• Home
  • »
  • News
  • »
  • state
  • »
  • Shivamogga Viral News: ಶಿವಮೊಗ್ಗದಲ್ಲಿ ಈಗ ಈ ಎಮ್ಮೆಯದ್ದೇ ಸುದ್ದಿ!

Shivamogga Viral News: ಶಿವಮೊಗ್ಗದಲ್ಲಿ ಈಗ ಈ ಎಮ್ಮೆಯದ್ದೇ ಸುದ್ದಿ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇಲ್ಲಿನ ದುರ್ಗಪ್ಪ ಅವರ ಎಮ್ಮೆ ಮೊದಲ ಪ್ರಸವದಲ್ಲಿ ಗಂಡು ಕರುವಿಗೆ ಜನ್ಮ ನೀಡಿತ್ತು. ಅಷ್ಟೇ ಆಗಿದ್ರೆ ಹೀಗೆ ಸುದ್ದಿನೇ ಆಗ್ತಿರಲಿಲ್ಲ ಈ ಎಮ್ಮೆ!

  • Share this:

    ನಾನು ಫಸ್ಟು.. ನಾನು ಫಸ್ಟು.. ಅಮ್ಮಾ ನಂಗೆ ಫಸ್ಟ್ ಹಾಲುಣಿಸು.. ಹೀಗಂತ ಇಬ್ರೂ ತಾಯಿನ ಹಠ ಹಿಡಿದಿದ್ದಾರೆ. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾದ ಈ ಗಟ್ಟಿಮುಟ್ಟಾದ ಎಮ್ಮೆಗೆ ಅವಳಿ ಜವಳಿ (Buffalo Twin Calf) ಕರುಗಳು. ಆಶ್ಚರ್ಯ ಅಂದ್ರೆ ಸಾಮಾನ್ಯವಾಗಿ ಅವಳಿ ಜವಳಿ ಕರುಗಳು ಹುಟ್ಟೋದಿದ್ರೆ ಕೆಲವೇ ತಾಸುಗಳ ಅಂತರದಲ್ಲಿ ಹುಟ್ಟುತ್ತವೆ. ಆದರೆ ಈ ಎಮ್ಮೆ ಮೊದಲ ಕರು ಹುಟ್ಟಿ ಒಂದು ವಾರದ ನಂತರ ಎರಡನೇ ಕರುವಿಗೆ ಜನ್ಮ ನೀಡಿದೆ. ಇದೇನಿದು ಆಶ್ಚರ್ಯ ಅಂತಾ ಮನೆ ಮಂದಿಯಷ್ಟೇ ಅಲ್ದೇ ವೈದ್ಯಲೋಕವೇ ಅಚ್ಚರಿಪಟ್ಟಿದೆ. ಶಿವಮೊಗ್ಗ ಜಿಲ್ಲೆಯ (Shivamogga) ಸಾಗರ ತಾಲೂಕಿನ (Sagara) ನಾಡಕಳಸಿ ಎಂಬ ಗ್ರಾಮ ಈ ಅಪರೂಪದ ಈ ವಿದ್ಯಮಾನಕ್ಕೆ (Viral News) ಸಾಕ್ಷಿಯಾಗಿದೆ. 


    ಇಲ್ಲಿನ ದುರ್ಗಪ್ಪ ಅವರ ಎಮ್ಮೆ ಸೆಪ್ಟೆಂಬರ್ 13 ರಂದು ಮೊದಲ ಪ್ರಸವದಲ್ಲಿ ಗಂಡು ಕರುವಿಗೆ ಜನ್ಮ ನೀಡಿತ್ತು. ಅಷ್ಟೇ ಆಗಿದ್ರೆ ಹೀಗೆ ಸುದ್ದಿನೇ ಆಗ್ತಿರಲಿಲ್ಲ ಈ ಎಮ್ಮೆ!


    ಇದನ್ನೂ ಓದಿ: Success Story: ಕಾಲೇಜ್​ಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ! ಇಡೀ ಊರಿಗೇ ಬಂತು ಭಾಗ್ಯ!


    ಆದ್ರೆ ಆರೋಗ್ಯವಾಗಿದ್ದ ಎಮ್ಮೆಯನ್ನ ಒಂದು ವಾರದ ಬಳಿಕ ಹುಲ್ಲು ಮೇಯಲೆಂದು ಹೊರಗೆ ಕಟ್ಟಿ ಹಾಕಿದ್ರು. ಅಲ್ಲೇ ಎಮ್ಮೆಗೆ ಹಠಾತ್ ಪ್ರಸವ ವೇದನೆ ಕಾಣಿಸಿಕೊಂಡು ಹೆಣ್ಣು ಕರುವಿಗೆ ಜನ್ಮ ನೀಡಿದೆ.


    ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


    ಸದ್ಯ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ. ಮನೆಯವರೂ ಖುಷಿಪಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಅವಳಿ‌ಜವಳಿ ಪ್ರಸವದಿಂದಾಗಿ ಎಮ್ಮೆ ಮತ್ತು ಕರುಗಳು ಜನರ ಕುತೂಹಲಕ್ಕೆ ಕಾರಣವಾಗಿವೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: