Shivamogga: ಅಡಿಕೆಗೆ ಈ ಬೆಳೆ ಪರ್ಯಾಯವಂತೆ! ಖರ್ಚು ಕಡಿಮೆ, ಬೆಲೆ ಹೆಚ್ಚು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

17 ವರ್ಷದಿಂದ ಈ ಬೆಳೆಯನ್ನು ಶಿವಮೊಗ್ಗದ ಪ್ರಗತಿಪರ ರೈತ ಕೃಷ್ಣ ಅವರು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಅತಿ ಕಡಿಮೆ ನೀರನ್ನು ಬಯಸುವ ಈ ಬೆಳೆ ರೈತನ ಕೈ ಸೇರುವುದಕ್ಕೆ ಅಡಿಕೆಯಷ್ಟೇ ಸಮಯ ತೆಗೆದುಕೊಳ್ಳುತ್ತದೆ.

  • Share this:

    ಶಿವಮೊಗ್ಗ: ಮಲೆನಾಡಿಗರ ಬಹುಮುಖ್ಯ ವಾಣಿಜ್ಯ ಬೆಳೆ ಅಡಿಕೆ. ಈ ಬೆಳೆಗೀಗ ಕಂಟಕ ಬಂದಿರುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಹಲವಾರು ರೋಗಗಳು, ಬೆಲೆಕುಸಿತ, ಅಧಿಕ ತೋಟ (Arecanut  Farm) ಮಾಡುತ್ತಿರುವುದು ಹೀಗೆ ಹತ್ತು ಹಲವಾರು ತೊಂದರೆಗಳಿಗೆ ಈ ಅಡಿಕೆ ಬೆಳೆ (Arecanut) ಸಿಲುಕಿಕೊಂಡಿದೆ. ಆದರೆ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇಷ್ಟು ದಿನ ಅಡಿಕೆಯೊಂದನ್ನೇ ನೆಚ್ಚಿಕೊಂಡಿದ್ದ ರೈತರಿಗೆ (Arecanut Farmers) ಹೊಸ ಆದಾಯ ಮಾರ್ಗ ಹುಟ್ಟಿಕೊಂಡಿದೆ.


    ಮುಂದಿನ 5-10 ವರ್ಷದಲ್ಲಿ ಅಡಿಕೆ ಬೆಳೆಗಾರರು ಬೀದಿಗೆ ಬರುವ ಸಂಭವವಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪರಿಹಾರ ಸಿಗುವಂತ ಹೊಸ ಬೆಳೆಯೊಂದು ಶಿವಮೊಗ್ಗದಲ್ಲಿ ಪರಿಚಯವಾಗುತ್ತಿದೆ. ಅದುವೇ ಆಸ್ಟ್ರೇಲಿಯನ್ ಬೆಳೆಯಾದ ಮೆಕಡೇಮಿಯಾ.


    ಅತಿ ಕಡಿಮೆ ನೀರಲ್ಲಿ ಬೆಳೆಯಬಹುದು!
    17 ವರ್ಷದಿಂದ ಈ ಬೆಳೆಯನ್ನು ಶಿವಮೊಗ್ಗದ ಪ್ರಗತಿಪರ ರೈತ ಕೃಷ್ಣ ಅವರು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಅತಿ ಕಡಿಮೆ ನೀರನ್ನು ಬಯಸುವ ಈ ಬೆಳೆ ರೈತನ ಕೈ ಸೇರುವುದಕ್ಕೆ ಅಡಿಕೆಯಷ್ಟೇ ಸಮಯ ತೆಗೆದುಕೊಳ್ಳುತ್ತದೆ. ಆದರೆ ಈ ಬೆಳೆಗೆ ಅಡಿಕೆಗಿಂತ ಬೆಲೆ ಹಾಗೂ ಬೇಡಿಕೆ ಇದೆ. ಒಣ ಜಾಗದಲ್ಲಿ ಅತಿಹೆಚ್ಚು ಇಳುವರಿ ನೀಡುವ ಈ ಮೆಕಡೇಮಿಯಾ ಬೆಳೆ ಆರೋಗ್ಯಕ್ಕೂ ಉತ್ತಮವಾದ ಆಹಾರ ಕೂಡ ಹೌದು.




    ಇದನ್ನೂ ಓದಿ: Shivamogga News: ಮನೆಗೆ ಬಂದ ಮಹಾಲಕ್ಷ್ಮಿಗೆ ಹುಟ್ಟು ಕಿವುಡು! ಮೆಗ್ಗಾನ್ ವೈದ್ಯರಿಂದ ಮಗುವಿಗೆ ಹೊಸ ಜೀವನ


    ಖರ್ಚು ಸಹ ಕಡಿಮೆ!
    ಈ ಬೆಳೆಯನ್ನು ಬೆಳೆಯಲು ಅಡಿಕೆ ಬೆಳೆಗಿಂತ ಕಡಿಮೆ ಖರ್ಚು ತಗುಲುತ್ತದೆ. ಹಾಗೆ ಆರ್ಥಿಕ ಹೊರೆಯನ್ನು ತಪ್ಪಿಸುವುದರ ಜೊತೆಗೆ ನಿರ್ವಹಣೆ ಮಾಡಲು ಕಡಿಮೆ ಕೆಲಸಗಾರರು ಸಾಕು.


    ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!


    ಒಟ್ಟಾರೆ ಕೃಷಿ ಸಂಶೋಧಕರು ಮೆಕಡೇಮಿಯಾ ಬೆಳೆಯ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಿ ರೈತರಿಗೆ ಅನುಕೂಲವಾಗುವಂತೆ ಮಾಡಬೇಕಿದೆ ಎಂಬ ಮಾತು ಕೇಳಿಬಂದಿದೆ.


    ವರದಿ: ವಿನಯ್ ಪುರದಾಳು, ನ್ಯೂಸ್ 18 ಕನ್ನಡ, ಶಿವಮೊಗ್ಗ

    Published by:ಗುರುಗಣೇಶ ಡಬ್ಗುಳಿ
    First published: