ಬೆಂಗಳೂರಿನಲ್ಲಿ ಶಿವಾಜಿನಗರದ (Shivaji Nagara, Bengaluru) ಹೆಸರನ್ನು ಕೇಳದೇ ಇರೋರಿಲ್ಲ. ಸದಾ ಜನಜಂಗುಳಿಯಿಂದ ತುಂಬಿರುವ ಕರ್ಮರ್ಷಿಯಲ್ ಸ್ಟ್ರೀಟ್ (Commercial Street) ಶಾಪಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಆದ್ರೆ ಅಲ್ಲಿನ ಕಿರಿದಾದ ರಸ್ತೆ (Small Roads), ಓಡಾಡಲೂ ಜಾಗವಿಲ್ಲದಂತೆ ಎಲ್ಲಿ ನೋಡಿದ್ರೂ ಪಾರ್ಕ್ ಮಾಡಿರುವ ವೆಹಿಕಲ್ ಗಳು, ರಸೆಲ್ ಮಾರುಕಟ್ಟೆಯ (Russel Market) ಅವ್ಯವಸ್ಥೆ, ಚರಂಡಿ ವಾಸನೆ (Drinage) ಜನರಿಗೆ ಕಿರಿಕಿರಿ ಉಂಟುಮಾಡುತ್ತಿದ್ದವು ಅನ್ನೋದು ಅಷ್ಟೇ ಸತ್ಯ.
ಆದ್ರೆ ಶೀಘ್ರವೇ ಶಿವಾಜಿನಗರ ಸ್ಮಾರ್ಟ್ ನಗರವಾಗಲಿದೆ. ಹೌದು, ಸ್ಮಾರ್ಟ್ ಸಿಟಿ ಬೆಂಗಳೂರು ಲಿಮಿಟೆಡ್ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶಿವಾಜಿ ನಗರಕ್ಕೆ ಹೊಸ ರೂಪ ನೀಡುತ್ತಿದೆ.
ಈಗಾಗಲೇ ಕಾಮಗಾರಿ ಶೇ.70 ರಷ್ಟು ಪೂರ್ಣಗೊಂಡಿದೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ಜನವರಿ 15 ರಂದು ಇದನ್ನು ಉದ್ಘಾಟನೆ ಮಾಡಲು ತಯಾರಿ ನಡೆದಿದೆ.
ಶಿವಾಜಿನಗರದಲ್ಲಿ ಏನೇನು ಬದಲಾವಣೆಯಾಗಲಿದೆ?
ಶಿವಾಜಿ ನಗರದ ಬ್ರಾಡ್ವೇ ರಸ್ತೆ, ರಿಚರ್ಡ್ ಸ್ಕ್ವೇರ್ ಮತ್ತು ಮೀನಾಕ್ಷಿ ಕೊಯಿಲ್ ರಸ್ತೆಯ ಮಾಂಸ ಮಾರುಕಟ್ಟೆ, ಐಕಾನಿಕ್ ರಸೆಲ್ ಮಾರುಕಟ್ಟೆ ಮತ್ತು ಸೆಂಟ್ ಮೇರಿ ಚರ್ಚ್ ಎದುರು ಶತಮಾನಗಳಷ್ಟು ಹಳೆಯದಾದ ಬಾವಿ (ರಾಬು ಕಿ ಬೌಡಿ)ಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲಾಗುತ್ತಿದೆ.
ಇನ್ನು ಹದಗೆಟ್ಟು ಹೋಗಿದ್ದ ರಸ್ತೆ ದುರಸ್ತಿ, ಚರಂಡಿ, ಕಲ್ಲುಹಾಸು, ಸ್ಮಾರ್ಟ್ ಲೈಟಿಂಗ್ ಕಾಮಗಾರಿ ಕೂಡ ನಡೆದಿದೆ. ಅಲ್ಲದೇ ಜನರಿಗೆ ಸದಾ ಕಿರಿಕಿರಿ ಉಂಟುಮಾಡುವ ಪಾರ್ಕಿಂಗ್ ಅನ್ನು ಇನ್ನಷ್ಟು ವ್ಯವಸ್ಥಿತಗೊಳಿಸಲಾಗುವುದು. ಇದರ ಜೊತೆಗೆ ಉದ್ಯಾನಗಳು ಮತ್ತು ಕಾರಂಜಿಗಳ ಜೊತೆಗೆ ಗಡಿಯಾರ ಗೋಪುರವೂ ಶಿವಾಜಿ ನಗರವನ್ನು ಇನ್ನಷ್ಟು ಸುಂದರಗೊಳಿಸಲಿದೆ.
ಈಗಾಗಲೇ ಮುಕ್ಕಾಲು ಭಾಗ ಪೂರ್ಣಗೊಂಡಿರುವ ಕಾಮಗಾರಿಯನ್ನು ಬಿಬಿಎಂಪಿ ವಿಶೇಷ ಆಯುಕ್ತರಾದ ರವೀಂದ್ರ ಪಿಎನ್ ಮತ್ತು ವಲಯ ಜಂಟಿ ಆಯುಕ್ತೆ ಶಿಲ್ಪಾ ಅವರು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: Traffic Rules: ಟ್ರಾಫಿಲ್ ರೂಲ್ಸ್ ಬ್ರೇಕ್ ಮಾಡ್ತೀರಾ? 5 ಸೆಕೆಂಡ್ನಲ್ಲಿ ವಿಡಿಯೋ ಸಮೇತ ಬರುತ್ತೆ ಫೈನ್ ರಶೀದಿ!
ಮುಕ್ತಾಯದ ಹಂತದಲ್ಲಿ ಕಾಮಗಾರಿ
ಈ ವೇಳೆ ಮಾತನಾಡಿದ ರವೀಂದ್ರ ಅವರು, "ಹೆಚ್ಚುವರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಶಾಸಕ ರಿಜ್ವಾನ್ ಅರ್ಷದ್ ಹಾಗೂ ವಿವಿಧ ವರ್ತಕ ಸಂಘಗಳು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದವು. ಇದೀಗ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಆದ್ರೆ ರಸೆಲ್ ಮಾರುಕಟ್ಟೆಗೆ ನಿರ್ದಿಷ್ಟವಾಗಿ ಅದರ ಮೇಲ್ಛಾವಣಿ, ಶೌಚಾಲಯ ಮತ್ತು ಇತರ ಸ್ಥಳಗಳಲ್ಲಿ ಕೆಲವು ಕಾಮಗಾರಿಗಳ ಅಗತ್ಯವಿದೆ. ಇದಕ್ಕಾಗಿ ಹೆಚ್ಚುವರಿ ಹಣದ ಅಗತ್ಯತೆ ಇದ್ದು, ಅದಕ್ಕಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ಮೂಲಕ ಸರ್ಕಾರಕ್ಕೆ ಕಡತಗಳನ್ನು ಸಲ್ಲಿಸಲಾಗುವುದು" ಎಂದಿದ್ದಾರೆ.
Reviewed progress on various civic related works across Shivajinagar with the officials and our volunteers on the ground. pic.twitter.com/QDET8UZ4Xy
— Rizwan Arshad (@ArshadRizwan) December 7, 2022
ಪಾರಂಪರಿಕ ಕಟ್ಟಡಗಳ ನವೀಕರಣ
ಅಲ್ಲದೇ, ಈಗಾಗಲೇ ಶೇ 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ಸುಮಾರು 2 ಕೋಟಿ ರೂ. ಖರ್ಚು ತಗಲುತ್ತದೆ. ಜನವರಿ 15 ರೊಳಗೆ ನಾವು ‘ಹೊಸ ಶಿವಾಜಿನಗರ’ವನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸುತ್ತೇವೆ ಎಂದು ಅರ್ಷದ್ ಹೇಳಿದರು.
Asphalting work at the Cubbon road in Sampangiram Nagar, Kodandaram Layout + Osborne road in Ulsoor and in many other roads across Shivajinagar is complete. pic.twitter.com/0c9r3ns1Jq
— Rizwan Arshad (@ArshadRizwan) December 2, 2022
ಇದನ್ನೂ ಓದಿ: Shootout At Bengaluru: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು; ಬಿಲ್ಡರ್ ಮೇಲೆ ಫೈರಿಂಗ್
ನಮ್ಮಲ್ಲಿ ಅಭಿವೃದ್ಧಿ ಕೆಲಸಗಳು ಆಗಾಗ ನಡೆಯುತ್ತಿರುತ್ತವೆ ಅನ್ನೋದು ನಿಜ. ಆದ್ರೆ ಅದನ್ನು ನಾವು ಮುಂದೆ ಹೇಗೆ ಇಟ್ಟುಕೊಂಡು ಹೋಗುತ್ತೇವೆ. ಹೇಗೆ ಮೆಂಟೇನ್ ಮಾಡುತ್ತೇವೆ ಅನ್ನೋದೂ ಮುಖ್ಯವಾಗುತ್ತೆ.
ಒಟ್ನಲ್ಲಿ ಶಿವಾಜಿನಗರ ಸ್ವಚ್ಛವಾಗಿ, ಸುಂದರವಾಗಿ ಕಾಣುತ್ತೆ ಅನ್ನೋದೇ ಸಮಾಧಾನಕರ ಸಂಗತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ