Karnataka: 3-4 ವರ್ಷಗಳಲ್ಲಿ ಲೋಕಾರ್ಪಣೆಗೊಳ್ಳಲಿವೆ ನಾಲ್ಕು ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳು..!

3 - 4 ವರ್ಷಗಳಲ್ಲಿ ರಾಜ್ಯದಲ್ಲಿ 4 ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳು ಕಾರ್ಯ ಆರಂಭಿಸುವ ಸಾಧ್ಯತೆ ಇದೆ. ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್‌ ಸಹ ಆರಂಭವಾಗಲಿದೆ ಎಂದು ಸರ್ಕಾರಿ ಮೂಲಗಳಿಂದ ತಿಳಿದು ಬಂದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ರಾಜ್ಯದಲ್ಲೀಗ ವಿಮಾನ ನಿಲ್ದಾಣಗಳದ್ದೇ ಸುಗ್ಗಿ. ಒಂದರ ಹಿಂದೆ ಒಂದರಂತೆ ಹೊಸ ಏರ್‌ಪೋರ್ಟ್‌ಗಳು ರೆಡಿಯಾಗುತ್ತಲೇ ಇವೆ. ಕರ್ನಾಟಕದ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಶಿವಮೊಗ್ಗ, ವಿಜಯಪುರ, ಹಾಸನ ಮತ್ತು ರಾಯಚೂರಿನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು (Greenfield Airport) ಪ್ರಸ್ತಾಪಿಸಿದ ಒಂದು ದಶಕದ ನಂತರ, ಯೋಜನೆಗಳು ವಾಸ್ತವಕ್ಕೆ ಹತ್ತಿರವಾಗಿವೆ. ಭೂಸ್ವಾಧೀನ ಸಮಸ್ಯೆಗಳು ಮತ್ತು ಏರ್‌ಪೋರ್ಟ್‌ ಆಥಾರಿಟಿ ಆಫ್‌ ಇಂಡಿಯಾ (AAI) ಕ್ಲಿಯರೆನ್ಸ್‌ಗಳ ವಿಳಂಬದಿಂದಾಗಿ ಕಳೆದ ಎರಡು ವರ್ಷಗಳ ಹಿಂದೆ ತಡವಾಗಿ ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳು ಆರಂಭವಾದವು. ಈಗ ಇನ್ನು 3 - 4 ವರ್ಷಗಳಲ್ಲಿ ರಾಜ್ಯದಲ್ಲಿ 4 ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ನೋಡುವ ಸಾಧ್ಯತೆ ಇದೆ. ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್‌ ಸಹ ಆರಂಭವಾಗಲಿದೆ ಎಂದು ಸರ್ಕಾರಿ ಮೂಲಗಳು ಹೇಳುತ್ತವೆ.

ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯ ಈಗಾಗಲೇ ಶೇ. 45ರಷ್ಟು ಮುಗಿದಿದ್ದರೆ, ಹಾಸನ ಮತ್ತು ರಾಯಚೂರು ಏರ್‌ಪೋರ್ಟ್‌ಗಳ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರನ್‌ ವೇ ಕೆಲಸ ಭಾಗಶಃ ಪೂರ್ಣಗೊಂಡಿದೆ. ಸಮೀಪದ ರಸ್ತೆಗಳು, ಪಾರ್ಕಿಂಗ್ ಪ್ರದೇಶ, ಆಂತರಿಕ ಮತ್ತು ಬಾಹ್ಯ ರಸ್ತೆ, ಕಾಂಪೌಂಡ್ ವಾಲ್, ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ, ವಾಚ್ ಟವರ್‌ ಮತ್ತು CFR ಕಟ್ಟಡಗಳ ಕಾರ್ಯ ಪ್ರಗತಿಯಲ್ಲಿವೆ.

Delhi-Mumbai One Way Flight Ticket Gets More Expensive as Govt Hikes Domestic Air Fare Again.
ಸಾಂದರ್ಭಿಕ ಚಿತ್ರ


384 ಕೋಟಿ ರೂ. ಗಳ ಅಂದಾಜು ಯೋಜನಾ ವೆಚ್ಚದ ಪೈಕಿ 125 ಕೋಟಿ ರೂ. ವೆಚ್ಚದ ಕೆಲಸ ಪೂರ್ಣಗೊಂಡಿದೆ. ಇನ್ನೊಂದೆಡೆ, ಹಾಸನ ಮತ್ತು ರಾಯಚೂರು ವಿಮಾನ ನಿಲ್ದಾಣಗಳಿಗೆ ಭೂಸ್ವಾಧೀನ ಕಾರ್ಯ ಮುಗಿದಿದ್ದರೂ, ಏರ್‌ಪೋರ್ಟ್‌ ಕಾಮಗಾರಿ ಆರಂಭಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಹಾಸನ ವಿಮಾನ ನಿಲ್ದಾಣಕ್ಕೆ ಟೆಂಡರ್‌ ಅಂತಿಮಗೊಳಿಸಲಾಗಿದ್ದು, ಸೈಟ್ ಆಫೀಸ್ ಸ್ಥಾಪಿಸುವ ಕೆಲಸ ನಡೆಯುತ್ತಿದೆ. ರಾಯಚೂರಿನಲ್ಲಿ, ಡಿಪಿಆರ್ ಸಲ್ಲಿಸಲಾಗಿದ್ದು ಮತ್ತು ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಬೀದರ್ ರಾಜ್ಯದ ಎಂಟನೇ ವಿಮಾನ ನಿಲ್ದಾಣ; ಇಂದಿನಿಂದ ಹಾರಾಟ ಆರಂಭ

ಇನ್ನೊಂದೆಡೆ, ವಿಜಯಪುರ ವಿಮಾನ ನಿಲ್ದಾಣದ ಪ್ರಗತಿಯು ಹೆಚ್ಚೇನೂ ಆಗಿಲ್ಲ. ಸ್ಥಿತಿಯ ವರದಿಯ ಪ್ರಕಾರ, ವಿಮಾನ ನಿಲ್ದಾಣ ನಿರ್ಮಿಸಲು ಅಗತ್ಯವಾದ ಬಹುಪಾಲು ಅವಶ್ಯಕತೆಗಳಿಗಾಗಿ ಭೂಮಿಯ ಕೆಲಸವನ್ನು ಮಾತ್ರ ಪೂರ್ಣಗೊಳಿಸಲಾಗಿದೆ. 220 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ಕೇವಲ 49 ಕೋಟಿ ರೂ. ಮೌಲ್ಯದ ಕೆಲಸ ಮುಗಿದಿದೆ.

ಒಟ್ಟಾರೆಯಾಗಿ, ಸರ್ಕಾರವು ನಾಲ್ಕು ವಿಮಾನ ನಿಲ್ದಾಣಗಳಿಗೆ 954 ಕೋಟಿ ರೂ. ವೆಚ್ಚ ಮಾಡುತ್ತಿದೆ. ಇವುಗಳಲ್ಲಿ, ಶಿವಮೊಗ್ಗ ವಿಮಾನ ನಿಲ್ದಾಣವು ಬೋಯಿಂಗ್ A 320 ಅಥವಾ 737 ಲ್ಯಾಂಡಿಂಗ್ ಸಾಮರ್ಥ್ಯದ ಪೂರ್ಣ ಪ್ರಮಾಣದ ವಿಮಾನ ನಿಲ್ದಾಣವಾಗಲಿದ್ದು, ಇತರ ಮೂರು ವಿಮಾನ ನಿಲ್ದಾಣಗಳು ಎಟಿಆರ್ 72 ಅಥವಾ ತತ್ಸಮಾನ ವಿಮಾನಗಳನ್ನು ನಿರ್ವಹಿಸಲು ಸಜ್ಜಾಗಿರುತ್ತವೆ.

ಇದನ್ನೂ ಓದಿ: Hubli Airport: ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗಿಗೆ; ಖಾಸಗಿ ತೆಕ್ಕೆಗೆ ಹಾರಲಿರುವ ರಾಜ್ಯದ ಮೊದಲ ಏರ್​ಪೋರ್ಟ್?

ಇದರಿಂದ ರಾಜ್ಯಗಳ ವಿಮಾನ ನಿಲ್ದಾಣಗಳ ಸಂಖ್ಯೆ ಇನ್ನು ಕೆಲವೇ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಅಲ್ಲದೆ, ಈ ವಿಮಾನ ನಿಲ್ದಾಣಗಳಿಂದ ಪ್ರವಾಸೋದ್ಯಮಕ್ಕೂ ಒತ್ತು ನೀಡಲಿದೆ ಎಂಬುದು ಸರ್ಕಾರದ ವಾದ. ಆದರೆ, ಕಲಬುರಗಿ ಹಾಗೂ ಬೀದರ್‌ ವಿಮಾನ ನಿಲ್ದಾಣಗಳ ವಿಳಂಬದಂತೆ ಈ ನಾಲ್ಕು ಹೊಸ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣಗಳ ಕಾರ್ಯವೂ ವಿಳಂಬವಾಗುವ ಸಾಧ್ಯತೆಯೂ ಇದ್ದು, ಇನ್ನು 3 - 4 ವರ್ಷಗಳಲ್ಲಿ ಈ ಏರ್‌ಪೋರ್ಟ್‌ಗಳು ಕಾರ್ಯಾರಂಭಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Published by:Anitha E
First published: