• Home
  • »
  • News
  • »
  • state
  • »
  • Shivamogga Dasara: ರಾಗಿಮುದ್ದೆ ತಿನ್ನೋ ಸ್ಪರ್ಧೆ! ಶಿವಮೊಗ್ಗದ ಮಹಿಳೆಯರ ಸಾಹಸ ನೋಡಿ

Shivamogga Dasara: ರಾಗಿಮುದ್ದೆ ತಿನ್ನೋ ಸ್ಪರ್ಧೆ! ಶಿವಮೊಗ್ಗದ ಮಹಿಳೆಯರ ಸಾಹಸ ನೋಡಿ

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ರಾಗಿಮುದ್ದೆನ ಸಾರಲ್ಲಿ ಮುಳುಗಿಸಿ ಗುಳುಂ ಗುಳುಂ ಅಂತಾ ನುಂಗುತ್ತಾ ನೆರೆದವರ ಮೆಚ್ಚುಗೆಗೆ ಪಾತ್ರರಾದರು.

  • Share this:

    ಶಿವಮೊಗ್ಗ: ಸಾಲಾಗಿ ಕೂತ ಮಹಿಳೆಯರು. ರಾಗಿಮುದ್ದೆ ಸಾರು ಬಡಿಸಿದ ಅತಿಥಿಗಳು. ಆಗ್ಲೇ ಶುರುವಾಯ್ತು ನೋಡಿ ಗಬಗಬನೆ ತಿನ್ನೋ ಕಾಂಪಿಟೇಶನ್. ಸುತ್ತಲಿದ್ದವರ ಕೇಕೆ, ಚಪ್ಪಾಳೆಗೆ ಹೆಚ್ಚಿತ್ತು ಮಹಿಳೆಯರ ಹುಮ್ಮಸ್ಸು. ಇದುವೇ ಶಿವಮೊಗ್ಗ (Shivamogga) ದಸರಾ ಸ್ಪೆಷಲ್ಲು. ಶಿವಮೊಗ್ಗ ದಸರಾದಲ್ಲಿ (Shivamogga Dasara) ರಾಗಿಮುದ್ದೆ ಬಸ್ಸಾರು ಊಟ ಸ್ಪರ್ಧೆ ಸಖತ್ ಮಜಾ ನೀಡಿತು. ಮಹಿಳೆಯರಂತೂ ಹುಮ್ಮಸ್ಸಿನಿಂದಲೇ ಭಾಗವಹಿಸಿದ್ದರು.


    ಇದನ್ನೂ ಓದಿ: Mysuru Dasara: ಆಕಾಶದಿಂದ ನೋಡಿ ಮೈಸೂರು ದಸರಾ!


    ರಾಗಿಮುದ್ದೆನ ಸಾರಲ್ಲಿ ಮುಳುಗಿಸಿ ಗುಳುಂ ಗುಳುಂ ಅಂತಾ ನುಂಗುತ್ತಾ ನೆರೆದವರ ಮೆಚ್ಚುಗೆಗೆ ಪಾತ್ರರಾದರು. ಗೆದ್ದವರು ಬಹುಮಾನ ಪಡೆಯುತ್ತಾ ಬೀಗಿದರೆ, ಉಳಿದವರೂ ನಾವೂ ಏನೂ ಕಮ್ಮಿ ಇಲ್ಲ ಅಂತಾ ತೋರಿಸಿಕೊಟ್ಟಿದ್ದಾರೆ.


    ಇದನ್ನೂ ಓದಿ: Mysuru Dasara: ಇದು ಭೂಲೋಕವಲ್ಲ, ಗೊಂಬೆಗಳ ಲೋಕ!


    ಒಟ್ಟಿನಲ್ಲಿ ರಾಗಿ ಮುದ್ದೆ ಬಸ್ಸಾರು ಊಟ ಸ್ಪರ್ಧೆ ಮಹಿಳೆಯರಲ್ಲಿ ಹೊಸ ಚೈತನ್ಯ ತುಂಬಿತ್ತು. ಪುರುಷರಿಗೂ ಇದೇ ಥರಹದ ಸ್ಪರ್ಧೆಗಳು ನಡೆದವು. ಹೀಗೆ ದಸರಾ ಕಲರ್ ಫುಲ್ ಆಗಿದ್ದು ಶಿವಮೊಗ್ಗದ ಜನರಲ್ಲಿ ಸಂಭ್ರಮವೇ ಹೆಚ್ಚಿಸಿತು.

    Published by:ಗುರುಗಣೇಶ ಡಬ್ಗುಳಿ
    First published: