Bhatkal Lady Arrested: ಬೆಂಗಳೂರು ಜೈಲಿನಿಂದ ಶಿವಮೊಗ್ಗ ಉದ್ಯಮಿಗೆ ಬೆದರಿಕೆ ಕರೆ: ಸಿಕ್ಕಿ ಬಿದ್ದ ಶಂಕಿತ ಉಗ್ರನ ಪತ್ನಿ!

ಹಣ ಬಿದ್ದ ಖಾತೆಯ ಹೋಲ್ಡರ್​ ಆಗಿದ್ದ ಲೇಡಿ ಸಾಯಿರಾ ಬಾನು ಎಂಬಾಕೆಯನ್ನು ವಶಕ್ಕೆ ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ಪೊಲೀಸರಿಗೆ ಇನ್ನೊಂದು ವಿಷಯ ಗೊತ್ತಾಗುತ್ತೆ. ಅದೇನು ಅಂದರೆ, ಸಾಯಿರಾ ವಿಚಾರಣೆ ವೇಳೆ ತನ್ನ ಗಂಡ ಶಂಕಿತ ಉಗ್ರ ಸದ್ದಾಂ ಹುಸೇನ್​ನ ಹೆಸರು ಹೇಳಿದ್ದಳು.

ಸಾಹಿರ ಬಾನು

ಸಾಹಿರ ಬಾನು

  • Share this:
ಶಿವಮೊಗ್ಗ : ಉದ್ಯಮಿಗೆ ಕರೆ ಮಾಡಿ ಜೀವ ಬೆದರಿಕೆ(Threatening calls )ಹಾಕಿ ಹಣ ವಸೂಲಿ ಮಾಡಿ, ವಸೂಲಿ ಮಾಡಿದ ಹಣದ ಮೂಲದಿಂದಲೇ ಶಂಕಿತ ಉಗ್ರ ನ(suspected terrorist )ಪತ್ನಿ ಅಂದರ್  ಆಗಿದ್ದಾಳೆ.  ಕಳೆದ ಕೆಲ ತಿಂಗಳಿನಿಂದ ಶಿವಮೊಗ್ಗದ ಉದ್ಯಮಿಗಳಿಗೆ ಬೆಂಗಳೂರಿನ ಸೆಂಟ್ರಲ್​ ಜೈಲ್​ (bangalore central jail) ಪರಪ್ಪನ ಅಗ್ರಹಾರದಿಂದ ಅನಾಮಧೇಯ ಕರೆಗಳು ಬರುತ್ತಿರುವ ಬಗ್ಗೆ ಸುದ್ದಿಯಾಗುತ್ತಿತ್ತು. ಈ ಪೈಕಿ ರೌಡಿ ಬಚ್ಚನ್​ ಮಾಡಿದ್ದ ಎನ್ನಲಾದ ಕರೆ ಸಾಕಷ್ಟು ಚರ್ಚೆಯಾಗಿತ್ತು. ಅದಾದ ಬಳಿಕ ತೀರಾ ಇತ್ತೀಚೆಗೆ ಹೆಬ್ಬೆಟ್ಟು ಮಂಜನ ಹೆಸರಿನಲ್ಲಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಪದೇ ಪದೇ ಬೆದರಿಕೆ​ ಕಾಲ್​ ಬರುತ್ತಿದ್ದ ಬಗ್ಗೆ ಶಿವಮೊಗ್ಗ ಸೈಬರ್​ ಕ್ರೈಂ ವಿಭಾಗದಲ್ಲಿ ಕೇಸ್​ ದಾಖಲಾಗಿತ್ತು. ಈ ಕೇಸನ್ನು ಬೇದಿಸುವಲ್ಲಿ ಶಿವಮೊಗ್ಗ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ತನಿಖೆ ವೇಳೆ ಶಿವಮೊಗ್ಗದ ಉದ್ಯಮಿಗೆ ಬೆದರಿಕೆ‌ ಕರೆ ಮಾಡಿದ್ದ ಶಂಕಿತ ಉಗ್ರ ಎಂಬ ಭಯಾನಕ ಸತ್ಯ ಹೊರಬಂದಿದೆ.

ಉದ್ಯಮಿಗಳಿಗೆ ಬೆದರಿಕೆ ಕರೆ 

ಶಿವಮೊಗ್ಗದ ಉದ್ಯಮಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಅವರು ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಉದ್ಯಮಿಗೆ ವಾಟ್ಸಪ್ ಮೂಲಕ ಕರೆ ಬಂದಿದ್ದಿಂದ ಪೊಲೀಸರಿಗೆ ಹೆಚ್ಚಿನ ತನಿಖೆ ನಡೆಸಲು ಸುಳಿವೇ ಸಿಕ್ಕಿರಲಿಲ್ಲ. ಹೀಗಾಗಿ ಸಿಇಎನ್ ಠಾಣೆ ಇನ್ಸ್ ಪೆಕ್ಟರ್ ಗುರುರಾಜ್ ಪ್ರತಿಯೊಂದು ಆಯಾಮದಲ್ಲೂ ತನಿಖೆ ಆರಂಭಿಸಿದ್ದರು. ಉದ್ಯಮಿಯ ಬಳಿ ಮಾಹಿತಿ ಪಡೆದ ಪೊಲೀಸರಿಗೆ ಉದ್ಯಮಿ ಬೆದರಿಕೆ ಕರೆ ಮಾಡಿದವನ ಸಂಬಂಧಿಯ ಅಕೌಂಟ್ ನಂಬರ್ ಗೆ ಹಣ ವರ್ಗಾವಣೆ ಮಾಡಿದ ಮಾಹಿತಿ‌ ಸಿಕ್ಕಿತ್ತು.

ಸಿಕ್ಕಿಬಿದ್ದ ಸಾಯಿರಾ ಬಾನು 

ಇದ್ಯಾವ ಖಾತೆ? ಯಾರ ಖಾತೆ ಆಗಿರಬಹುದು ಎಂದು ಹುಡುಕುತ್ತಾ ಹೊರಟ ಪೊಲೀಸರಿಗೆ ಭಟ್ಕಳದ ಲೇಡಿಯೊಬ್ಬಳ ವಿಳಾಸ ಸಿಕ್ಕಿದೆ. ಬ್ಯಾಂಕ್​ ಖಾತೆಯನ್ನ ಹುಡುಕಿಕೊಂಡು ಹೊರಟವರಿಗೆ ಸಿಕ್ಕಿದ್ದು ಆ ಲೇಡಿವಿಶೇಷ ಅಂದರೆ, ಪ್ರಕರಣ ಇಲ್ಲಿಂದಾಚೆಗೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಗುರುರಾಜ್ ಹಾಗೂ ಪೊಲೀಸರ ತಂಡ ಭಟ್ಕಳಕ್ಕೆ ಹೋಗಿ ಹಣ ಬಿದ್ದ ಖಾತೆಯ ಹೋಲ್ಡರ್​ ಆಗಿದ್ದ ಲೇಡಿ ಸಾಯಿರಾ ಬಾನು ಎಂಬಾಕೆಯನ್ನು ವಶಕ್ಕೆ ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ಪೊಲೀಸರಿಗೆ ಇನ್ನೊಂದು ವಿಷಯ ಗೊತ್ತಾಗುತ್ತೆ. ಅದೇನು ಅಂದರೆ, ಸಾಯಿರಾ ವಿಚಾರಣೆ ವೇಳೆ ತನ್ನ ಗಂಡ ಶಂಕಿತ ಉಗ್ರ ಸದ್ದಾಂ ಹುಸೇನ್​ನ ಹೆಸರು ಹೇಳಿದ್ದಳು.

ಶಂಕಿತ ಉಗ್ರ ಸದ್ದಾಂ ಹುಸೇನ್ ಹೆಂಡತಿ 

ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಶಂಕಿತ ಉಗ್ರ ಸದ್ದಾಂ ಹುಸೇನ್​ ಬೆಂಗಳೂರಿನ ಚರ್ಚ್​ಸ್ಟ್ರೀಟ್​ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ. ಆ ಘಟನೆಯಲ್ಲಿ ಭಾಗಿಯಾಗಿದ್ದ ಉಗ್ರರಿಗೆ ಈತ ಜಿಲೆಟಿನ್​ ಸಪ್ಲೆ ಮಾಡಿದ್ದ ಎನ್ನುವ ಆರೋಪವಿದೆ. ಅಲ್ಲದೆ ಭಟ್ಕಳದಲ್ಲಿ ಬೈಕ್​ಗಳನ್ನ ಸುಟ್ಟ ಪ್ರಕರಣ, ಹಾಗೂ ವಿವಿಧ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಆರೋಪ ಎದುರಿಸುತ್ತಿದ್ದಾನೆ ಈ ಸದ್ದಾಂ ಹುಸೇನ್​. ಈ ಮೊದಲು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಭದ್ರಾವತಿ ಮೂಲದ ನಾಗೇಂದ್ರ ಅಲಿಯಾಸ್​ ನಾಗ ಪರಪ್ಪನ ಅಗ್ರಹಾರದಿಂದ ಶಿವಮೊಗ್ಗದ ಉದ್ಯಮಿಗೆ ಹೆಬ್ಬೆಟ್​ ಮಂಜನ ಹೆಸರಲ್ಲಿ ಕರೆಮಾಡಲಾಗಿತ್ತು ಎಂದೇ ಪೊಲೀಸರು ಚಿಂತಿಸಿದ್ದರು. ಆದರೆ ಲೇಡಿ ಸಾಯಿರಾ ಬಂಧನದ ಬಳಿಕ, ಉದ್ಯಮಿಗೆ ಬಂದ ಕರೆ ಸದ್ದಾಂ ಹುಸೇನ್​ದ್ದಾಗಿದೆ ಎನ್ನುವುದು ಖಾತರಿಯಾಗಿದೆ.

ಭದ್ರಾವತಿ ನಾಗನೂ ಕೈಜೋಡಿಸಿದ್ದಾನೆಯೇ? 

ಸದ್ದಾಂ ಹುಸೇನ್​ ಜೊತೆಗೆ ಪರಪ್ಪನ ಅಗ್ರಹಾರದಲ್ಲೇ ಇರುವ ಭದ್ರಾವತಿ ನಾಗನೂ ಕೈಜೋಡಿಸಿದ್ದಾನೆಯೇ ಎಂಬ ಅನುಮಾನ ಪೊಲೀಸರನ್ನ ಕಾಡುತ್ತಿದೆ. ಹೀಗಾಗಿ ಪೊಲೀಸರು ಪರಪ್ಪನ ಅಗ್ರಹಾರದಲ್ಲಿರುವ ನಾಗೇಂದ್ರ ಹಾಗೂ ಸದ್ದಾಂನನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ಇಲ್ಲಿವರೆಗೂ ರೌಡಿಶೀಟರ್​ಗಳಿಂದ ಬರುತ್ತಿದ್ದ ಬೆದರಿಕೆ ಕರೆ ನಡುವೆ ಇದೀಗ ಶಂಕಿತ ಉಗ್ರನು ಬೆದರಿಕೆ ಕರೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕಷ್ಟು ಕತೂಹಲ ಮತ್ತು ಆತಂಕ ಮೂಡಿಸುತ್ತಿದೆ. ಇನ್ನೂ ರೌಡಿಶೀಟರ್​ಗಳು, ಶಿಕ್ಷಿತ ಅಪರಾಧಿಗಳು ಶಂಕಿತರ ಜೊತೆಗೆ ಕೈ ಜೋಡಿಸಿದ್ದಾರಾ ಎನ್ನುವ ಅನುಮಾನವೇ ಈ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Father & 4 Children Suicide: ಗೃಹಪ್ರವೇಶಕ್ಕೂ ಮುನ್ನ ಹೆಂಡತಿ ಸಾವು; ನೊಂದ ಪತಿ, ನಾಲ್ವರು ಮಕ್ಕಳ ಆತ್ಮಹತ್ಯೆ

ಪರಪ್ಪನ ಅಗ್ರಹಾರ ಜೈಲಿನಿಂದಲೇ ಕರೆ ಬಂದಿರುವ ಬಗ್ಗೆ ಪೊಲೀಸರ ಅನುಮಾನ ಬಲಗೊಂಡಿದೆ. ಯಾಕೆಂದರೆ, ಬಂಧಿತ ಶಂಕಿತ ಉಗ್ರನ ಪತ್ನಿಯ ಅಕೌಂಟ್​ಗೇನೆ ಹಣ ಸಂದಾಯವಾಗಿದೆ. ಇದರಿಂದಾಗಿ ಪರಪ್ಪನ ಅಗ್ರಹಾರದಲ್ಲಿ, ಬಂಧಿತನೊಬ್ಬ ಹೇಗೆ ಬೆದರಿಕೆ ಕರೆ ಮಾಡಲು ಸಾಧ್ಯವಾಯಿತು ಎನ್ನುವ ವಿಚಾರ ಪೊಲೀಸರ ತನಿಖೆಯಲ್ಲಿದೆ. ಆರೋಪಿಗಳಿಗೆ ಹಾಗೂ ಅಪರಾಧಿಗಳಿಗೆ ಫೋನ್ ಗಳಿ ಸಿಗುತ್ತಿರುವುದು ದೃಢಪಟ್ಟಿದ್ದು, ಈ ಮೂಲಕ ಜೈಲಿನೊಳಗೆ ಎಲ್ಲ ದಂಧೆಗಳು ಖುಲ್ಲಂ ಖುಲ್ಲವಾಗಿ ನಡೆಯುತ್ತಿವೆ ಎಂಬುದು ದೃಢಪಟ್ಟಂತಾಗಿದೆ.
Published by:Kavya V
First published: