HOME » NEWS » State » SHIVAMOGGA BLAST PM NARENDRA MODI CONDOLENCES FOR VICTIMS HRNS SNVS

Shivamogga Blast - ಶಿವಮೊಗ್ಗ ಡೈನಮೈಟ್ ಸ್ಫೋಟ; ಪ್ರಧಾನಿಯಿಂದ ಸಂತಾಪ

ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ-ಹುಣಸೋಡು ನಡುವಿನ ಕಲ್ಲು ಕ್ವಾರಿ ಬಳಿ ಜಿಲಾಟಿನ್ ತುಂಬಿದ ಲಾರಿ ಸ್ಫೋಟಗೊಂಡು 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

news18-kannada
Updated:January 22, 2021, 9:09 AM IST
Shivamogga Blast - ಶಿವಮೊಗ್ಗ ಡೈನಮೈಟ್ ಸ್ಫೋಟ; ಪ್ರಧಾನಿಯಿಂದ ಸಂತಾಪ
ನರೇಂದ್ರ ಮೋದಿ.
  • Share this:
ಶಿವಮೊಗ್ಗ: ಇಲ್ಲಿಯ ಜಲ್ಲಿ ಕ್ರಷರ್​ವೊಂದರ ಬಳಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಅವರು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ಟ್ವೀಟ್ ಮಾಡಿದ್ದಾರೆ. ವಿರೋಧ ಪಕ್ಷದ ಮುಖಂಡ ಹೆಚ್.ಡಿ. ಕುಮಾರಸ್ವಾಮಿ ಅವರೂ ಕೂಡ ಘಟನೆಯ ತನಿಖೆಗೆ ಆಗ್ರಹಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಬಳಿ‌ಯಿರುವ ಹುಣಸೋಡು ಎಂಬಲ್ಲಿರುವ ಕಲ್ಲುಕ್ವಾರೆಯಲ್ಲಿ ನಿನ್ನೆ ರಾತ್ರಿ 10:20ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಒಂದು ಅಂದಾಜು ಪ್ರಕಾರ 15ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಸಾಧ್ಯತೆ ಇದೆ. ಸ್ಪೋಟದ ರಭಸಕ್ಕೆ ಶವಗಳು ಛಿದ್ರ ಛಿದ್ರವಾಗಿವೆ. ಕಾರ್ಮಿಕರು ಬಿಹಾರದ ಮೂಲದವರು ಎನ್ನಲಾಗುತ್ತಿದೆ. ಸುತ್ತಮುತ್ತ 500 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.  ಹಲವು ಮರಗಳು ಉರುಳಿ ಬಿದ್ದಿವೆ. ಕರೆಂಟ್ ಕಂಬಗಳು ಉರುಳಿ ಬಿದ್ದಿವೆ.  ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿದೆ, ಕತ್ತಲು ಆವರಿಸಿದೆ.

ಇದನ್ನೂ ಓದಿ: Huge Blast - ಶಿವಮೊಗ್ಗದಲ್ಲಿ ಭಾರೀ ಡೈನಮೈಟ್ ಸ್ಫೋಟ; 15ಕ್ಕೂ ಹೆಚ್ಚು ಮಂದಿ ದುರ್ಮರಣ

ಘಟನೆ ಬೆನ್ನಲ್ಲೇ ಸ್ಥಳಕ್ಕೆ ಎಸ್ ಪಿ  ಶಾಂತರಾಜ್ , ಜಿಲ್ಲಾಧಿಕಾರಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಡಿಸಿ, “10:30 ರ ಸಂದರ್ಭದಲ್ಲಿ ಕೇಳಿ ಬಂದ ಶಬ್ಧದ ನಡುವೆ ಹುಣಸೋಡಿನಲ್ಲಿ ಸ್ಪೋಟಗೊಂಡಿದೆ. ಈ ಸ್ಪೋಟದಲ್ಲಿ ಸಾವು ನೋವುಗಳು ಉಂಟಾಗಿದೆ. ಸ್ಪಷ್ಟವಾಗಿ ಹೇಳಲು ಬೆಳಕಿನ ಅಭಾವವಿದೆ. ನಿಗೂಢ ಶಬ್ದಕ್ಕೂ ಹಾಗೂ ಇಲ್ಲಿನ ಸ್ಪೋಟದ ಕುರಿತು ನಾಳೆ ಬೆಂಗಳೂರಿನಿಂದ ತನಿಖಾ ತಂಡ ಬರಲಿದೆ , ಅವರು ಪರಶೀಲನೆ ನಡೆಸಿದ ನಂತರ ಯಾವುದಕ್ಕೂ ನಾಳೆ ಸ್ಪಷ್ಟವಾಗಿ ತಿಳಿಯಲಿದೆ. ಬೆಳಗ್ಗೆ ವಿಶೇಷ ತಜ್ಞರ ತಂಡ ಸ್ಥಳಕ್ಕೆ ಬರಲಿದ್ದು ಪರಿಶೀಲನೆ ನಡೆಸಲಿದ್ದಾರೆ. ಅದಾದ ಬಳಿಕ ಇನ್ನಷ್ಟು ಮಾಹಿತಿ ಸಿಗಲಿದೆ” ಎಂದು ತಿಳಿಸಿದ್ದಾರೆ.

ಈ ಮಧ್ಯೆ, ಘಟನೆಗೆ ಅಕ್ರಮ ಕ್ವಾರಿಗಳೆ ಕಾರಣ. ‌ಈ ಭಾಗದಲ್ಲಿ ಸುಮಾರು 50 ಕ್ಕೂ ಹೆಚ್ಚು ಕ್ವಾರಿಗಳಿದ್ದು ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಮಾಹಿತಿ ಕೊಟ್ಟರೂ ಯಾವ ಇಲಾಖೆಯ ಅಧಿಕಾರಿಗಳೂ ಕ್ರಮ ಕೈಗೊಂಡಿಲ್ಲ.‌ ಸ್ಥಳಿಯರನ್ನು ಕೂಡ ಕ್ವಾರಿ ಹತ್ತಿರಕ್ಕೂ ಬಿಡದಂತೆ ಅಕ್ರಮವೆ ಎಸಗುತ್ತಿದ್ದರು. ಈಗಲಾದರೂ ಕ್ವಾರಿಗಳ ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Wistron Violence – ಕೋಲಾರದ ವಿಸ್ಟ್ರಾನ್ ಕಂಪನಿ ಪುನಾರಂಭಕ್ಕೆ ಸಿದ್ಧತೆ; ನೌಕರರ ಸೇರ್ಪಡೆಗೆ ಷರತ್ತು

ಸುಧಾಕರ್ ಎಂಬುವವರಿಗೆ ಸೇರಿದ ಕಲ್ಲು ಕ್ವಾರಿ ಎನ್ನಲಾಗುತ್ತಿದೆ. 201ರಿಂದ 2024ರವರೆಗೂ ಕ್ವಾರಿ ನಡೆಸಲು ಇವರಿಗೆ ಅನುಮತಿ ಇದೆ ಎಂಬ ಮಾಹಿತಿ ಸಿಕ್ಕಿದೆ.

ಕೆಲ ವರದಿಗಳ ಪ್ರಕಾರ ಭೂಕಂಪವಾಗಿ ಅದರಿಂದ ಜಿಲಾಟಿನ್ ಕಡ್ಡಿಗಳು ಘರ್ಷಣೆಗೊಂಡು ಸ್ಫೋಟವಾಗಿರಬಹುದು ಎಂಬ ಶಂಕೆ ಇದೆ. ಆದರೆ, ಭೂಕಂಪನ ಮಾಪಕ ಕೇಂದ್ರದಲ್ಲಿ ಭೂಕಂಪನ ದಾಖಲಾಗಿಲ್ಲ. ಹೀಗಾಗಿ, ಡೈನಮೈಟ್ ಸ್ಫೋಟಕ್ಕೆ ಕಾರಣ ಏನೆಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

ವರದಿ: ಹೆಚ್ ಆರ್ ನಾಗರಾಜ
Published by: Vijayasarthy SN
First published: January 22, 2021, 8:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories