ಗಡಿಯಲ್ಲಿ ಶಿವಸೇನೆ ಕಿರಿಕ್: ಉದ್ವಿಗ್ನ ವಾತಾವರಣ; ಎರಡನೇ ದಿನವೂ ಸಾರಿಗೆ ಸಂಚಾರ ಬಂದ್

ಯಾವಾಗ ಕನ್ನಡಿಗರು ಕೆರಳಿದರೋ ಇದನ್ನೇ ನೆಪವನ್ನಾಗಿಸಿಕೊಂಡ ಪುಂಡರು ಮತ್ತೆ ತಮ್ಮ ಪುಂಡಾಟವನ್ನ ಮುಂದುವರೆಸಿದ್ದಾರೆ. ಮತ್ತೆ ಗಡಿಯಲ್ಲಿ ಶಾಂತಿ ಕದಡುವ ಕೃತ್ಯಕ್ಕೆ ಮುಂದಾಗಿದ್ದಾರೆ.

ಬಸ್

ಬಸ್

  • Share this:
ಚಿಕ್ಕೋಡಿ(ಮಾ.14): ಶಿವಸೇನೆ ಯಾವಾಗಲೂ ಗಡಿ ವಿವಾದವನ್ನೇ ಮುಂದಿಟ್ಟುಕೊಂಡು ಸದಾ ಒಂದಿಲ್ಲೊಂದು ಕಿರಿಕ್ ಮಾಡುತ್ತಾ ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಲೆ ಬಂದಿದೆ.  ಕಿರಿಕ್ ಮಾಡುವ ಉದ್ದೇಶದಿಂದಲೆ ಶಿವಸೇನೆ ಪುಂಡರು ಕಳೆದ ನಾಲ್ಕು ದಿನಗಳ ಹಿಂದೆ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿದ್ದ ಅಂಗಡಿಗಳಲ್ಲಿನ ಕನ್ನಡ ನಾಮ ಫಲಕಗಳಿಗೆ ಮಸಿ ಬಳಿಯುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ಅಲ್ಲದೇ ಗೊಡ್ಡು ಬೆದರಿಕೆ ಒಡ್ಡಿರುವ ಶಿವಸೇನೆ ಪುಂಡರು ಅಂಗಡಿ ಮಾಲೀಕರಿಗೆ ಬೆದರಿಕೆಯನ್ನು ಹಾಕಿದ್ದರು.

ಶಿವಸೇನೆ ಪುಂಡಾಟ ಕನ್ನಡಿಗರ ಭಾವನೆಗಳನ್ನ ಕೆರಳಿಸಿತ್ತು. ಹೀಗಾಗಿ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಬೆಳಗಾವಿಯಲ್ಲಿ ಮಸಿ ಬಳಿಯುವ ಅಭಿಯಾನ ನಡೆಸಿದರು. ಮೊದಲಿಗೆ ಕನ್ನಡದ ಕಟ್ಟಾಳುಗಳು ಮರಾಠಿ ಅಕ್ಷರಗಳಿಗೆ ಮಸಿ ಬಳಿದರು. ಮರಾಠಿ ಪೋಸ್ಟರ್​​ಗಳನ್ನ ಹರಿದು ಬಿಸಾಕಿದರು. ಆನಂತರ ನೇರವಾಗಿ ಬೆಳಗಾವಿ ಹೃದಯ ಭಾಗದ ರಾಮಲಿಂಗ ಕಿಂಡ್ ಗಲ್ಲಿಯ ಶಿವಸೇನೆ, ಎಂಇಎಸ ಕಚೇರಿ ನಾಮಫಲಕಕ್ಕೆ ಮಸಿ ಬಳಿಯಲು ಮುಂದಾಗಿದ್ದರು. ಅಷ್ಟರಲ್ಲಿ ತಕ್ಷಣವೇ ಪೊಲೀಸರು ಕರವೇ ಕಾರ್ಯಕರ್ತರನ್ನ ದಾರಿ ಮಧ್ಯಯೇ ತಡೆದಿದ್ದಾರೆ. ಆಗ ಎದುರಿಗೆ ಬಂದ ಶಿವಸೇನೆ ಜಿಲ್ಲಾಧ್ಯಕ್ಷ ಪ್ರಕಾಶ ಶಿರೋಳಕರ  ವಾಹನವನ್ನ ತಡೆದಿದ್ದಾರೆ. ಈ ಸಂದರ್ಭದಲ್ಲಿ ಕರವೇ ಮತ್ತು ಶಿವಸೇನೆ ಪುಂಡರ ಮಧ್ಯೆ ವಾಗ್ವಾದ ನಡೆದಿದೆ.

Explainer: ಮಾರ್ಚ್ 15 ಮತ್ತು 16 ರಂದು ಬ್ಯಾಂಕ್ ಮುಷ್ಕರ: ಬ್ಯಾಂಕಿಂಗ್‌ ಸೇವೆಗಳ ಮೇಲೆ ಭಾರೀ ವ್ಯತ್ಯಯ?

ಯಾವಾಗ ಕನ್ನಡಿಗರು ಕೆರಳಿದರೋ ಇದನ್ನೇ ನೆಪವನ್ನಾಗಿಸಿಕೊಂಡ ಪುಂಡರು ಮತ್ತೆ ತಮ್ಮ ಪುಂಡಾಟವನ್ನ ಮುಂದುವರೆಸಿದ್ದಾರೆ. ಮತ್ತೆ ಗಡಿಯಲ್ಲಿ ಶಾಂತಿ ಕದಡುವ ಕೃತ್ಯಕ್ಕೆ ಮುಂದಾಗಿದ್ದಾರೆ. ಕೊಲ್ಲಾಪುರ ಜಿಲ್ಲೆಯ ಶಿವಸೇನೆ ಮುಖಂಡು ಕರ್ನಾಟಕದ ಬಸ್​​ಗಳನ್ನ  ಟಾರ್ಗೆಟ್ ಮಾಡಿ ಬಸ್ ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಮಹಾರಾಷ್ಟ್ರಕ್ಕೆ ಬಸ್ ಗಳನ್ನ ತರದಂತೆ ಬೆದರಿಕೆ ಹಾಕಿ ಪುಂಡಾಟ ನಡೆಸಿದ್ದಾರೆ. ಅಲ್ಲದೆ ನಿನ್ನೆಯೂ ಕೂಡ ಮಹಾರಾಷ್ಟದ ಗಡಿ ಗ್ರಾಮ ಕಾಗಲನಲ್ಲೂ ಕೂಡ ಶಿವಸೇನೆ ಮುಖಂಡರು ಬಂದು ಉದ್ದಟತನ ಪ್ರದರ್ಶಿಸಿ ಕರ್ನಾಟಕದ ಲಾರಿಗಳ ಮೇಲೆ ಮರಾಠಿ ಬೋರ್ಡ್ ಹಾಕಿ ಗಡಿಯಲ್ಲಿ ಮತ್ತೆ ಕಿರಿಕ್ ಆರಂಭಿಸಿದ್ದಾರೆ.

ಸಾರಿಗೆ ಸಂಚಾರ ಬಂದ್

ಇನ್ನು ಗಡಿಯಲ್ಲಿ ಶಿವಸೇನೆ ಪುಂಡಾಟದ ಹಿನ್ನಲೆ ಎರಡು ಕಡೆಯ ಸರ್ಕಾರಿ ಸಾರಿಗೆ ಸಂಚಾರವನ್ನ ಬಂದ್ ಮಾಡಲಾಗಿದೆ. ಇದರಿಂದಾಗಿ ವಾಯುವ್ಯ ಕರ್ನಾಟಕ ಸಾರಿಗೆಗೆ ಒಂದೇ ದಿನಕ್ಕೆ 35 ಲಕ್ಷಕ್ಕೂ ಹೆಚ್ಚು ಆದಾಯದಲ್ಲಿ ನಷ್ಟವಾಗಿದೆ. ಅಲ್ಲದೆ ಮಹಾರಾಷ್ಟ್ರದ ಸಾರಿಗೆ ಬಸ್ ಗಳನ್ನ ರಾಜ್ಯ ಬಂದ್ ಮಾಡಿದ ಹಿನ್ನಲೆ ಲಕ್ಷಾಂತರ ರೂಪಾಯಿ ಮಹಾ ಸಾರಿಗೆ ಇಲಾಖೆಗೆ ನಷ್ಟವಾಗಿದೆ. ಪ್ರತಿದಿನವೂ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದಿಂದ 400 ಕ್ಕೂ ಹೆಚ್ಚು ಬಸ್ ಗಳು ಮಹಾರಾಷ್ಟ್ರಕ್ಕೆ ಹೋಗುತ್ತವೆ. 250 ಕ್ಕೂ ಹೆಚ್ಚು ಮಹಾರಾಷ್ಟ್ರದಿಂದ ಮಹಾ ಸಾರಿಗೆ ಬಸ್ ಗಳು ರಾಜ್ಯಕ್ಕೆ ಬರುತ್ತವೆ ಆದ್ರೆ ಶಿವಸೇನೆ ಪುಂಡಾಟಿಕೆಯಿಂದಾಗಿ ಎರಡನೇ ದಿನವಾದ ಇಂದೂ ಸಹ ಎರಡು ಕಡೆಯ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಬರಿ ಗಡಿಯವರೆಗೆ ಮಾತ್ರ ಬಸ್ ಗಳು ತೆರಳುತ್ತಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ.

ಪ್ರಯಾಣಿಕರ ಪರದಾಟ: ಗಡಿ ಉದ್ವಿಗ್ನ

ಇನ್ನು ನಿತ್ಯ ಬೆಳಗಾವಿ ಗಡಿಯ ಚಿಕ್ಕೋಡಿ, ಅಥಣಿ, ಕಾಗವಾಡ, ನಿಪ್ಪಾಣಿ, ರಾಯಬಾಗ ಹಾಗೂ ಹುಕ್ಕೇರಿ ತಾಲೂಕಿನಿಂದ ಮಹಾರಾಷ್ಟ್ರ ಕೊಲ್ಲಾಪುರ, ಸಾಂಗಲಿ, ಮೀರಜ್ ಗೆ ಕೂಲಿ ಕೆಲಸ, ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದ್ರೆ ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಎಲ್ಲರೂ ಪರದಾಡುವಂತಾಗಿದೆ. ಈಗಲೂ ಸಹ ಗಡಿಯಲ್ಲಿ ಶಿವಸೇನೆ ತನ್ನ ಪುಂಡಾಟಿಕೆ ಮುಂದುವರೆಸಿದ ಪರಿಣಾಮ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು. ಪುಂಡರಿಗೆ ಹೆದರುತ್ತಲೆ ಖಾಸಗಿ ವಾಹನಗಳ ಮೂಲಕ ಪ್ರಯಾಣ ಮಾಡಿ ಕೆಲಸ ಹಾಗೂ ಆಸ್ಪತ್ರೆಗಳಿಗೆ ತೆರಳುವಂತಾಗಿದೆ.
Published by:Latha CG
First published: