ಇಂದಿನಿಂದ ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರ ಆರಂಭ

ಜನ ಶತಾಬ್ದಿ ರೈಲು ಸೋಮವಾರ, ಬುಧವಾರ, ಶುಕ್ರವಾರ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ರೈಲು ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಡಲಿದೆ

  • News18
  • 3-MIN READ
  • Last Updated :
  • Share this:

ಬೆಂಗಳೂರು (ಫೆ.03) : ಬಹು ನಿರೀಕ್ಷೆಯ ಶಿವಮೊಗ್ಗ -ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರ ಇಂದಿನಿಂದ ಆರಂಭವಾಗಲಿದೆ. ಸಂಜೆ 6 ಗಂಟೆಗೆ ಸಂಸದ ಬಿ.ವೈ. ರಾಘವೇಂದ್ರ ಜನಶತಾಬ್ದಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಜನ ಶತಾಬ್ದಿ ರೈಲು ಸಂಚಾರಕ್ಕೆ ನೈಋುತ್ಯ ರೈಲ್ವೆ ಮೈಸೂರು ವಿಭಾಗವು ಎರಡು ದಿನಗಳ ಹಿಂದಷ್ಟೇ ಪ್ರಕಟಿಸಿದ್ದ ಶಿವಮೊಗ್ಗ- ಯಶವಂತಪುರ ಜನ ಶತಾಬ್ದಿ ರೈಲು ಸಂಚಾರವನ್ನು 3 ರಿಂದ 4 ದಿನಗಳಿಗೆ ವಿಸ್ತರಿಸಿದೆ.

ಈ ರೈಲು, ಶಿವಮೊಗ್ಗ ಟೌನ್‌ನಿಂದ ಯಶವಂತಪುರ ರೈಲು ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲಿದೆ. ಸೋಮವಾರದಿಂದ ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ. ಶಿವಮೊಗ್ಗ ದಿಂದ ಹೊರಡುವ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ತನಕ ಸಂಚಾರ ನಡೆಸುತ್ತದೆ. 14 ಬೋಗಿಯ ರೈಲಿನಲ್ಲಿ 7 ಎಸಿ ಕೋಚ್​ಗಳು ಇರಲಿವೆ.

ಇದನ್ನೂ ಓದಿ : ಎಟಿಎಂ ಕಾರ್ಡ್ ಕಳುವಾಗಲಿಲ್ಲ, ಓಟಿಪಿ ಕೊಡಲಿಲ್ಲ; ಆದರೂ 40 ಸಾವಿರ ಕಳೆದುಕೊಂಡ ವ್ಯಕ್ತಿ

ಈ ರೈಲು ಪ್ರತಿದಿನ ಬೆಳಿಗ್ಗೆ 5.15ಕ್ಕೆ ಹೊರಟು ಯಶವಂತಪುರಕ್ಕೆ ಬೆಳಗ್ಗೆ 10.10ಕ್ಕೆ ತಲುಪಲಿದೆ. ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಟು ರಾತ್ರಿ 10.25ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ತಲುಪಲಿದೆ.  ಭದ್ರಾವತಿ, ಕಡೂರು ಮತ್ತು ತುಮಕೂರಲ್ಲಿ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರಲಿದೆ.

ಜನ ಶತಾಬ್ದಿ ರೈಲು ಸೋಮವಾರ, ಬುಧವಾರ, ಶುಕ್ರವಾರ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ರೈಲು ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಡಲಿದೆ.

ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಈಗಿರುವ ರೈಲು ಸಂಪರ್ಕಸಾಲುತ್ತಿರಲಿಲ್ಲ. ಹೀಗಾಗಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು, ಅವರಿಗೆ ಅನುಕೂಲಕರವಾದ ಸಮಯದಲ್ಲಿ ವಾರದಲ್ಲಿ ನಾಲ್ಕು ದಿನ ಜನಶತಾಬ್ದಿ ರೈಲು ಸಂಪರ್ಕ ಕಲ್ಪಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

First published: