News18 India World Cup 2019

ಶಿರಾಡಿ ಘಾಟ್​ ಇಂದಿನಿಂದ ಲಘುವಾಹನ ಸಂಚಾರಕ್ಕೆ ಮುಕ್ತ


Updated:September 5, 2018, 9:38 AM IST
ಶಿರಾಡಿ ಘಾಟ್​ ಇಂದಿನಿಂದ ಲಘುವಾಹನ ಸಂಚಾರಕ್ಕೆ ಮುಕ್ತ
ಶಿರಾಡಿ ಘಾಟ್ ರಸ್ತೆ

Updated: September 5, 2018, 9:38 AM IST
ನ್ಯೂಸ್​18 ಕನ್ನಡ

ಹಾಸನ (ಸೆ. 5): ಹಾಸನ-ಮಂಗಳೂರು ಮಾರ್ಗದ ಶಿರಾಡಿ ಘಾಟ್​ ಇಂದು ಮಧ್ಯಾಹ್ನದಿಂದ ಮರುಸಂಚಾರಕ್ಕೆ ಮುಕ್ತವಾಗಲಿದೆ. ಇಂದಿನಿಂದ ಸಣ್ಣ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದೊಡ್ಡ ಪ್ರಮಾಣದ ವಾಹನಗಳನ್ನು ನಿಷೇಧಿಸಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.

ಇಂದಿನಿಂದ ಶಿರಾಡಿ ಘಾಟ್​ನಲ್ಲಿ ಮರುಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿರುವುದರಿಂದ ಏನಾದರೂ ಹೆಚ್ಚು ಕಡಿಮೆಯಾದರೆ ನೀವೇ ಹೊಣೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗೆ ಡಿಸಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ. ಇಂದು ಮದ್ಯಾಹ್ನದಿಂದ ಶಿರಾಡಿಘಾಟ್​ನಲ್ಲಿ ಲಘುವಾಹನ ಸಂಚಾರ ಆರಂಭವಾಗಲಿದೆ.

ಭಾರೀ ಮಳೆಯಿಂದಾಗಿ ಚಾರ್ಮಾಡಿಯಲ್ಲೂ ಗುಡ್ಡ ಕುಸಿದು ಸಂಚಾರ ಸ್ತಬ್ಧವಾಗಿತ್ತು. ಹಾಗೇ, ಶಿರಾಡಿ ಘಟ್​ ಕೂಡ ಬಂದ್​ ಆಗಿದ್ದರಿಂದ ಮಂಗಳೂರು ಕಡೆಗೆ ಹೋಗುವವರಿಗೆ ಸಂಪರ್ಕವೇ ಇಲ್ಲದಂತಾಗಿತ್ತು. ಬಳಿಕ, ಚಾರ್ಮಾಡಿ ಘಾಟ್​ನಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಶಿರಾಡಿ ಘಾಟ್​ ಬಂದ್​ ಆಗಿದ್ದರಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಮಂಗಳೂರು ಭಾಗಕ್ಕೆ ಹೋಗುವವರು ಚಾರ್ಮಾಡಿಯನ್ನೇ ಅವಲಂಬಿಸುವಂತಾಗಿತ್ತು. ಇದರಿಂದಾಗಿ ಅಲ್ಲೂ ಟ್ರಾಫಿಕ್​ ಜಾಮ್​ ಹೆಚ್ಚಾಗಿತ್ತು. ಈಗ ಶಿರಾಡಿ ಘಾಟ್​ನಲ್ಲಿ ಲಘು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದರಿಂದ ಚಾರ್ಮಾಡಿಯ ಟ್ರಾಫಿಕ್​ ಸ್ವಲ್ಪ ಕಡಿಮೆಯಾಗಲಿದೆ.

ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಆರಂಭವಾಗಲಿದೆ. ಮಳೆಯಿಂದಾಗಿ ಗುಡ್ಡ ಕುಸಿತ ಮತ್ತು ಕೆಲವೆಡೆ ರಸ್ತೆ ಕುಸಿತದಿಂದಾಗಿ ಅನಿರ್ದಿಷ್ಟಾವಧಿಗೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಬೆಂಗಳೂರು ಮಂಗಳೂರು ಹೆದ್ದಾರಿ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ರಸ್ತೆಯಲ್ಲಿ ಮರುಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾದಂತಾಗಿದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...