ಸಿದ್ದರಾಮಯ್ಯನವರ ಆ ಕನಸು ಯಾವುದೇ ಕಾರಣಕ್ಕೂ ನನಸಾಗಲ್ಲ: ಸುಧಾಕರ್, ಈಶ್ವರಪ್ಪ ವ್ಯಂಗ್ಯ

Sudhakar and Eshwarappa on Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಕೆಟ್ಟ ಕನಸುಗಾರ. ಸರ್ಕಾರ ಬಿದ್ದು ಹೋಗುತ್ತದೆ,  ನಾನು ಮತ್ತೆ ಸಿಎಂ ಆಗಬಹುದು ಎಂದು ಅವರು ಕನಸು ಕಂಡಿದ್ದರು. ಆದರೆ ಅದು ಹುಸಿಯಾಗಿದೆ, ಈ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
ಚಿಕ್ಕಬಳ್ಳಾಪುರ/ಶಿವಮೊಗ್ಗ: ಮಧ್ಯಂತರ ಚುನಾವಣೆ ಯಾವಾಗ ಬೇಕಾದ್ರೂ ಬರಬಹುದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಡಾ.ಕೆ.ಸುಧಾಕರ್​ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಕನಸು ನನಸಾಗಲ್ಲ. ಸಿದ್ದರಾಮಯ್ಯನವರು ಚೆನ್ನಾಗಿ ಕನಸು ಕಾಣ್ತಿದ್ದಾರೆ, ಅವರು ಕನಸು‌ ಕಾಣ್ತಾನೇ ಇರಲಿ ಎಂದು ವ್ಯಂಗ್ಯವಾಡಿದರು. ಇನ್ನು ಸಚಿವ ಸಂಪುಟ ರಚನೆ  ‘ಬಗ್ಗೆ ಬೆಟ್ಟ ಅಗೆದು ಇಲಿ ಹಿಡಿದ್ರು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸುಧಾಕರ್​, ಸಿಎಂ‌ ಬದಲಾವಣೆ ಹಾಗೂ ಸಂಪುಟ ರಚನೆ ಬಿಜೆಪಿ ಪಕ್ಷದ ತೀರ್ಮಾನ. ನಮ್ಮ ಪಕ್ಷ ಹಾಗೂ ನಾಯಕರ ತೀರ್ಮಾನ. ಸಿದ್ದರಾಮಯ್ಯನವರಿಗೆ ಯಾಕೆ ಈ ಉಸಾಬರಿ ಎಂದು ಟಾಂಗ್​ ಕೊಟ್ಟರು.

ಈ ಸರ್ಕಾರ ಆಡಳಿತ ಹೇಗೆ ಕೊಡುತ್ತೆ ಅಂತ ವ್ಯಾಖ್ಯಾನ ಕೊಡಲಿ. 2-3 ತಿಂಗಳು ಸಿಎಂ ಹೇಗೆ ವ್ಯವಹರಿಸ್ತಾರೆ ಅಂತ ನೋಡ್ತೀವಿ ಅಂತ ಹೇಳಿದ್ರು. ಆದ್ರೆ ಎರಡೇ ದಿನಕ್ಕೆ ಈ ರೀತಿ ಮಾತಾಡ್ತಿದ್ದಾರೆ ಎಂದು ಸಿದ್ದರಾಮಯ್ಯರನ್ನು ಸುಧಾಕರ್​ ಟೀಕಿಸಿದರು. ಎಲ್ಲಾ ಶಾಸಕರಿಗೆ ಮಂತ್ರಿಯಾಗಬೇಕು ಎಂಬ ಆಸೆ ಇರುತ್ತೆ. ಅದಕ್ಕೆ ಅರ್ಹತೆ ಆಕಾಂಕ್ಷೆ ಸಹ ಇರುತ್ತೆ. ಆದ್ರೆ ಎಲ್ಲರನ್ನೂ ಸಂಪುಟದಲ್ಲಿ ಸೇರಿಸಿಕೊಳ್ಳಲು ಅಸಾಧ್ಯ.ಪ್ರಾದೇಶಿಕ ಸಮತೋಲನ, ಜಾತಿವಾರು ಅವಕಾಶದ ಆಧಾರದ ಮೇಲೆ ಸಂಪುಟ ರಚನೆ ಆಗಿದೆ. ಸಿಎಂ ಹಾಗೂ ಬಿಜೆಪಿ ನಾಯಕರು ಸಂಪುಟ ರಚನೆ ಮಾಡಿದ್ದಾರೆ. ಅವಕಾಶ ವಂಚಿತರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ದೊರೆಯಲಿದೆ ಎಂದರು.

ಇನ್ನು ರಾಜ್ಯದಲ್ಲಿ ಪ್ರವಾಸಿ ತಾಣಗಳು ಕೋರೋನಾ ಹಾಟ್ ಸ್ಪಾಟ್ ಗಳಾಗಿವೆ. ಆನೇಕ ಪ್ರವಾಸಿ ತಾಣಗಳಲ್ಲಿ ಜನ ಸೇರುತ್ತಿದ್ದಾರೆ, ಇದು ಕೋವಿಡ್ ಹೆಚ್ಚಾಗಲು ಕಾರಣ ಆಗುವ ಅಪಾಯ ಇದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ತೇವೆ ಎಂದು ತಿಳಿಸಿದರು.

ಸಂಪುಟ ರಚನೆ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಂಪುಟ ರಚನೆಯ ಎಲ್ಲಾ ಗೊಂದಲ ಬಗೆಹರಿದಿದೆ. ಸಣ್ಣ ಪುಟ್ಟ ಗೊಂದಲಗಳನ್ನು ಪಕ್ಷದ ವರಿಷ್ಠರು ಬಗೆಹರಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಆಗಲಿದೆ. ನಾನು ಇಂತಹುದೇ ಖಾತೆ ಬೇಕು ಎಂದು ಕೇಳುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: CM ಬೊಮ್ಮಾಯಿನ ಓವರ್​​ಟೇಕ್​​ ಮಾಡಿ ಸಚಿವರಾದ ಎಂಟಿಬಿ? : ಒಂದೇ ಒಂದು ಪತ್ರದಿಂದ ಎಲ್ಲವೂ ಬದಲಾಯಿತು!

ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಕೆಟ್ಟ ಕನಸುಗಾರ. ಸರ್ಕಾರ ಬಿದ್ದು ಹೋಗುತ್ತದೆ,  ನಾನು ಮತ್ತೆ ಸಿಎಂ ಆಗಬಹುದು ಎಂದು ಅವರು ಕನಸು ಕಂಡಿದ್ದರು. ಆದರೆ ಅದು ಹುಸಿಯಾಗಿದೆ, ಈ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲಿದೆ. ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಇನ್ನೆಂದೂ ಅಧಿಕಾರಕ್ಕೆ ಬರುವುದಿಲ್ಲ,  ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇನ್ನು ಮಾಜಿ ಸಚಿವ ರೋಷನ್ ಬೇಗ್ ಹಾಗೂ ಶಾಸಕ ಜಮೀರ್ ಅಹ್ಮದ್  ಮನೆಗಳ ಮೇಲೆ ಐಟಿ-ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್​.ಈಶ್ವರಪ್ಪ, ಅವರ ಹೆಸರು ಐಎಂಎ ಹಗರಣದಲ್ಲಿ ಕೇಳಿ ಬಂದಿದೆ. ಅದು ಸುಖಾಸುಮ್ಮನೆ ಉದ್ದೇಶಪೂರ್ವಕವಾಗಿ ನಡೆದ ದಾಳಿ ಅಲ್ಲ. ಬಡವರು, ಕೂಲಿ ಕಾರ್ಮಿಕರು, ಐಎಂಎನಲ್ಲಿ ಹಣ ಕಳೆದುಕೊಂಡಿದ್ದಾರೆ, ಅವರಿಗೆ ಶಾಪ ತಟ್ಟಲಿದೆ. ಈ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಕೊಲೆ ಆರೋಪದ ಮೇರೆಗೆ ಬಂಧಿಸಿದಾಗಲೂ ಕಾಂಗ್ರೆಸ್ಸಿಗರು ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೀಗೆ ಹೇಳಿದ್ದರು. ನಂತರ ಏನಾಯಿತು. ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಹಾಗಾಗಿ ಜಮೀರ್ ಅಹ್ಮದ್ ಹಾಗೂ ರೋಷನ್ ಬೇಗ್ ಅವರು ಐಎಂಎ ಹಗರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಸಾಬೀತುಪಡಿಸಲಿ ಎಂದು ಸವಾಲೆಸೆದರು.

ಜೊತೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಿಂದ ಅನಾಹುತ ಆಗಿರುವ ಪ್ರದೇಶಗಳಿಗೆ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಪ್ರವಾಸ ಮಾಡಲಿದ್ದೇನೆ. ಯಡಿಯೂರಪ್ಪ ಅವರ ಅವಧಿಯಲ್ಲಿ ಆರಂಭಗೊಂಡಿರುವ ಅಭಿವೃದ್ಧಿ ಕಾರ್ಯ ನಿಲ್ಲದದಂತೆ ನೋಡಿಕೊಳ್ಳಲಾಗುವುದು ಎಂದರು.
Published by:Kavya V
First published: