• Home
  • »
  • News
  • »
  • state
  • »
  • Shivamogga Murder Case: ಮುಸ್ಲಿಂ ಕುಟುಂಬವನ್ನು ಉದ್ರಿಕ್ತರ ಗುಂಪಿನಿಂದ ರಕ್ಷಿಸಿದ ಮೆಗ್ಗಾನ್‌ ಆಸ್ಪತ್ರೆಯ ವೈದ್ಯರು!

Shivamogga Murder Case: ಮುಸ್ಲಿಂ ಕುಟುಂಬವನ್ನು ಉದ್ರಿಕ್ತರ ಗುಂಪಿನಿಂದ ರಕ್ಷಿಸಿದ ಮೆಗ್ಗಾನ್‌ ಆಸ್ಪತ್ರೆಯ ವೈದ್ಯರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹರ್ಷ ಇರಿತದ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಆ ವೇಳೆ “ಹರ್ಷನನ್ನು ಹಿಂಬಾಲಿಸಿ ಆಸ್ಪತ್ರೆಗೆ ಬಂದ ಗುಂಪು ಆಕ್ರೋಶದಿಂದಿತ್ತು. ಈ ಹಿನ್ನೆಲೆ ಆ ಮುಸ್ಲಿಂ ಕುಟುಂಬಕ್ಕೆ ಬೆದರಿಕೆಯೊಡ್ಡಿರುವುದು ಸ್ಪಷ್ಟವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • Share this:

Shivamogga Murder Case: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಜಿಲ್ಲೆಯಲ್ಲಿ ನಾನಾ ಗಲಾಟೆ, ಗದ್ದಲಗಳು ಸೃಷ್ಟಿಯಾದವು. ಉದ್ರಿಕ್ತರು ಕಲ್ಲು ತೂರಾಟವನ್ನೂ ನಡೆಸಿದರು. ಈ ಹಿನ್ನೆಲೆ ನಗರದಲ್ಲಿ ಕರ್ಫ್ಯೂ (Curfew) ಜಾರಿಯಾಗಿರುವುದು ನಿಮಗೆಲ್ಲ ಗೊತ್ತೇ ಇದೆ ಬಿಡಿ. ಆದರೆ, ಉದ್ರಿಕ್ತರ ಗುಂಪು ಆಸ್ಪತ್ರೆ(Hospital)ಯೊಂದಕ್ಕೂ ನುಗ್ಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ. ಅಲ್ಲದೆ, ಆಸ್ಪತ್ರೆಯ ವೈದ್ಯರೇ ಕುಟುಂಬವೊಂದನ್ನು ರಕ್ಷಿಸಿತ್ತು ಎಂಬ ವಿಚಾರವೂ ಗಮನಕ್ಕೆ ಬಂದಿದೆ. ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು (Hospital Staff) ಹೇಳಿರುವುದೇನು ಗೊತ್ತಾ..? ಕೋಪೋದ್ರಿಕ್ತ ಗುಂಪು, ಕೆಲವು ಕತ್ತಿಗಳನ್ನು ಹಿಡಿದು, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯ (McGann Hospital) ಅಪಘಾತ ವಿಭಾಗಕ್ಕೆ ನುಗ್ಗಿದಾಗ, ಮೂವರು ಮುಸ್ಲಿಮರ ಕುಟುಂಬವನ್ನು (Muslim Family) ಕೋಣೆಯೊಂದಕ್ಕೆ ಒಳ ನುಗ್ಗುವಂತೆ ಮಾಡಲಾಯಿತು ಎಂದು ತಿಳಿದು ಬಂದಿದೆ. ಆಸ್ಪತ್ರೆಯ ಸಿಬ್ಬಂದಿಯ ಈ ಸಮಯೋಚಿತ ಕ್ರಮವು ಉದ್ರಿಕ್ತರ ಗುಂಪಿನಿಂದ ಅವರ ಜೀವವನ್ನು ಉಳಿಸಿದೆ.


ಭಜರಂಗದಳದ ಕಾರ್ಯಕರ್ತ ಹರ್ಷ ಎಂಬಾತನ ಹತ್ಯೆಯ ನಂತರ ಶಿವಮೊಗ್ಗದಲ್ಲಿ ಕೋಮುಗಲಭೆಗೆ ಕಾರಣವಾದ ನಂತರ ಭಾನುವಾರ ಸಂಜೆ ಈ ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ.


ಮುಸ್ಲಿಂ ಕುಟುಂಬವು ಸುಮಾರು ಐದು ಗಂಟೆಗಳ ಕಾಲ ಕೋಣೆಯಲ್ಲಿ ಅಡಗಿಕೊಂಡಿತ್ತು. ಅವರ ಸುರಕ್ಷತೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಸಹ ಭಯಪಟ್ಟಿದ್ದರು ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ವೈದ್ಯರಿಗೂ ಬೆದರಿಕೆ ಹಾಕಲಾಗಿತ್ತು


ಹರ್ಷ ಅವರನ್ನು ಬದುಕಿಸುವಂತೆ ಒತ್ತಾಯಿಸಿ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಕತ್ತಿ ಝಳಪಿಸಿದ್ದರು. ಈ ಹಿನ್ನೆಲೆ ವೈದ್ಯಕೀಯ ವೃತ್ತಿಪರರ ನೈತಿಕ ಸ್ಥೈರ್ಯಕ್ಕೂ ಧಕ್ಕೆಯಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಮಧ್ಯೆ, ಹರ್ಷನನ್ನು ಬದುಕಿಸುವಂತೆ ಒತ್ತಾಯಿಸಿ ವೈದ್ಯರಿಗೆ ಬೆದರಿಕೆ ಹಾಕಿದ ವ್ಯಕ್ತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ:  Hijab Row: ಸಿಖ್ ವಿದ್ಯಾರ್ಥಿನಿಗೆ ಧರಿಸಿದ ಟರ್ಬನ್ ತೆಗೆಯುವಂತೆ ಹೇಳಿದ ಬೆಂಗಳೂರಿನ ಕಾಲೇಜು


ಭಾನುವಾರ ರಾತ್ರಿ, ಮುಸ್ಲಿಂ ಕುಟುಂಬ - ತಂದೆ, ತಾಯಿ ಮತ್ತು ಅವರ ಮಗು - ಮೆಗ್ಗಾನ್‌ ಆಸ್ಪತ್ರೆಯ ಅಪಘಾತ ವಿಭಾಗದಲ್ಲಿದ್ದರು. ನಂತರ ಅಲ್ಲಿಗೆ ಹರ್ಷ ಅವರನ್ನು ಆಸ್ಪತ್ರೆಗೆ ಕರೆತಂದಾಗ ಆಕ್ರೋಶಗೊಂಡ ಗುಂಪು ಸಹ ಅವರನ್ನು ಹಿಂಬಾಲಿಸಿತು.


ಈ ಹಿನ್ನೆಲೆ ಆ ಕುಟುಂಬಕ್ಕೆ ತೊಂದರೆಯನ್ನು ಗ್ರಹಿಸಿದ ಡ್ಯೂಟಿ ವೈದ್ಯರು ಮತ್ತು ಇತರ ಸಿಬ್ಬಂದಿ ಮೂವರನ್ನು ಅಪಘಾತ ವಿಭಾಗದ ಎದುರಿನ ಕೋಣೆಗೆ ಕಳಿಸಿ ಬಾಗಿಲು ಮುಚ್ಚಿದರು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಡೆಕ್ಕನ್‌ ಹೆರಾಲ್ಡ್‌ ಗೆ ತಿಳಿಸಿದರು ಎಂದು ವರದಿಯಾಗಿದೆ.


ಹರ್ಷ ಇರಿತದ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಆ ವೇಳೆ “ಹರ್ಷನನ್ನು ಹಿಂಬಾಲಿಸಿ ಆಸ್ಪತ್ರೆಗೆ ಬಂದ ಗುಂಪು ಆಕ್ರೋಶದಿಂದಿತ್ತು. ಈ ಹಿನ್ನೆಲೆ ಆ ಮುಸ್ಲಿಂ ಕುಟುಂಬಕ್ಕೆ ಬೆದರಿಕೆಯೊಡ್ಡಿರುವುದು ಸ್ಪಷ್ಟವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಶವಾಗಾರದ ಕಿಟಕಿ ಬಾಗಿಲು ಧ್ವಂಸಗೊಳಿಸಿದ ಗುಂಪು


ಹೀಗಾಗಿ ಭಾನುವಾರ ರಾತ್ರಿ 9.30ರಿಂದ ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಆ ಕುಟುಂಬದವರು ಕೊಠಡಿಯಲ್ಲೇ ತಲೆಮರೆಸಿಕೊಂಡಿದ್ದರು. “ದೇಹವನ್ನು ಶವಾಗಾರಕ್ಕೆ ಕೊಂಡೊಯ್ದ ನಂತರ ಗುಂಪು ಚದುರಿತು. ನಂತರವೇ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಮೂವರನ್ನು ಮನೆಗೆ ಕರೆದೊಯ್ಯಲಾಯಿತು,” ಎಂದು ವೈದ್ಯರು ಹೇಳಿದರು. ಇನ್ನು, ಶವಾಗಾರದ ಬಾಗಿಲು ಮತ್ತು ಕಿಟಕಿಗಳನ್ನು ಧ್ವಂಸಗೊಳಿಸಿದ ಗುಂಪನ್ನು ನಿಯಂತ್ರಿಸಲು ಪೊಲೀಸರು ಸಹ ಹೆಣಗಾಡಿದರು ಎಂದೂ ತಿಳಿದುಬಂದಿದೆ.




“ಹರ್ಷ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದರು ಮತ್ತು ವಿಭಾಗದ ವೈದ್ಯರು ಅವನನ್ನು ಬದುಕಿಸಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದರು. ವೈದ್ಯರ ಮಧ್ಯಸ್ಥಿಕೆಯು ಅಲ್ಪ ಸಹಾಯ ನೀಡುತ್ತಿರುವುದನ್ನು ಗಮನಿಸಿದ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ವೈದ್ಯರ ಮೇಲೆ ಕತ್ತಿ ಮಸೆದರು” ಎಂದು ವೈದ್ಯರು ಹೇಳಿದರು.


ಕತ್ತಿ ಝಳಪಿಸಿದ ವ್ಯಕ್ತಿಯ ಗುರುತು ಪತ್ತೆ


ಈ ಸಂಬಂಧ ಡೆಕ್ಕನ್‌ ಹೆರಾಲ್ಡ್‌ ಜತೆ ಮಾತನಾಡಿದ ಮೆಗ್ಗಾನ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್‌. ಶ್ರೀಧರ್‌, ಗಲಭೆಯ ಸಮಯದಲ್ಲಿ ಕಾನೂನು ಜಾರಿ ಸಿಬ್ಬಂದಿ ಸ್ಥಳದಲ್ಲಿದ್ದ ಕಾರಣ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಕಾಯುತ್ತಿದ್ದೇವೆ ಎಂದು ಹೇಳಿದರು. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಯಿಂದ ಕತ್ತಿಯನ್ನು ಝಳಪಿಸಿದ ವ್ಯಕ್ತಿಯನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ:  Hindu-Muslim: "ದೇವನೊಬ್ಬ ನಾಮಹಲವು" ಎಂದ ಮುಸ್ಲಿಂ ಕುಟುಂಬ, ಚೆನ್ನಕೇಶವನ ಆದೇಶದಂತೆ ಗಣಪತಿಗೆ ಪೂಜೆ!


ಆಸ್ಪತ್ರೆಯ ಎಲ್ಲಾ ಹಿರಿಯ ವೈದ್ಯರು ಪರಿಸ್ಥಿತಿಯನ್ನು ನಿಯಂತ್ರಿಸಲು ಇಲ್ಲಿಗೆ ಧಾವಿಸಿದ್ದಾರೆ ಇದು ತುಂಬಾ ಉದ್ವಿಗ್ನ ಪರಿಸ್ಥಿತಿಯಾಗಿತ್ತು ಎಂದೂ ಶ್ರೀಧರ್ ಹೇಳಿದರು.

Published by:Mahmadrafik K
First published: