ಶಿವಮೊಗ್ಗ: ಅಬ್ಬಬ್ಬಾ! ಇದೇನಿದು ನಾಯಿನಾ? ಕರಿಚಿರತೆನಾ? ಹೀಗಂತಾ ಇದ್ದೋರೆಲ್ಲ ಈ ನಾಯಿ ಎಂಟ್ರಿ ನೋಡಿ ಕಣ್ಣು ಬಾಯಿ ಬಿಟ್ ನೋಡ್ತಿದ್ರು. ಎಲ್ರ ಬಾಯಲ್ಲೂ ಉಫ್! ಅನ್ನೋ ಉದ್ಘಾರ. ಈ ಬ್ಲ್ಯಾಕ್ ಡಾಗ್ ರಾಜಗಾಂಭೀರ್ಯ ಶಿವಮೊಗ್ಗದ ರೈತ ದಸರಾದಲ್ಲಿ (Shivamogga Farmers Dasara) ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಇದ್ರ ಬೆಲೆ ಕೇಳಿಯೇ ನೆರೆದವರು ಅವಾಕ್ಕಾದ್ರು! ಹೌದು, ಈ ನಾಯಿಗೆ ಚಿನ್ನದ ಬೆಲೆ. ಟಿಬೇಟಿಯನ್ ಮಸ್ತೀಫ್ ಜಾತಿಯ (Tibetan Mastiff) ಈ ಶ್ವಾನದ ಮೌಲ್ಯ ಒಂದೆರಡು ಕೋಟಿಯಲ್ಲ! ಬರೋಬ್ಬರಿ 10 ಕೋಟಿ ರೂಪಾಯಿ! ಹಾಗಾಗಿಯೇ ಜನ 'ಇದೇನಪ್ಪ ನಾಯಿ' (Tibetan Mastiff Breed Dog) ಅಂತಾ ಮೂಗು ಮೇಲೆ ಬೆರಳು ಇಟ್ಟಿದ್ರು.
ರಾಜಗಾಂಭೀರ್ಯದಿಂದ ಬಂದ ನಾಯಿಯು ಶ್ವಾನ ಪ್ರದರ್ಶನದಲ್ಲಿ ಶಾಂತವಾಗಿ ತನ್ನ ಮಾಲೀಕನ ಆಜ್ಞೆ ಪಾಲಿಸಿ ಗಮನಸೆಳೆಯಿತು.
ಇದನ್ನೂ ಓದಿ: Vijayapura Viral Video: ರಣರೋಚಕ ಟಗರು ಕಾಳಗ! ನೋಡ್ತಿದ್ರೆ ಮೈ ಝುಮ್ಮೆನ್ನುತ್ತೆ!
ರೈತ ದಸರಾದ ಶ್ವಾನ ಪ್ರದರ್ಶನಕ್ಕೇ ಈ ನಾಯಿಯ ಆಗಮನ ಕಳೆ ತುಂಬಿತ್ತು. ನೆರೆದಿದ್ದವರೆಲ್ಲರೂ ತಮ್ಮ ಮೊಬೈಲ್ಗಳಲ್ಲಿ ಈ ನಾಯಿಯ ವೀಡಿಯೋ, ಫೋಟೋ ಶೂಟ್ ಮಾಡಿದ್ರೆ, ಸ್ವಲ್ಪ ಧೈರ್ಯವಿದ್ದವರು ಅದ್ರ ಜೊತೆಗೇ ಸೆಲ್ಫಿ ಕ್ಲಿಕ್ಕಿಸಿಕೊಂಡ್ರು.
ಇದನ್ನೂ ಓದಿ: Mysuru Dasara: ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಇಲ್ಲಿದೆ ನೋಡಿ!
ಆದ್ರೆ ಟಿಬೇಟಿಯನ್ ಮಸ್ತೀಫ್ ಶ್ವಾನ ಮಾತ್ರ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅನ್ನೋ ಹಾಗೆ ಬಿಂದಾಸ್ ಆಗಿತ್ತು. ಒಟ್ಟಿನಲ್ಲಿ ಬರೋಬ್ಬರಿ ಹತ್ತು ಕೋಟಿ ರೂಪಾಯಿ ನಾಯಿ ಭಾರೀ ಗಮನಸೆಳೆದದ್ದು ಹೌದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ