ಇಂದು ಶಿರಾ, ಆರ್ ​ಆರ್ ನಗರ ಉಪಚುನಾವಣೆ; ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮತದಾನದ ಕೊನೆ ಅವಧಿಯ ಒಂದು ತಾಸು ಮಾತ್ರ ಪಾಸಿಟಿವ್ ಪೇಷಂಟ್​ಗಳಿಗೆ ಹಕ್ಕು ಚಲಾವಣೆಗೆ ಅವಕಾಶ ನೀಡಲಾಗುವುದು. ಪಿಪಿಇ ಕಿಟ್ ಧರಿಸಿಯೇ ಕೊನೆ ಅವಧಿಯಲ್ಲಿ  ಚುನಾವಣಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಿಂದ ಬಂದು ಮತದಾನ‌ ಮಾಡುವ ರೋಗಿಗಳಿಗೆ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ಪೋಲಿಂಗ್ ಬೂತ್​ನಲ್ಲಿರುವ ಸಿಬ್ಬಂದಿ

ಪೋಲಿಂಗ್ ಬೂತ್​ನಲ್ಲಿರುವ ಸಿಬ್ಬಂದಿ

 • Share this:
  ಬೆಂಗಳೂರು; ಜೆಡಿಎಸ್​ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು (ನ. 3) ಉಪಚುನಾವಣೆ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಬೆಳಗ್ಗೆ 7ಗಂಟೆಗೆ ಪ್ರಾರಂಭಗೊಂಡಿದೆ. ಕಾಂಗ್ರೆಸ್, ಜೆಡಿಎಸ್​, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಆಯಾ ಪಕ್ಷದ ನಾಯಕರು ಕಾರ್ಯಕರ್ತರ ಮೂಲಕ ಸಕಲ ಪ್ರಯತ್ನವನ್ನು ನಡೆಸಿದ್ದು, ಅಂತಿಮವಾಗಿ ಮತದಾರ ಇಂದು ಯಾರಿಗೆ ಮತ ಹಾಕಲಿದ್ದಾರೆ ಎಂಬುದು ನವೆಂಬರ್ 10ಕ್ಕೆ ಗೊತ್ತಾಗಲಿದೆ. 

  ಶಿರಾದಲ್ಲಿ ಕಾಂಗ್ರೆಸ್​ನಿಂದ ಟಿ.ಬಿ ಜಯಚಂದ್ರ, ಬಿಜೆಪಿಯಿಂದ ರಾಜೇಶ್ ಗೌಡ ಹಾಗೂ ಜೆಡಿಎಸ್ ನ ಅಮ್ಮಾಜಮ್ಮ ಅಭ್ಯರ್ಥಿಗಳಾಗಿದ್ದಾರೆ. ಆರ್​ಆರ್​ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕುಸುಮಾ, ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್​ನಿಂದ ಕೃಷ್ಣಮೂರ್ತಿ ಸ್ಪರ್ಧೆಗೆ ಇಳಿದಿದ್ದಾರೆ.

  ಎರಡು ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ವಿಶೇಷ ಅಂದರೆ ಪ್ರತಿಯೊಬ್ಬ ಮತದಾರರಿಗೂ ಬಲಗೈಗೆ ಗ್ಲೌಸ್​ ನೀಡುತ್ತಿದ್ದು, ಅದನ್ನು ಧರಿಸಿಯೇ ಪ್ರತಿಯೊಬ್ಬರು ಮತ ಚಲಾವಣೆ ಮಾಡಬೇಕು ಹಾಗೂ  ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಮತದಾನದ ಕೊನೆ ಅವಧಿಯ ಒಂದು ತಾಸು ಮಾತ್ರ ಪಾಸಿಟಿವ್ ಪೇಷಂಟ್ ಗಳಿಗೆ ಹಕ್ಕು ಚಲಾವಣೆಗೆ ಅವಕಾಶ ನೀಡಲಾಗುವುದು. ಪಿಪಿಇ ಕಿಟ್ ಧರಿಸಿಯೇ ಕೊನೆ ಅವಧಿಯಲ್ಲಿ  ಚುನಾವಣಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಿಂದ ಬಂದು ಮತದಾನ‌ ಮಾಡುವ ರೋಗಿಗಳಿಗೆ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಅಹಿತಕರ ಘಟನೆ, ಅಕ್ರಮ ಚಟುವಟಿಕೆ ತಡೆಯಲು 24/7 ಫ್ಲೈಯಿಂಗ್ ಸ್ಕ್ವ್ಯಾಡ್ ಕಣ್ಗಾವಲು ಇಡಲಾಗಿದೆ.

  ಇದನ್ನು ಓದಿ: ಆರ್​ಆರ್​​ ನಗರ ಉಪಚುನಾವಣೆ: ನ.4ರವರೆಗೆ ನಿಷೇಧಾಜ್ಞೆ, ನಾಳೆವರೆಗೆ ಮದ್ಯ ಮಾರಾಟ ನಿಷೇಧ

  ಆರ್​ಆರ್​ ನಗರ ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ ಅತಿ ಹೆಚ್ಚು ಬಂದೋಬಸ್ತ್ ಕಲ್ಪಿಸಲಾಗಿದೆ. ಮೊಬೈಲ್ ಸ್ಕ್ವಾಡ್ ನಿಯೋಜನೆ ಮಾಡಲಾಗಿದ್ದು, ಎಲ್ಲಾ ಬೂತ್ ಗಳಿಗೆ ತೆರಳಿ ಸೂಪರ್ ವೈಸ್ ಮಾಡುವುದು ಇವರ ಕೆಲಸವಾಗಿರುತ್ತದೆ.  ಕಾನೂನು ಸುವ್ಯವಸ್ಥೆ ಸಲುವಾಗಿ 36 ಪಿಎಸ್ಐಗಳನ್ನು ನೇಮಕ ಮಾಡಲಾಗಿದೆ. ಇಷ್ಟೇ ಅಲ್ಲದೇ 21  ಮಂದಿ ಇನ್ಸ್‌ಪೆಕ್ಟರ್​​ಗಳನ್ನು ನೇಮಿಸಲಾಗಿದೆ. ಮೂರು ಸಿಆರ್​ಪಿಎಫ್​ ತುಕಡಿ ನಿಯೋಜನೆ ಮಾಡಲಾಗಿದೆ. 19 ಕೆಎಸ್​ಆರ್​​ಪಿ ತುಕಡಿ, 20 ಸಿಎಆರ್​ ತುಕಡಿ ನಿಯೋಜಿಸಲಾಗಿದೆ.  ಆರ್​​ ಆರ್​ ನಗರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, 82 ಸೂಕ್ಷ್ಮ ಮತಗಟ್ಟೆಗಳು, 596  ಸಾಮಾನ್ಯ ಮತಗಟ್ಟೆಗನ್ನು ಸ್ಥಾಪಿಸಲಾಗಿದೆ.
  Published by:HR Ramesh
  First published: