Veer Savarkar Vs Tipu Sultan: ಅರೆಸ್ಟ್ ಮಾಡಲು ಹೋದ ಖಾಕಿ ಮೇಲೆ ಹಲ್ಲೆಗೆ ಯತ್ನ;  ಆರೋಪಿ ಕಾಲಿಗೆ ಗುಂಡು

ಎರಡು ಕೈ ತಟ್ಟಿದರೆ ಚಪ್ಪಾಳೆ ಬರುತ್ತೆ. ವಿರೋಧಪಕ್ಷದವರು ಅಶಾಂತಿ ಹುಟ್ಟಿಸಿ ಚುನಾವಣೆಗೆ ಹೋಗುವ ವಿಚಾರದಲ್ಲಿದ್ದಾರೆ. ಇದಕ್ಕೆ ನಾವು ಬಿಡಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.

ಫ್ಲೆಕ್ಸ್ ಮತ್ತು ಆರೋಪಿ

ಫ್ಲೆಕ್ಸ್ ಮತ್ತು ಆರೋಪಿ

  • Share this:
ಶಿವಮೊಗ್ಗದಲ್ಲಿ ವೀರ ಸಾರ್ವಕರ್ (Veer Savarkar) ಮತ್ತು ಟಿಪ್ಪು (Tipu Sultan) ಫೋಟೋ ಗಲಾಟೆ ನಡೆದಿತ್ತು. ಆದ್ರೆ ಗಲಾಟೆಗೆ ಸಂಬಂಧಪಡದ 20 ವರ್ಷದ ಪ್ರೇಮ್ ಸಿಂಗ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಚಾಕು ಇರಿತಕ್ಕೆ ಸಂಬಂಧಿಸಿದಂತೆ ತಡರಾತ್ರಿಯೇ ಇಬ್ಬರನ್ನು (Accused Arrest) ಬಂಧಿಸಲಾಗಿತ್ತು. ಶಿವಮೊಗ್ಗದ ಫಲಕ್ ಪ್ಯಾಲೇಸ್ ಹಿಂದೆ ಅವಿತುಕೊಂಡಿದ್ದ ಆರೋಪಿಯ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ. ಜಬೀವುಲ್ಲಾ ಬಂಧನಕ್ಕೆ ಮುಂದಾಗಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದನು. ಚಾಕು ತೋರಿಸಿ ಪರಾರಿಯಾಗಲು ಜಬೀವುಲ್ಲಾ ಪ್ರಯತ್ನಿಸಿದ್ದನು. ಈ ವೇಳೆ ಜಬೀವುಲ್ಲಾ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಇದುವರೆಗೂ ಜಬೀವುಲ್ಲಾ ಸೇರಿದಂತೆ ನಾಲ್ವರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಜಬೀವುಲ್ಲಾ ಆಸ್ಪತ್ರೆಯಲ್ಲಿದ್ದು, ಉಳಿದ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ರಹಸ್ಯ ಸ್ಥಳದಲ್ಲಿ ಮೂವರು ಆರೋಪಿಗಳನ್ನು ದೊಡ್ಡಪೇಟೆ ಇನ್ಸ್‌ಪೆಕ್ಟರ್ ಅಂಜನ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿರುವ ಮಾಹಿತಿ ಲಭ್ಯವಾಗಿದೆ.

KSRP ತುಕಡಿ ನಿಯೋಜನೆ

ಶಿವಮೊಗ್ಗದ ಎಎ ಸರ್ಕಲ್‌ KSRP ತುಕಡಿಗಳ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕೈಗೊಳ್ಳಲಾಗಿದೆ. ಆಗಸ್ಟ್ 18ರವರೆಗೆ ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144 ಹಾಕಲಾಗಿದ್ದು, ಮುಂದಿನ ಆದೇಶದವರೆಗೂ ಗಾಂಧಿ ಬಜಾರ್​ನ ಅಂಗಡಿ  ತೆರೆಯದಂತೆ ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದೆ.

ನಮಗ್ಯಾಕೆ ಈ ಶಿಕ್ಷೆ?

ಈಗ ದಿಢೀರ್ ಅಂಗಡಿ ಮುಚ್ಚುವಂತೆ ಹೇಳಿದ್ರೆ ನಾವು ಏನು ಮಾಡೋದು. ದಿನನಿತ್ಯದ ವ್ಯಾಪಾರ ನಂಬಿಕೊಂಡು ಜೀವನ ನಡೆಸುತ್ತೇವೆ. ಈಗ ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ ಅಂತ ನ್ಯೂಸ್ 18 ಮುಂದೆ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

ವಿಜಯೇಂದ್ರ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ದುಸ್ಸಾಹಸದ ಪ್ರಯತ್ನದ ಹಿಂದೆ ಹುನ್ನಾರ ಕಾಣಿಸುತ್ತಿದೆ. ನಿನ್ನೆಯ ಚೂರಿ ಇರಿತ ಪ್ರಕರಣ ದುರಾದೃಷ್ಟಕರ, ಸಾವರ್ಕರ್ ವಿರೋಧಕ್ಕೆ ಪ್ರತಿಪಕ್ಷ ಬೆಂಬಲ ನೀಡುತ್ತಿವೆ. ಇಂತಹ ಕೃತ್ಯಗಳಿಗೆ ಬೆಂಬಲ ನೀಡಿದರೆ ಪರಿಣಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದರು.

ಎರಡು ಕೈ ತಟ್ಟಿದರೆ ಚಪ್ಪಾಳೆ ಬರುತ್ತೆ. ವಿರೋಧಪಕ್ಷದವರು ಅಶಾಂತಿ ಹುಟ್ಟಿಸಿ ಚುನಾವಣೆಗೆ ಹೋಗುವ ವಿಚಾರದಲ್ಲಿದ್ದಾರೆ. ಇದಕ್ಕೆ ನಾವು ಬಿಡಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.

ಶಾಂತಿ ಕಾಪಾಡುವಂತೆ ಮನವಿ

ಶಿವಮೊಗ್ಗದಲ್ಲಿ ಸಾವರ್ಕರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು. ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು.

ಇದೇ ವೇಳೆ ಸಂಪುಟ ವಿಸ್ತರಣೆ ಸಂಬಂಧವೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ಬಳಿಕ ಆಕ್ಟಿವ್ ಆಗಿದ್ದಾರೆ

ಇದನ್ನೂ ಓದಿ: Congress Rally: ಕಾಂಗ್ರೆಸ್​​ನಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆ, ಎಲ್ಲಾ ಕಡೆ ಟ್ರಾಫಿಕ್ ಜಾಮ್

ಫ್ಲೆಕ್ಸ್​ಗಳ ತೆರವು

ಶಿವಮೊಗ್ಗದಲ್ಲಿ ಫ್ಲೆಕ್ಸ್ ಹಾಕುವ ವಿಚಾರಕ್ಕೆ ಗಲಾಟೆ ನಡೀತಿತ್ತಂತೆ ಪಾಲಿಕೆ ಫುಲ್ ಅಲರ್ಟ್‌ ಆಗಿದೆ. ಗಲಾಟೆಯಿಂದ ಕೊನೆಗೂ ಎಚ್ಚೆತ್ತ ಶಿವಮೊಗ್ಗ ಮಹಾನಗರ ಪಾಲಿಕೆ, ಹಲವೆಡೆಗಳಲ್ಲಿ ಹಾಕಿದ್ದ ಫ್ಲೆಕ್ಸ್‌ಗಳ ತೆರವುಗೊಳಿಸಿದ್ರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ಮೇರೆಗೆ ಪಾಲಿಕೆಯ ಸುಮಾರು 80 ಸಿಬ್ಬಂದಿಗಳಿಂದ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೀತು. ಇನ್ನು ಸ್ಥಳದಲ್ಲೇ ನಿಂತು ಪಾಲಿಕೆ ಆಯುಕ್ತ ಮಾಯಣ್ಣಗೌಡ ಫ್ಲೆಕ್ಸ್ ತೆರವುಗೊಳಿಸಿದ್ರು.

ಸಾವರ್ಕರ್ ಟೀಕೆ ಸರಿಯಲ್ಲ, ಇದು ರಾಷ್ಟ್ರ ವಿರೋಧಿ ಕೃತ್ಯ

ಶಿವಮೊಗ್ಗದಲ್ಲಿ ಓರ್ವನಿಗೆ ಚಾಕು ಇರಿತವಾಗಿದೆ. ಪ್ರಕರಣ ಸಂಬಂಧ ಹಲವರನ್ನು ಬಂಧಿಸಿ ವಿಚಾರಣೆ ಮಾಡಲಾಗ್ತಿದೆ ಅಂತ ಗೃಹ ಸಚಿವ ಆಗರ ಜ್ಞಾನೇಂದ್ರ ಹೇಳಿದ್ರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದು, ಸಾರ್ವಕರ್ ಟೀಕೆ ಸರಿಯಲ್ಲ, ಇದು ರಾಷ್ಟ್ರ ವಿರೋಧಿ ಕೃತ್ಯ, ಶಿವಮೊಗ್ಗದಲ್ಲಿ ಯುವಕನ ಮೇಲೆ ಹಲ್ಲೆಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಅಂತ ಹೇಳಿದ್ರು.
Published by:Mahmadrafik K
First published: