ್ಭದಲ್ಲಿ ಫೈರಿಂಗ್ ಒಬ್ಬನ ಕಾಲಿಗೆ ಮಾಡಿದ್ದಾರೆ. ಇಬ್ಬರನ್ನ ಅರೆಸ್ಟ್ ಮಾಡಿದ್ದಾರೆ. ಎಲ್ಲಾ ಅಂಶಗಳನ್ನ ಸಿಎಂಗೆ ಹೇಳಿದ್ದೇನೆ. ಹಿಂದೂಗಳನ್ನ ಕೊಲೆ ಮಾಡುವ ಎಸ್​​ಡಿಪಿಐ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದಲೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗ್ತಿದೆ ಎಂದು ಆರೋಪಿಸಿದರು.


ಇದನ್ನೂ ಓದಿ: Pramod Mutalik: ಹಿಂದೂಗಳು ತಮ್ಮ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ! ಕರೆ ಕೊಟ್ಟಿದ್ದೇಕೆ ಪ್ರಮೋದ್ ಮುತಾಲಿಕ್?


ನಮ್ಮ ಶಿವಮೊಗ್ಗದವರು ಶಾಂತಿಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆ ಇರಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ ಎಂದರು.


ಹಿರಿಯರು ಬುದ್ಧಿ ಹೇಳಲಿ


ಶಾಂತಿ ಕಾಪಾಡಲು ಮುಂಚೆಯಿಂದಲೂ ಕೆಲ ಹಿರಿಯ ಮುಸ್ಲಿಮರು ಪ್ರಯತ್ನ ಮಾಡುತ್ತಿದ್ದಾರೆ. ಯಾರೂ ಗುಂಡಾಗಳಿದ್ರೆ ಅವರಿಗೆ ಹಿರಿಯರು ಬುದ್ಧಿ ಹೇಳಬೇಕು.


250 RAF ಹಾಗೂ 500 ಸ್ಥಳೀಯ ಪೊಲೀಸರಿಂದ ಪಥಸಂಚಲನ ನಡೆಸಲಾಗುತ್ತದೆ. ಕಿಡಿಗೇಡಿಗಳಿಗೆ ಎಚ್ಚರಿಕೆ ಸಂದೇಶ ನೀಡಲು ಪಥಸಂಚಲನ ಮಾಡಲಾಗುತ್ತಿದೆ. ಮತ್ತೆ ಶಿವಮೊಗ್ಗದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.


ದೇಶ ವಿಭಜನೆ ಮಾಡಿದ್ದು ನೆಹರು


ಇದೇ ವೇಳೆ ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಮುದ್ರಣಗೊಳ್ಳದಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ದೇಶ ವಿಭಜನೆ ಮಾಡಿದ್ದು ನೆಹರು. ಡಿಕೆಶಿ, ಸಿದ್ದರಾಮಯ್ಯ ಗೆ ಸರ್ದಾರ್ ಪಟೇಲ್, ಭಗತ್ ಸಿಂಗ್ ಬೇಕಿಲ್ಲ. ದೇಶ ತುಂಡು ಮಾಡಿದವರು ಅವರಿಗೆ ಬೇಕು. ಹಿಂದಿನ ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ಬಂತು. ಆ ಹಿಂದಿನ ಕಾಂಗ್ರೆಸ್​ಗೆ ಈಗಿನವರು ಜಾತಿ ಲೇಪನ ಹಚ್ಚಿದ್ದಾರೆ. ಕುರುಬರಿಗೆ, ಒಕ್ಕಲಿಗರಿಗೆ ಜಾತಿ ಲೇಪನ ಹಚ್ಚಿದ್ದಾರೆ ಎಂದು ಕಿಡಿಕಾರಿದರು.


ಇದನ್ನೂ ಓದಿ:  Veer Savarkar Vs Tipu Sultan: ಅರೆಸ್ಟ್ ಮಾಡಲು ಹೋದ ಖಾಕಿ ಮೇಲೆ ಹಲ್ಲೆಗೆ ಯತ್ನ;  ಆರೋಪಿ ಕಾಲಿಗೆ ಗುಂಡು


ನಮ್ಮ ಹಬ್ಬದ ತಂಟೆಗೆ ಬರಬೇಡಿ


ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದ್ರೆ ಸರಿ ಇರಲ್ಲ. ನೀವು ನಿಮ್ಮ ಹಬ್ಬ ಮಾಡಲ್ವಾ? ನಾವು ಬೆಂಬಲ ಕೊಡಲ್ವಾ? ನಮ್ಮ ಹಬ್ಬದ ತಂಟೆಗೆ ಬರಬೇಡಿ. ಮುಸಲ್ಮಾನ ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಹಿಂದೂಗಳ ಮೇಲಿನ ಅವರ ಭಾವನೆ ಇನ್ನೂ ಬದಲಾಗಿಲ್ಲ. ವರ ಚಟುವಟಿಕೆ ಜಾಸ್ತಿಯಾಗಿದೆ, ಹೀಗಾಗಿ ಕೊಲೆ, ಗಲಭೆ ಹೆಚ್ಚಾಗಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡ್ತಿದೆ ಎಂದರು.

Published by:Mahmadrafik K
First published: