ಪ್ರಕಾಶ್(Prakash) ಖಾಸಗಿ ಬಸ್ಗಳ ಮಾಲೀಕ ಪ್ರಕಾಶ್ ಅವ್ರ ಪಾರ್ಥೀವ ಶರೀರವನ್ನು ಝೀರೋ ಟ್ರಾಫಿಕ್(Zero Traffic)ನಲ್ಲಿ ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯಲಾಗಿದೆ. ಪ್ರಕಾಶ್ ಅವರು ಅಷ್ಟು ಅಪಾರ ಪ್ರೀತಿ ಗಳಿಸಿದ್ದರು. ಎಲ್ಲರಿಗೂ ಇವರನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ವಿಧಿಯಾಟವೇ ಬೇರೆಯಾಗಿತ್ತು ಸಾಲದ ಸುಳಿಯಲ್ಲಿನ ಸಿಲುಕಿದ ಪ್ರಕಾಶ್ ಸೂಸೈಡ್(Suicide) ಮಾಡಿಕೊಂಡಿದ್ದಾರೆ. ಕಾಫಿ ಡೇ ಸಿದ್ದಾರ್ಥ್(Coffee Day Siddhartha) ರೀತಿಯಲ್ಲೇ ಶರಾವತಿ ನದಿ(Sharavati River)ಗೆ ಹಾರಿ ಪ್ರಕಾಶ್ ಸೂಸೈಡ್ ಮಾಡಿಕೊಂಡಿದ್ದಾರೆ. ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಕಷ್ಟದಿಂದ ಬೆಳೆದು ಹೆಸರು ಮಾಡಿದವರು. ಚಿಲ್ಲರೆ ಕಾಸು ಕೂಡಿ ಈ ಮಟ್ಟಕ್ಕೆ ಬಂದಿದ್ದರು. ಸಿದ್ದಾರ್ಥ್ ಸಾವಿನಂತೆಯೇ ಕಾರ್(Car), ಬ್ರಿಡ್ಜ್, ಸಾವು ಮತ್ತೆ ಅದರ ಹಿಂದೆ ಬ್ಯುಸಿನೆಸ್ನ ಮ್ಯಾಟರ್ಗಳಿವೆ. ಎಲ್ಲವೂ ಸುಗಮವಾಗಿ ಹೋಗುತ್ತಿದ್ದಾಗ ಬ್ಯುಸಿನೆಸ್ನಲ್ಲಿ ಲಾಸ್ ಆಗಿ ಪ್ರಕಾಶ್ ಸಾಲ ಮಾಡಿಕೊಂಡಿದ್ದರು. ಆ ಸಾಲದ ಹೊರೆ ಬೆಟ್ಟದಷ್ಟಾಗಿತ್ತು. ಅದನ್ನು ತೀರಿಸಲು ಆಗದೇ ನದಿಗೆ ಹಾರಿ ಸೂಸೈಡ್ ಮಾಡಿಕೊಂಡಿದ್ದಾರೆ. ಅವರನ್ನು ನಂಬಿ ಜೀವನ ನಡೆಸುತ್ತಿದ್ದ ಅದೆಷ್ಟೋ ಕುಟುಂಬಗಳು ಕಣ್ಣೀರುಡುತ್ತಿದೆ. ಮಲೆನಾಡಿಗೆ ಐವತ್ತು-ಅರವತ್ತು ಬಸ್(Bus)ಗಳ ಮೂಲಕ ಸಂಪರ್ಕ ಬೆಸೆಯುವ ಜೊತೆಗೆ ಶಾಲಾ ಪ್ರವಾಸ, ಮದುವೆ ದಿಬ್ಬಣಕ್ಕೂ ಬಸ್ಗಳು ಸಿಗುತ್ತಿತ್ತು. ಕೊರೋನಾ ಸಂಕಷ್ಟದ ನಡುವೆಯೂ ಸಿಬ್ಬಂದಿಗೆ ವೇತನ ನೀಡುವ ಮೂಲಕ ಪ್ರಕಾಶ್ ಮಾದರಿ ಎನಿಸಿದ್ದರು. ಇದ್ದಕ್ಕಿದ್ದ ಹಾಗೇ ಕಳೆದ ಎರಡು ದಿನಗಳ ಹಿಂದೆ ಶರಾವತಿ ನದಿ ತೀರಿದಲ್ಲಿ ಇವರ ಕಾರು ಪತ್ತೆಯಾಗಿತ್ತು.
ಸಾಲದ ಹೊರೆಯಿಂದ ಬೇಸತ್ತು ನದಿಗೆ ಹಾರಿ ಸೂಸೈಡ್!
ಪ್ರಕಾಶ್ ಅವರ ಮೃತ ದೇಹ ಸಾಗರ ತಲುಪಿದಾಗ ಹಿಂದೆ ಸಾಲು-ಸಾಲು ಕಾರು, ಬಸ್ ಸಾಗಿ ಬಂದವು. ಸಾರ್ವಜನಿಕರೇ ಆ ರಸ್ತೆಯನ್ನು ಝೀರೋ ಟ್ರಾಫಿಕ್ ಮಾಡಿದ್ದರು, ಕೊರೋನಾ ಕಾಲದ ಸಂಕಷ್ಟ, ಸಾಲದ ಸುಳಿಯಿಂದಾಗಿ ಪ್ರಕಾಶ್ ಸೂಸೈಡ್ ಮಾಡಿಕೊಂಡಿದ್ದಾರೆ. ಅವರ ಕಾರು ಹಾಗೂ ಫೋನ್ ಪಟಗುಪ್ಪ ಸೇತುವೆಯ ಬಳಿ ಪತ್ತೆಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಖಾಸಗಿ ಬಸ್ ಮಾಲೀಕ ಪ್ರಕಾಶ್(46) ಶುಕ್ರವಾರ ರಾತ್ರಿ 8 ಗಂಟೆಯ ನಂತರ ಕಣ್ಮರೆಯಾಗಿದ್ದರು. ಇದಾದ ಬಳಿಕ ಶರಾವತಿ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಇದನ್ನು ಓದಿ: ಮದ್ಯದ ನಶೆಯಲ್ಲಿ ಮಗನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ತಂದೆ
ಕೊರೋನಾ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದ ಪ್ರಕಾಶ್!
ಪಟಗುಪ್ಪ ಸೇತುವೆಯ ಶರಾವತಿ ಹಿನ್ನೀರಿನಲ್ಲಿ ಶನಿವಾರ ಮುಂಜಾನೆಯಿಂದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಶೋಧಕಾರ್ಯ ನಡೆಸಿದ್ದರು. ಭಾನುವಾರ ಮುಂಜಾನೆಯಿಂದ ಮತ್ತೆ ಶೋಧಕಾರ್ಯ ಮುಂದುವರಿದಿತ್ತು. ಪ್ರಕಾಶ್ ಅವರು ನಾಪತ್ತೆಯಾಗಿರುವ ದಿನದಿಂದ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಆತಂಕಕ್ಕೆ ಒಳಗಾಗಿದ್ದರು. ಕೊರೋನಾ ಸಂಕಷ್ಟಕ್ಕೆ ಸಿಲುಕಿ ಸಾಲ ಮಾಡಿಕೊಂಡಿದ್ದರು. 40 ಬಸ್ಗಳನ್ನು ಓಡಿಸುತ್ತಿದ್ದ ಪ್ರಕಾಶ್ ಜನಮೆಚ್ಚುಗೆ ಗಳಿಸಿದ್ದರು. ಕೊರೋನಾದಿಂದ ಬ್ಯುಸಿನೆಸ್ನಲ್ಲಿ ಲಾಸ್ ಆಗಿತ್ತು.
ಇದನ್ನು ಓದಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ತಪ್ಪಿದ ಅನಾಹುತ? ನೌಕರರ ವಿರುದ್ಧ ಕ್ರಮ
ಕಳೆದ 20 ವರ್ಷಗಳಿಂದ ಪ್ರಕಾಶ್ ಟ್ರಾವೆಲ್ಸ್ ನಡೆಸಲಾಗುತ್ತಿದೆ. ಈ ಬಸ್ಸುಗಳು ಜಿಲ್ಲೆಯಲ್ಲಿ ಚಿರಪರಿಚಿತ ಕೂಡ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ಪ್ರಕಾಶ್ ಬಸ್ ಓಡಾಡುತ್ತಿವೆ. ಕೊರೋನಾ ಲಾಕ್ ಡೌನ್ ನಂತ್ರ ಸಂಸ್ಥೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಕಾಶ್ ಸೂಸೈಡ್ ಮಾಡಿಕೊಂಡಿದ್ದಾರೆ, ಅವರ ಅಂತ್ಯಕ್ರಿಯೆಯಲ್ಲಿ ಇವರನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ಜನರು ಕಣ್ಣೀರಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ