Shivamogga Blast: ಶಿವಮೊಗ್ಗ ಸ್ಫೋಟ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ

ಸ್ಪೋಟ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. 

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

  • Share this:
ಶಿವಮೊಗ್ಗ (ಜ.22): ತಾಲೂಕಿನ ಹುಣಸೋಡು ಬಳಿಯ ಕಲ್ಲಿನ ಕ್ವಾರಿಯಲ್ಲಿ ನಡೆದ  ಸ್ಪೋಟದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಸಮಿತಿ ರಚಿಸಿ ತನಿಖೆ ನೀಡುವ ಭರವಸೆ ನೀಡಿದ್ದಾರೆ.  ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಮಾಹಿತಿ ಇದ್ದು, ಇದರಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಂತಹ ದೊಡ್ಡ ವ್ಯಕ್ತಿಯಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು. ಇನ್ನು ಸ್ಪೋಟ ಸ್ಥಳಕ್ಕೆ ಸ್ಪೋಟದ ಸ್ಥಳಕ್ಕೆ ಗಣಿಗಾರಿಕೆ ಸಚಿವ ಮುರುಗೇಶ್​ ನಿರಾಣಿ ಭೇಟಿ ನೀಡಿದರು. ಈ ವೇಳೆ ಸ್ಥಳ ಪರಿಶೀಲನೆ ನಡೆಸಿದ  ಮಾಹಿತಿ ಪಡೆದರು.  ಪ್ರಕರಣದ ತನಿಖೆಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಮಿತಿ ರಚನೆ ಮಾಡುವುದಾಗಿ ತಿಳಿಸಿದರು. 

ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ ಸ್ಪೋಟ ಕುರಿತು ಇದೇ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಪೋಟದಲ್ಲಿ ಐವರು ಮೃತಪಟ್ಟಿದ್ದು, ಮೃತರಲ್ಲಿ ನಾಲ್ವರು ಕಾರ್ಮಿಕರ ಗುರುತು ಪತ್ತೆಯಾಗಿದೆ. ಇದರಲ್ಲಿ ಮೂವರು ಆಂಧ್ರ ಪ್ರದೇಶದವರಾಗಿದ್ದರೆ, ಮತ್ತಿಬ್ಬರು ಭದ್ರಾವತಿಯ ಸ್ಥಳೀಯ ಕಾರ್ಮಿಕರಾಗಿದ್ದು,  ಪ್ರವೀಣ್ ಕುಮಾರ್ (38), ಅಂತಗಂಗೆ ನಿವಾಸಿ ಮಂಜು (30) ಎಂದು ತಿಳಿದು ಬಂದಿದೆ.  ಮೃತರು  ಮೃತರ ಶವಗಳನ್ನು ಜಿಲ್ಲೆಯ ಮೆಗ್ಗಾನ್​ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್​ ಮಾಡಲಾಗಿದೆ.

ಸ್ಪೋಟ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮುರುಗೇಶ್​ ನಿರಾಣಿ


ಪ್ರಕರಣ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿದ್ದು, ನಿನ್ನೆ ರಾತ್ರಿ ಕ್ರಷರ್ ನಲ್ಲಿ ಸ್ಫೋಟದ ವೇಳೆ ಕಾರ್ಮಿಕರು ಸ್ಥಳದಲ್ಲಿದ್ದರು. ಆಂಧ್ರ ಪ್ರದೇಶದಿಂದ ಬಳ್ಳಾರಿ ಮೂಲಕ ಜಿಲೆಟಿನ್ ತುಂಬಿದ್ದ ವಾಹನ‌ ಬಂದಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದು, ಒಟ್ಟು ಎರಡು ವಾಹನ ಘಟನೆಯಲ್ಲಿ ಛಿದ್ರ ಛಿಧ್ರಗೊಂಡಿದೆ. ಒಂದು ಬೊಲೆರೋ ವಾಹನ ಮತ್ತೊಂದು ಟಾಟಾ ಲಗ್ಗೇಜ್ ವಾಹನ ಎನ್ನಲಾಗುತ್ತಿದೆ.

ಸ್ಫೋಟದ ಸದ್ದಿಗೆ ಗ್ರಾಮ ಬಿಟ್ಟು ಓಡಿ ಹೋದ ಹಸುಗಳು

ನಿನ್ನೆ ರಾತ್ರಿ ಕೇಳಿಸಿದ ಭಾರೀ ಸದ್ದಿಗೆ ಇಲ್ಲಿನ ಬಸವನಗಂಗೂರು ಗ್ರಾಮದ ಹತ್ತಕ್ಕೂ ಹೆಚ್ಚು ಹಸುಗಳು ಹೆದರಿ ಓಡಿ ಹೋಗಿದೆ. ಸ್ಪೋಟದ ಸದ್ದಿಗೆ ಹಸುಗಳು ದಿಕ್ಕಪಾಲಾಗಿ ಓಡಿದ್ದು, ಅವುಗಳ ಪತ್ತೆಗಾಗಿ ರೈತರು ಕಂಗಲಾಗಿದ್ದಾರೆ. ಹಸುಗಳು ಓಡಿ ಹೋದ ಪರಿಣಾಮ ಕರುಗಳು ಕಂಗಾಲಾಗಿದ್ದು, ಹಸುಗಳ ಪತ್ತೆಗಾಗಿ ರೈತರು ಮುಂದಾಗಿದ್ದಾರೆ.  ಇಡೀ ಗ್ರಾಮದಲ್ಲಿ ಪೊಲೀಸರು ಚೆಕ್ ಪೋಸ್ಟ್ ಹಾಕಿಲಾಗಿದೆ. ಸ್ಪೋಟಕ್ಕೆ ಬೆಚ್ಚಿರುವ ಗ್ರಾಮದ  ಜನರು ಮನೆಯಿಂದ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕಾರ್ಯ,ಹೊಲದ ಕೆಲಸಗಳಿಗೂ ತೆರಳದ ಗ್ರಾಮಸ್ಥರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನು ಸ್ಪೋಟಕ್ಕೆ ಹಲವು ಮನೆಗಳು ಬಿರುಕು ಬಿಟ್ಟಿದ್ದು,  ದುರಸ್ತಿಗೂ ಹಣ ಇಲ್ಲದೆ ಗ್ರಾಮಸ್ಥರು ಕಂಗಾಲಾಗಿದ್ದಾರೆ.
Published by:Seema R
First published: