• Home
  • »
  • News
  • »
  • state
  • »
  • Dog Saved Life: ಶಿವಮೊಗ್ಗದ ಶೇಖರಪ್ಪನವರ ಜೀವ ಉಳಿಸಿದ ಟಾಮಿ!

Dog Saved Life: ಶಿವಮೊಗ್ಗದ ಶೇಖರಪ್ಪನವರ ಜೀವ ಉಳಿಸಿದ ಟಾಮಿ!

ಟಾಮಿ ನಾಯಿ

ಟಾಮಿ ನಾಯಿ

ಅಂದಹಾಗೆ ಈ ಟಾಮಿಯನ್ನು 7 ವರ್ಷಗಳ ಹಿಂದೆ ಯಾರೋ ಬೀದಿಯಲ್ಲಿ ಬಿಟ್ಟುಹೋಗಿದ್ದರಂತೆ. ಶೇಖರಪ್ಪ ತಮ್ಮ ಮನೆಗೆ ತಂದು ಟಾಮಿ ಎಂದು ಹೆಸರಿಟ್ಟು ಮುದ್ದಾಗಿ ಸಾಕಿದ್ದರು.

  • News18 Kannada
  • Last Updated :
  • Shimoga, India
  • Share this:

    ಶಿವಮೊಗ್ಗ: ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ನಾಯಿ, ಇದೀಗ ಈ ಮಾತನ್ನು ಸಾಬೀತುಗೊಳಿಸುವ ಇನ್ನೊಂದು ರೋಚಕ ಘಟನೆಯೊಂದು ವರದಿಯಾಗಿದೆ. ಶಿವಮೊಗ್ಗದ 55 ವರ್ಷದ ಶೇಖರಪ್ಪ ಎಂಬ ವ್ಯಕ್ತಿಯ ಜೀವವನ್ನು ಅವರು ಸಾಕಿದ ನಾಯಿಯೇ (Dog Saved Life) ಕಾಪಾಡಿದೆ. ಶಿವಮೊಗ್ಗದ (Shivamogga News) ಹೊಸನಗರ ತಾಲೂಕಿನ ಸೂಡೂರು ಗ್ರಾಮದ ಶೇಖರಪ್ಪ ಎಂಬ ವ್ಯಕ್ತಿ ಸೌದೆ ತರಲು ಕಾಡಿಗೆ ಹೋಗಿದ್ದರು. ಆದರೆ ಎಷ್ಟೇ ಹೊತ್ತಾದರೂ ಮರಳಿ ಮನೆಗೆ ಬಂದಿರಲೇ ಇಲ್ಲ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತನಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿ ಅಂದರೆ ಎಲ್ಲೂ ಶೇಖರಪ್ಪನವರ ಪತ್ತೆಯೇ ಇರಲಿಲ್ಲ ಆದರೆ ಕೊನೆಗೂ ಶೇಖರಪ್ಪನವರು ಸಾಕಿದ ನಾಯಿಯೇ ಅವರ ಜೀವವನ್ನು ಕಾಪಾಡಿದೆ. 


    ಹೊಸನಗರ ತಾಲೂಕಿನ ಕಾಡಂಚಿನ ಸೂಡೂರು ಗ್ರಾಮದ ಶೇಖರಪ್ಪ ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಯಿಂದ 2 ಕಿ.ಮೀ ದೂರದ ಕಾಡಿಗೆ ಹೋಗಿ ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ವಾಪಸ್ ಬರುತ್ತಿದ್ದರು. ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶೇಖರಪ್ಪ ಪ್ರತಿದಿನ ಸೌದೆ ತಂದಿರಿಸಿ ನಂತರ ಕೆಲಸಕ್ಕೆ ತೆರಳುತ್ತಿದ್ದರು. ಆದರೆ ಉರುವಲು ತರಲು ಹೋದವರು ಅಂದು ಎಷ್ಟು ಹೊತ್ತಾದರೂ ಬರದೇ ಇದ್ದಾಗ ಮನೆಯವರು ಚಿಂತೆಗೀಡಾದರು. ಊರವರ ಸಹಾಯ ಪಡೆದು ಶೋಧ ಕಾರ್ಯಾಚರಣೆಗೆ ಇಳಿದರು.


    ಹುಡುಕಾಟ ನಡೆಸುವಾಗ ನಾಪತ್ತೆಯಾಗಿದ್ದ ಟಾಮಿ!
    ಟಾಮಿಯೂ ಊರವರ ಜೊತೆಗೂಡಿ ತನ್ನ ಪ್ರೀತಿಯ ಯಜಮಾನನನ್ನು ಹುಡುಕಲು ಮುಂದಾಯಿತು. ಹೀಗೆ ಹುಡುಕುವಾಗ ಟಾಮಿ ಎಲ್ಲೋ ನಾಪತ್ತೆಯಾಯಿತು. ಸ್ವಲ್ಪ ಹೊತ್ತಿನಲ್ಲೇ ದೂರದಲ್ಲಿ ಟಾಮಿ ಬೊಗಳುವುದು ಕೇಳಿಸಿತು. ಊರವರು ಅತ್ತ ಧಾವಿಸಿದಾಗ ಅಲ್ಲೇ ಮರವೊಂದರ ಬಳಿ ಶೇಖರಪ್ಪನವರು ಪ್ರಜ್ಞಾಹೀನರಾಗಿ ಬಿದ್ದಿದ್ದರು. ಹೀಗೆ ಟಾಮಿ ಶೇಖರಪ್ಪನವರ ಜೀವ ಉಳಿಸಿತು.


    ಇದನ್ನೂ ಓದಿ: Uttara Kannada: 22 ಸಾವಿರ ಕಿಮೀ ದೂರದಿಂದ ಉತ್ತರ ಕನ್ನಡಕ್ಕೆ ಹಾರಿಬಂದ ಅತಿಥಿಗಳು!


    ಏಳು ವರ್ಷಗಳಿಂದ ಶೇಖರಪ್ಪನವರ ಮನೆ ಸದಸ್ಯ ಈ ಟಾಮಿ
    ಶೇಖರಪ್ಪನವರ ನಾಯಿ ಟಾಮಿ. ಕಳೆದ ಏಳು ವರ್ಷಗಳಿಂದ ಶೇಖರಪ್ಪ ಮತ್ತು ಅವರ ಕುಟುಂಬದ ಮಿತ್ರನಂತೆಯೇ ಇದೆ. ಶೇಖರಪ್ಪ ಸೌದೆ ತರಲು ಹೋದ ಶೇಖರಪ್ಪ ಸೆಖೆ ಮತ್ತು ನಿಶ್ಶಕ್ತಿಯಿಂದ ಸೌದೆ ತರಲು ಹೋದಾಗ ಅಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಟಾಮಿ ಶೇಖರಪ್ಪನವರನ್ನು ಹುಡುಕುತ್ತಿದ್ದ ಊರವರನ್ನು ಆ ಸ್ಥಳಕ್ಕೆ ಕರೆದೊಯ್ದಿತು.


    ಇದನ್ನೂ ಓದಿ: Shivamogga: ಕರುನಾಡ ಆನೆಗಳ ಕಾಶಿಯಾತ್ರೆ! 12 ಚಕ್ರಗಳ ಲಾರಿಯಲ್ಲಿ 3 ಸಾವಿರ ಕಿ ಮೀ ಪಯಣ


    ಗ್ರಾಮಸ್ಥರು ಶೇಖರಪ್ಪ ಅವರನ್ನು ರಿಪ್ಪನ್‌ಪೇಟೆಯ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.


    ನಾಯಿಯನ್ನು ಬದುಕಿಸಿದ್ದೂ ಇದೇ ಶೇಖರಪ್ಪ!
    ಅಂದಹಾಗೆ ಈ ಟಾಮಿಯನ್ನು 7 ವರ್ಷಗಳ ಹಿಂದೆ ಯಾರೋ ಬೀದಿಯಲ್ಲಿ ಬಿಟ್ಟುಹೋಗಿದ್ದರಂತೆ. ಶೇಖರಪ್ಪ ತಮ್ಮ ಮನೆಗೆ ತಂದು ಟಾಮಿ ಎಂದು ಹೆಸರಿಟ್ಟು ಮುದ್ದಾಗಿ ಸಾಕಿದ್ದರು. ಇಂದು ಅದೇ ಟಾಮಿ ತನ್ನನ್ನು ಸಾಕಿದ ವ್ಯಕ್ತಿಯ ಜೀವ ಕಾಪಾಡಿದೆ. ತಮ್ಮ ಜೀವ ಉಳಿಸಿದ ಟಾಮಿಯನ್ನು ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳುವೆ ಎಂದು ಶೇಖರಪ್ಪ ಟಾಮಿಯನ್ನು ಮುದ್ದಾಡಿದರು.

    Published by:ಗುರುಗಣೇಶ ಡಬ್ಗುಳಿ
    First published: