Shivaji Nagara; ಜೆಡಿಎಸ್​ಗೆ ಆರಂಭಿಕ ವಿಘ್ನ: ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಜೆಡಿಎಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ (ಸಾಂದರ್ಭಿಕ ಚಿತ್ರ)

ಜೆಡಿಎಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ (ಸಾಂದರ್ಭಿಕ ಚಿತ್ರ)

JDS Candidate: ಚುನಾವಣಾ ಆಯೋಗ (Election Commission) ನಾಮಪತ್ರ ತಿರಸ್ಕರಿಸಿದೆ. ನಾಮಪತ್ರ ತಿರಸ್ಕೃತವಾಗಿರೋದನ್ನು ಶಿವಾಜಿನಗರ ಆರ್‌ಓ ಬಸವರಾಜ್ ಸೋಮಣ್ಣನವರ್ ಖಚಿತಪಡಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore, India
  • Share this:

ಬೆಂಗಳೂರು: ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ (Shivaji Nagar Assembly Constituency) ಜೆಡಿಎಸ್ ಅಭ್ಯರ್ಥಿ ‌ಅಬ್ದುಲ್ ಜಫರ್ ಅಲಿ (Abdul Zafar Ali) ನಾಮಪತ್ರ ತಿರಸ್ಕೃತಗೊಂಡಿದೆ. ಇಷ್ಟು ದಿನ ವಿದೇಶದಲ್ಲಿದ್ದ ಜಫರ್ ಅಲಿ, ಇತ್ತಿಚಿಗಷ್ಟೇ ಬೆಂಗಳೂರಿಗೆ (Bengaluru) ವಾಪಾಸ್ಸಾಗಿದ್ದರು. ಜಫರ್ ಅಲಿ ಅವರ ಹೆಸರು ಯಾವ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಚುನಾವಣಾ ಆಯೋಗ (Election Commission) ನಾಮಪತ್ರ ತಿರಸ್ಕರಿಸಿದೆ. ನಾಮಪತ್ರ ತಿರಸ್ಕೃತವಾಗಿರೋದನ್ನು ಶಿವಾಜಿನಗರ ಆರ್‌ಓ ಬಸವರಾಜ್ ಸೋಮಣ್ಣನವರ್ ಖಚಿತಪಡಿಸಿದ್ದಾರೆ. ಕಾಂಗ್ರೆಸ್​ನಿಂದ ಹಾಲಿ ಶಾಸಕ ರಿಜ್ವಾನ್ ಅರ್ಷದ್ (MLA Rizwan Arshad) ಕಣದಲ್ಲಿದ್ದಾರೆ. ಬಿಜೆಪಿಯಿಂದ ಎನ್ ಚಂದ್ರ (N Chandra) ಸ್ಪರ್ಧೆಯಲ್ಲಿದ್ದಾರೆ.


ಜಫರ್ ಅಲಿ ಏಪ್ರಿಲ್ 20 ರಂದು ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ್ರು. ಅರ್ಜಿ ಸಲ್ಲಿಸಲು ವಿಳಂಬವಾದ್ದರಿಂದ ಅಲಿ ವೋಟರ್ ಐಡಿ ಮನವಿ ತಿರಸ್ಕಾರ ಮಾಡಿದೆ.


Shivajinagar jds candidate nomination rejected mrq
ಜಫರ್ ಅಲಿ, ಜೆಡಿಎಸ್ ಅಭ್ಯರ್ಥಿ


ಇತ್ತ ಮುಂಜಾಗ್ರತ ಕ್ರಮವಾಗಿ ಜೆಡಿಎಸ್​ ನಿಂದ ಆರ್ ಮಂಜುನಾಥ್ ಎಂಬವರು ಸಹ ನಾಮಪತ್ರ ಸಲ್ಲಿಕೆ ಮಾಡಿದ್ದರು. 3 ಗಂಟೆ ಬಳಿಕ ತಡವಾಗಿ ನಾಮಪತ್ರ ಸಲ್ಲಿಸಿಕೆ ಮಾಡಿದ್ದರಿಂದ ಮಂಜುನಾಥ್ ನಾಮಪತ್ರ ತಿರಸ್ಕೃತಗೊಂಡಿದೆ.


ಇದನ್ನೂ ಓದಿ:  Siddu Savadi: ಗೆಲುವಿನ ನಗೆ ಬೀರಲು ಚುನಾವಣಾ ಸಂಗ್ರಾಮದಲ್ಲಿರುವ ಶಾಸಕರ 'ಕೈ' ಹಿಡಿತಾರಾ ತೇರದಾಳದ ಜನತೆ!


ಶಿವಾಜಿ ನಗರದಿಂದ ಕಣಕ್ಕಿಳಿದಿದ್ದ ಜೆಡಿಎಸ್​​​ನ ಜಫರ್ ಅಲಿ , ಆರ್.ಮಂಜುನಾಥ ಇಬ್ಬರ ನಾಮಪತ್ರವೂ ತಿರಸ್ಕಾರಗೊಂಡಿದೆ.




ಶಕ್ತಿ ದೇವತೆ ಮೊರೆ ಹೋದ ಡಿಕೆಶಿ

top videos


    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋಗಿದ್ದಾರೆ. ಕುಟುಂಬ ಸಮೇತ ಈಗಾಗಲೇ ಶೃಂಗೇರಿಗೆ ಆಗಮಿಸಿರುವ ಡಿ.ಕೆ.ಶಿವಕುಮಾರ್ ಚಂಡಿಕಾಯಾಗದಲ್ಲಿ ಭಾಗಿಯಾಗಲಿದ್ದಾರೆ.

    First published: