ದೀಪದ ಹೊಗೆಯಲ್ಲಿ ಶೀರೂರು ಶ್ರಿಗಳ ಚಿತ್ರ ಬಿಡಿಸಿ ಶ್ರದ್ದಾಂಜಲಿ ಅರ್ಪಿಸಿದ ಕಲಾವಿದ ಮಂಜುನಾಥ್

news18
Updated:July 19, 2018, 10:28 PM IST
ದೀಪದ ಹೊಗೆಯಲ್ಲಿ ಶೀರೂರು ಶ್ರಿಗಳ ಚಿತ್ರ ಬಿಡಿಸಿ ಶ್ರದ್ದಾಂಜಲಿ ಅರ್ಪಿಸಿದ ಕಲಾವಿದ ಮಂಜುನಾಥ್
news18
Updated: July 19, 2018, 10:28 PM IST
-ಮಂಜುನಾಥ ಯಡಳ್ಳಿ,  ನ್ಯೂಸ್ 18 ಕನ್ನಡ

ಧಾರವಾಡ( ಜುಲೈ 19) :  ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳು ವಿಧಿವಶವಾದ ಹಿನ್ನೆಲೆ ಧಾರವಾಡಲ್ಲೊಬ್ಬ ಕಲಾವಿದ ಶ್ರೀಗಳ ಭಾವಚಿತ್ರವನ್ನ ವೈವಿಧ್ಯಮಯವಾಗಿ ರಚನೆ ಮಾಡುವ ಮೂಲಕ ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಧಾರವಾಡ ನಗರದ ದಾನೇಶ್ವರಿನಗರದ ಮಂಜುನಾಥ ಬಾರಗೇರ ಎಂಬ ಕಲಾವಿದ ದೀಪದ ಹೊಗೆಯಿಂದ ಶ್ರೀಗಳ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾನೆ. ಈ ಕೆಲಯನ್ನ ಕಳೆದ ಕೆಲ ತಿಂಗಳ ಹಿಂದೆ ಕಲಿತ ಮಂಜುನಾಥ ವಿಧಾನಸೌಧ, ಚಿತ್ರ ನಟರು, ಮದರ ತೇರೆಸಾ ಸೇರಿದಂತೆ ನಾಡಿನ ಗಣ್ಯರ ಚಿತ್ರವನ್ನ ಈ ಹೊಗೆ ಕಲೆಯಿಂದ ಚಿತ್ರ ಬಿಡಿಸಿದ್ದಾನೆ.

ಈ ಕಲೆ ಮಾಡುತ್ತ ಬಂದಿರುವ ಮಂಜುನಾಥ, ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳು ವಿಧಿವಶವಾದ ಸುದ್ದಿ ತಿಳಿದು ವಿಶೇಷ ದೀಪದ ಹೋಗೆಯಲ್ಲಿ ಶ್ರಿಗಳ ಸುಂದರವಾದ ಭಾವಚಿತ್ರವನ್ನ ರಚಿಸಿ ಶ್ರದ್ಧಾಂಜಲಿಯನ್ನ ಅರ್ಪಣೆ ಮಾಡಿದ್ದಾರೆ.

ಈ ಕಲೆ ರಾಜ್ಯದಲ್ಲಿ ಯಾರು ಮಾಡಿಲ್ಲ, ಇದೇ ಮೊದಲ ಬಾರಿಗೆ ದೀಪದ ಹೊಗೆಯಲ್ಲಿ ಚಿತ್ರ ಬಿಡಿಸುವ ಪ್ರಯೋಗ ಮಾಡಿದ್ದೆನೆ. ಇದು ಯಶಸ್ವಿಯಾಗಿದ್ದು ಮುಂದೆ ಇದರಲ್ಲಿಯೇ ಸಾಧನೆ ಮಾಡಬೇಕು ಎಂದು ಕಲಾವಿದ ಮಂಜುನಾಥ ಹೇಳುತ್ತಾರೆ.

 
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ