Shivagange: ದಕ್ಷಿಣ ಕಾಶಿ ಶಿವಗಂಗೆಯಲ್ಲಿ ನೀರು- ಆಹಾರವಿಲ್ಲದೆ ಕೋತಿಗಳ ಪರದಾಟ

ಪ್ರವಾಸಿ ಕ್ಷೇತ್ರಗಳಲ್ಲಿ ಪ್ರವಾಸಿಗರೇ ನೀಡುವ ಆಹಾರ ನಂಬಿ ಬದುಕಿದ್ದ ಕೋತಿಗಳಿಗೆ ಬೆಟ್ಟದಲ್ಲಿ ನೀರು, ಆಹಾರ ಸಿಗುತ್ತಿಲ್ಲ. ಭಕ್ತರು ತರುವ ಬಾಳೆಹಣ್ಣು, ತೆಂಗಿನಕಾಯಿಯನ್ನು ಕಸಿದು ತಿನ್ನುತ್ತಿದ್ದ ಕೋತಿಗಳು ಭಕ್ತರ ಬರುವಿಕೆಗಾಗಿ ಎದುರುನೋಡುತ್ತಿವೆ. 

news18-kannada
Updated:August 13, 2020, 2:00 PM IST
Shivagange: ದಕ್ಷಿಣ ಕಾಶಿ ಶಿವಗಂಗೆಯಲ್ಲಿ ನೀರು- ಆಹಾರವಿಲ್ಲದೆ ಕೋತಿಗಳ ಪರದಾಟ
ಶಿವಗಂಗೆ ಬೆಟ್ಟದಲ್ಲಿ ಸ್ವಯಂ ಸೇವಕರು ನೀಡಿದ ಆಹಾರವನ್ನು ತಿನ್ನುತ್ತಿರುವ ಕೋತಿಗಳು.
  • Share this:
ನೆಲಮಂಗಲ (ಆ. 13): ಕೊರೊನಾ ಲಾಕ್‌ಡೌನ್ ಪರಿಣಾಮ ಕೇವಲ ಮನುಷ್ಯರ ಮೇಲಷ್ಟೇ ಅಲ್ಲ, ಮೂಕ ಪ್ರಾಣಿಗಳ ಮೇಲೂ ಬೀರಿದೆ. ಮನುಷ್ಯರ ಜೊತೆ ಪ್ರಾಣಿಗಳಿಗೂ ಆಹಾರ ಹಾಗೂ ನೀರಿಗಾಗಿ ಆಹಾಕಾರ ಶುರುವಾಗಿದ್ದು, ಕೆಲವೆಡೆ ಪ್ರಾಣಿಗಳು ಸಹ ನೀರು, ಆಹಾರವಿಲ್ಲದೆ ಪರದಾಡುತ್ತಿವೆ. ಜನರಿಗೇನೋ ಆಹಾರ ಸಿಗುತ್ತಿದೆ. ಆದರೆ ಬೆಟ್ಟ- ಗುಡ್ಡದಲ್ಲಿರುವ ಪ್ರಾಣಿ-ಪಕ್ಷಿಗಳ ಗತಿಯೇನು? ಎಂಬುದು ಮಾತ್ರ ತಿಳಿಯದಂತಾಗಿದೆ. ಬೆಟ್ಟಕ್ಕೆ ಬರುವ ಭಕ್ತರನ್ನೇ ಕೋತಿಗಳು ಕಾದು ಕುಳಿತಿವೆ.

ನೆಲಮಂಗಲದ ಪ್ರವಾಸಿ ಕೇಂದ್ರಗಳಾದ ಶಿವಗಂಗೆ, ಸಿದ್ದರಬೆಟ್ಟ, ಕೆಂಗಲ್ ಬೆಟ್ಟ, ರಾಮದೇವರ ಬೆಟ್ಟ, ಮಹಿಮರಂಗನ ಬೆಟ್ಟ ಸೇರಿದಂತೆ ನೆರೆಯ ಜಿಲ್ಲೆಯ ಸಾವನದುರ್ಗ,  ಭೈರವದುರ್ಗ, ಹುತ್ರಿದುರ್ಗ, ರೇವಣ್ಣಸಿದ್ದೇಶ್ವರ ಬೆಟ್ಟ, ನಾಮಚಿಲುಮೆ, ಸಿದ್ದಗಂಗಾ ಮಠ, ದೇವರಾಯನ ದುರ್ಗ, ಗೊರವನಹಳ್ಳಿ, ದೊಡ್ಡ ಸಿದ್ದರಬೆಟ್ಟ ಮುಂತಾದ ಪ್ರವಾಸಿ ಕ್ಷೇತ್ರಗಳಲ್ಲಿ ಪ್ರವಾಸಿಗರು ನೀಡುತ್ತಿದ್ದ ಆಹಾರದಿಂದಲೇ ಅರ್ಧ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವಾನರ ಸೇನೆ ಈಗ ಹಸಿವ ನೀಗಿಸಲು ಹೋರಾಟ ಮಾಡುತ್ತಿವೆ.

ಆಹಾರಕ್ಕಾಗಿ ಕಾದಿರುವ ವಾನರ ಸೈನ್ಯ:

ಪ್ರವಾಸಿ ಕ್ಷೇತ್ರಗಳಲ್ಲಿ ಪ್ರವಾಸಿಗರೇ ನೀಡುವ ಆಹಾರ ನಂಬಿ ಬದುಕಿದ್ದ ಕೋತಿಗಳಿಗೆ ಬೆಟ್ಟದಲ್ಲಿ ನೀರು, ಆಹಾರ ಸಿಗುತ್ತಿಲ್ಲ. ಭಕ್ತರು ತರುವ ಬಾಳೆಹಣ್ಣು, ತೆಂಗಿನಕಾಯಿಯನ್ನು ಕಸಿದು ತಿನ್ನುತ್ತಿದ್ದ ಕೋತಿಗಳು ಭಕ್ತರ ಬರುವಿಕೆಗಾಗಿ ಎದುರುನೋಡುತ್ತಿವೆ.  ಪ್ರತಿನಿತ್ಯ ಗವಿಯಿಂದ ಹೊರಬಂದು ರಸ್ತೆಯಲ್ಲಿ ಸಾರ್ವಜನಿಕರು ಏನಾದರೂ ತಿನ್ನಲು ಆಹಾರ ನೀಡುತ್ತಾರೇನೋ ಎಂದು ಗುಂಪು ಗುಂಪಾಗಿ ರಸ್ತೆ ಬದಿಯಲ್ಲಿ ಕಾಯುತ್ತಿವೆ.

ಇದನ್ನೂ ಓದಿ: E-Passport: 2021ಕ್ಕೆ ಭಾರತದಲ್ಲಿ ಇ-ಪಾಸ್​ಪೋರ್ಟ್ ಜಾರಿ; ಇದರ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ

ಬಿಸಿಲಿನ ತಾಪಮಾನದಿಂದಾಗಿ ಮರ-ಗಿಡಗಳು ಒಣಗಿರುವ ಬೆಟ್ಟದಲ್ಲಿನ ಕೋತಿಗಳು ನೀರು, ಆಹಾರಕ್ಕಾಗಿ ಪರಿತಪಿಸುತ್ತಿವೆ. ಒಣ ಮರಗಳಲ್ಲಿ ಕೋತಿಗಳು ಆಹಾರ ಹುಡುಕುವ ದೃಶ್ಯಗಳು ನೋಡುಗರ ಮನ ಕಲಕುತ್ತಿವೆ. ಕೆಲ ಕೋತಿಗಳು ಊಟ ಇಲ್ಲದೆ ಸಿಕ್ಕ ಎಲೆ, ಕಾಳು, ಕಡ್ಡಿ ತಿಂದು ಜೀವ ಉಳಿಸಿಕೊಂಡಿವೆ. ಕೆಲ ಪ್ರಾಣಿಪ್ರಿಯರು ಈ ಮೂಕಜೀವಗಳ ಪರದಾಟ ನೋಡಲಾಗದೇ ಮುದ್ದೆ, ಹಣ್ಣು ತರಕಾರಿ ತಂದು ಕೊಡುತ್ತಿದ್ದಾರೆ.
ದಕ್ಷಿಣಕಾಶಿ ಶಿವಗಂಗೆ ಸೇರಿದಂತೆ ಹಲವು ಕಡೆ ಸ್ವಯಂಸೇವಕರು ಕೋತಿಗಳ ಆಹಾರ ಹುಡುಕಾಟ ಗಮನಿಸಿ ಸ್ವತಃ ತಂಡ ರಚನೆ ಮಾಡಿಕೊಂಡು ಬೆಟ್ಟ ಏರಿ ನೀರು, ಹಣ್ಣು, ಬಿಸ್ಕತ್ತು ನೀಡುತ್ತಿದ್ದಾರೆ. ಕೆಲವು ಕಡೆ ನೀರಿನ ವ್ಯವಸ್ಥೆಗೆ ಪ್ಲಾಸ್ಟಿಕ್ ಬಿಂದಿಗೆ ಪಾಟ್ ಮಾಡಿ ನೀರು ಇಡುವ ಕೆಲಸಮಾಡಿದ್ದಾರೆ.
Published by: Sushma Chakre
First published: August 13, 2020, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading