Shivamogga Murder Case: ಹರ್ಷ ಕೊಲೆ: 10 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳು ಹರ್ಷನ ಕೊಲೆಗೆ ಸಂಬಂಧಿಸಿದ ವಿಷಯಗಳನ್ನು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಹರ್ಷನ ಕೊಲೆ ಬಳಿಕ ಶಿವಮೊಗ್ಗದಲ್ಲಿ ಕಲ್ಲು ತೂರಾಟ ಸಹ ನಡೆದಿತ್ತು. ಬಂಧಿತ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿರ್ಬಂಧ (UPA) ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹರ್ಷ

ಹರ್ಷ

  • Share this:
ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೆ (Harsha Murder Case) ಸಂಬಂಧಿಸಿದ 10 ಆರೋಪಿಗಳನ್ನು (Accused) ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಂಗ ಬಂಧನ (Judicial Custody) ನೀಡಿದೆ. ಹರ್ಷನ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಫೆ 25 ರಿಂದ 11 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಸೋಮವಾರ ಪೊಲೀಸ್ ಕಸ್ಟಡಿ (Police Custody) ಅಂತ್ಯವಾದ ಹಿನ್ನೆಲೆ ಎಲ್ಲ ಆರೋಪಿಗಳನ್ನು ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆ ಎಲ್ಲ ಆರೋಪಿಗಳನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ (Shivamogga Central Prison) ಶಿಫ್ಟ್ ಮಾಡಲಾಗಿದೆ.

ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳು ಹರ್ಷನ ಕೊಲೆಗೆ ಸಂಬಂಧಿಸಿದ ವಿಷಯಗಳನ್ನು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಹರ್ಷನ ಕೊಲೆ ಬಳಿಕ ಶಿವಮೊಗ್ಗದಲ್ಲಿ ಕಲ್ಲು ತೂರಾಟ ಸಹ ನಡೆದಿತ್ತು. ಬಂಧಿತ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿರ್ಬಂಧ (UPA) ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಫೆಬ್ರವರಿ 20ರಂದು ಕೊಲೆ

ಫೆಬ್ರವರಿ 20ರ ರಾತ್ರಿ ಶಿವಮೊಗ್ಗದ ಭಾರತಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬಜರಂಗದಳದ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಮೃತ ಹರ್ಷ ರಾತ್ರಿ 9 ಗಂಟೆಯ ಸುಮಾರಿಗೆ ಕಾಮತ್ ಪೆಟ್ರೋಲ್ ಬಂಕ್ ಬಳಿ ಬಂದಿದ್ದ. ಈ ವೇಳೆ  ಹರ್ಷನನ್ನು ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಇರಿದು ಪರಾರಿಯಾಗಿದ್ದರು.

ಇದನ್ನೂ ಓದಿ: Shivamogga Violence: ಶಿವಮೊಗ್ಗ ಕೊಲೆ ಪ್ರಕರಣ- ನಾನು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದ ಡಿಕೆ ಶಿವಕುಮಾರ್

ಆಸ್ಪತ್ರೆಗೆ ದಾಖಲಿಸಿದರೂ ಉಳಿಯಲಿಲ್ಲ ಪ್ರಾಣ

ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಗಾಯಗೊಂಡು ಹರ್ಷ ನರಳುತ್ತಾ ಬಿದ್ದಿರುವ ವಿಚಾರ ಸ್ನೇಹಿತರು ಹಾಗೂ ಮನೆಯವರಿಗೆ ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಅವರೆಲ್ಲ, ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಅದನ್ನು ವೈದ್ಯರು ದೃಢಪಡಿಸಿದ್ದರು.

ಕಾರ್ಯಕರ್ತ ಹರ್ಷ ಅಂತಿಮ ಮೆರವಣಿಗೆ (Procession) ವೇಳೆಯೂ ಕಿರಿಕ್ ನಡೆದಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ, ಕೆಲ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕದಳ (Fire Force) ಸ್ಥಳಕ್ಕಾಗಮಿಸಿದೆ. 10ಕ್ಕೂ ಹೆಚ್ಚು ವಾಹನಗಳು ಹಾನಿಗೊಂಡಿದ್ದು ಹಣ್ಣಿನ ಅಂಗಡಿ ಸೇರಿದಂತೆ ಹಲವು ಅಂಗಡಿಗಳು ಧ್ವಂಸವಾಗಿದೆ. ಶಿವಮೊಗ್ಗ ಓ ಟಿ ರಸ್ತೆಯಲ್ಲಿ ಘಟನೆ ನಡೆದಿದೆ.

ಹಿಂದೂ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಹರ್ಷ

ಮೃತ ಹರ್ಷ ಬಜರಂಗದಳದ ಸದಸ್ಯನಾಗಿದ್ದು, ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಹೋರಾಟಗಳು, ಪ್ರತಿಭಟನೆ ಇತ್ಯಾದಿಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಈತನ ವಿರುದ್ಧವೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಈಚೆಗೆ ಬೇರೆ ಕೋಮಿನ ಯುವಕದಿಂದ ಬೆದರಿಕೆಯೂ ಬಂದಿತ್ತು ಅಂತ ಪತ್ರಿಕೆಗಳು ವರದಿ ಮಾಡಿವೆ.

ಹರ್ಷನ ಕುಟುಂಬಕ್ಕೆ ಪರಿಹಾರ

ಹರ್ಷನ ಕುಟುಂಬಕ್ಕೆ ರಾಜಕೀಯ ನಾಯಕರು ವೈಯಕ್ತಿಕವಾಗಿ ಪರಿಹಾರ ನೀಡಿದ್ದಾರೆ. ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಸೇರಿದಂತೆ ಹಲವರು ಪರಿಹಾರ ನೀಡಿದ್ದಾರೆ. ಸರ್ಕಾರದಿಂದ  25 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನ್ಯಾಯಕ್ಕಾಗಿ ಬೇಡಿಕೆ ಇಟ್ಟ ರಮ್ಯಾ, ಕಂಗನಾ !

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ಹರ್ಷ ಅವರ ತಾಯಿ ಪದ್ಮ ಮಗನನ್ನು ನೆನದು ದುಃಖಿಸುತ್ತಿರುವ ದೃಶ್ಯವನ್ನು ಹಂಚಿಕೊಂಡಿರುವ ಅವರು, ‘ಕರುಳು ಹಿಂಡುವ ದೃಶ್ಯವಿದು’ ಎಂದು ಬರೆದು ದುಃಖ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಮುಸಲ್ಮಾನ ಗೂಂಡಾಗಳಿಂದಲೇ ಕಾರ್ಯಕರ್ತನ ಕೊಲೆ, ಡಿಕೆಶಿ ಹೇಳಿಕೆಯೇ ಇವರಿಗೆ ಕುಮ್ಮಕ್ಕು: Minister KS Eshwarappa

ಸ್ಯಾಂಡಲ್​ವುಡ್ ನಟಿ ರಮ್ಯಾ (Ramya) ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹರ್ಷ ಹತ್ಯೆಯ ಕುರಿತು ಸಂತಾಪ ಸೂಚಿಸಿದ್ದಾರೆ. ‘‘ಒಡೆದು ಆಳುವ ರಾಜಕೀಯಕ್ಕೆ ಇನ್ನೆಷ್ಟು ಜನರನ್ನು ನಾವು ಕಳೆದುಕೊಳ್ಳಬೇಕು?’’ ಎಂದು ಪ್ರಶ್ನಿಸಿರುವ ರಮ್ಯಾ, ‘‘ಶಾಂತಿ, ಏಕತೆ ಹಾಗೂ ಸಾಮರಸ್ಯ ಮಾತ್ರ ಮುಂದಿನ ಆಯ್ಕೆ’’ ಎಂದು ಅವರು ಹೇಳಿದ್ದಾರೆ.
Published by:Mahmadrafik K
First published: