• Home
  • »
  • News
  • »
  • state
  • »
  • NIA First Report: ಶಿವಮೊಗ್ಗ ಹರ್ಷ ಕೊಲೆಗೆ ವೈಯಕ್ತಿಕ ದ್ವೇಷ ಕಾರಣವಲ್ಲ, ಕೋಮುಗಲಭೆ ಸೃಷ್ಟಿಸೋದೆ ಆರೋಪಿಗಳ ಉದ್ದೇಶ

NIA First Report: ಶಿವಮೊಗ್ಗ ಹರ್ಷ ಕೊಲೆಗೆ ವೈಯಕ್ತಿಕ ದ್ವೇಷ ಕಾರಣವಲ್ಲ, ಕೋಮುಗಲಭೆ ಸೃಷ್ಟಿಸೋದೆ ಆರೋಪಿಗಳ ಉದ್ದೇಶ

ಹರ್ಷ ಕೊಲೆ ಕೇಸ್​ ತನಿಖೆ

ಹರ್ಷ ಕೊಲೆ ಕೇಸ್​ ತನಿಖೆ

ಸಮಾಜದಲ್ಲಿ ಭಯವನ್ನು ಉಂಟು ಮಾಡೋದಲ್ಲದೇ, ಸಮಾಜದ ಸ್ವಾಸ್ಥ್ಯ ವನ್ನು ಹಾಳು ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾರೆ

  • Share this:

ಶಿವಮೊಗ್ಗ(ಏ.2): ಬಜರಂಗದಳ ಕಾರ್ಯಕರ್ತ (Bajrang Dal Activist) ಹರ್ಷ ಕೊಲೆ ವಿಚಾರ ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು. ಹರ್ಷನ ಕೊಲೆ ಹಿಂದೆ ಹಲವು ಹಲವುಗಳಿದ್ವು, ಹರ್ಷ ಕೊಲೆ (Harsha Murder) ಎಂಬ ಯುವಕನ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳವು (NIA) ತನ್ನ ಪ್ರಾಥಮಿಕ ವರದಿಯಲ್ಲಿ ಹರ್ಷ ಕೊಲೆ ಹಿಂದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿತ್ತು. ತನ್ಮೂಲಕ ಕೋಮುಗಲಭೆ ಎಬ್ಬಿಸುವ ಉದ್ದೇಶವಿತ್ತು ಎಂಬ ಆತಂಕಕಾರಿ ಅಂಶ ಬಹಿರಂಗಪಡಿಸಿದೆ. ರಾಷ್ಟ್ರೀಯ ತನಿಖಾದಳದ ಪ್ರಾಥಮಿಕ ತನಿಖೆ (Preliminary Investigation) ಮಾಡಿ ಎಫ್ಐಆರ್ ದಾಖಲು ಮಾಡಿದೆ. ಹರ್ಷನ ಕೊಲೆ ಮಾಡುವ ಮೂಲಕ ಆರೋಪಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಉದ್ದೇಶ ಹೊಂದಿದ್ದರು ಎನ್ನುವುದನ್ನು FIR ನಲ್ಲಿ ದಾಖಲಿಸಲಾಗಿದ್ದಾರೆ.


ಶಿವಮೊಗ್ಗ ಹರ್ಷ ಪ್ರಕರಣದಲ್ಲಿ ರಿಹಾನ್ ಸೇರಿದಂತೆ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಸಮಾಜದಲ್ಲಿ ಭಯವನ್ನು ಉಂಟು ಮಾಡೋದಲ್ಲದೇ, ಸಮಾಜದ ಸ್ವಾಸ್ಥ್ಯ ವನ್ನು ಹಾಳು ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾರೆ


ಎಫ್‌ಐಆರ್‌ನಲ್ಲಿ ಏನೇನು ಉಲ್ಲೇಖವಾಗಿದೆ


ಹರ್ಷ ಕೊಲೆ ಪ್ರಕರಣದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಮಾಜಯದಲ್ಲಿ ಭಯ ಹುಟ್ಟಿಸುವ ಉದ್ದೇಶವಿತ್ತು. ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಕೋಮುಗಲಭೆ ಸೃಷ್ಟಿಸುವುದು, ಮಾರಕಾಸ್ತ್ರವನ್ನು ಝಳಪಿಸಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶವಿತ್ತು ಎಂಬ ಆಘಾತಕಾರಿ ಅಂಶಗಳು ಎನ್‌ಐಎ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿದೆ. ವೈಯಕ್ತಿಕ ದ್ವೇಷ, ಹಳೆಯ ಗಲಾಟೆ ವಿಚಾರ  ಹಿನ್ನೆಲೆ ಹರ್ಷನ ಕೊಲೆಯಾಗಿಲ್ಲ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದೇ ಕಿಡಿಗೇಡಿಗಳ ಉದ್ದೇಶವಾಗುತ್ತಂತೆ, ರಾಷ್ಟ್ರೀಯ ತನಿಖಾ ದಳದ ಎಫ್ಐಆರ್ ನಲ್ಲಿ ಈ ಮಹತ್ವದ ಅಂಶಗಳೆಲ್ಲಾ ಅಡಕವಾಗಿವೆ.


ಇದನ್ನೂ ಓದಿ:Mangaluru: ಪ್ರೇಮ ವಿವಾಹಕ್ಕೆ ವಿರೋಧಿಸಿದ್ದ ತಂದೆಯನ್ನ ಕೊಂದಿದ್ದ ಮಗನಿಗೆ ಜೀವಾವಧಿ ಶಿಕ್ಷೆ


ಶಿವಮೊಗ್ಗದಲ್ಲಿ ಕೋಮುಗಲಭೆ ಎಬ್ಬಿಸೋ ಉದ್ದೇಶ


ಹರ್ಷನ ಕೊಲೆ ಮಾಡುವ ಮೂಲಕ ಆರೋಪಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡಬೇಕು. ಸಾರ್ವಜನಿಕರಿಗೆ ಭಯವನ್ನು ಉಂಟು ಮಾಡುವ ಉದ್ದೇಶ ಹೊಂದಿದ್ದರು. ಶಿವಮೊಗ್ಗದಲ್ಲಿ ಕೋಮು ಗಲಭೆ ಎಬ್ಬಿಸಬೇಕು ಎಂಬ ಉದ್ದೇಶ ಇತ್ತಂತೆ. ಎಲ್ಲ 10 ಆರೋಪಿಗಳು ಕೂಡ ಕೋಮು ಗಲಭೆ ಎಬ್ಬಿಸುವ ಉದ್ದೇಶದಿಂದ ಈ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಾರಾಕಾಸ್ತ್ರಗಳ ಮೂಲಕ ಸಾರ್ವಜನಿಕರಿಗೆ ಭಯ ಉಂಟು ಮಾಡುವ ಕೃತ್ಯ ಮಾಡಿದ್ರಂತೆ. ಇದೆಲ್ಲಾ ರಾಷ್ಟ್ರೀಯ ತನಿಖಾ ದಳ ದಾಖಲು ಮಾಡಿರುವ ಎಫ್ ಐ ಆರ್ ನಲ್ಲಿ ಅಡಕವಾಗಿದೆ.


ಇನ್ನೂ ಘಾತಕಾರಿ ಅಂಶವೆಂದರೆ ಇಲ್ಲಿ ಯಾವುದೇ ವೈಯಕ್ತಿಕ ದ್ವೇಷ ಅನ್ನೋದನ್ನಾಗಲಿ, ಹಳೆಯ ಗಲಾಟೆ ವಿಚಾರ ಅನ್ನೋದಾಗಲಿ ಉಲ್ಲೇಖ ಮಾಡಿಲ್ಲ. ಆದರೆ ಸಮಾಜದ ಸ್ವಾಸ್ಥ್ಯ ಹಾಳು ಮಾಡಬೇಕು ಎಂಬುದು ಪಾತಕಿಗಳ ಉದ್ದೇಶವಾಗಿತ್ತು.


ಹರ್ಷ ಕೊಲೆಯ ಮುಂದಿನ ತನಿಖೆ NIA ನಡೆಸಲಿದೆ


ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣದ ತನಿಖೆ ಈಗ ಎನ್‌ಐಎ ನಡೆಸುತ್ತಿದೆ. ಹರ್ಷ ಕೊಲೆ ಪ್ರಕರಣದ ತನಿಖೆಯ ದಾಖಲೆಗಳ ಹಸ್ತಾಂತರವಾಗಿದೆ. ನ್ಯಾಯಾಲಯದ ಮೂಲಕ ಎನ್​ಐಎಗೆ ದಾಖಲೆ ಹಸ್ತಾಂತರ ಮಾಡಲಾಗಿದೆ. ಹರ್ಷ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್​ ಜೈಲಿನಲ್ಲಿದ್ದಾರೆ. ಹರ್ಷ ಕೊಲೆಯ ಮುಂದಿನ ತನಿಖೆ ಎನ್‌ಐಎ ನಡೆಸಲಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.


ಇದನ್ನೂ ಓದಿ: Bengaluru ನರ್ಸ್ ಅತ್ಯಾಚಾರ ಕೇಸ್‌ನಲ್ಲಿ ಅರೆಸ್ಟ್ ಆದವರು ನಾಲ್ವರು; ಅದರಲ್ಲಿ ಒಬ್ಬ ಪೊಲೀಸನ ಮಗ!


ಆರೋಪಿಗಳಿಗೆ ತಕ್ಕ ಶಿಕ್ಷೆಯಾಗ್ಬೇಕು


ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆ ಆರಂಭವಾಗುತ್ತಿರುವ ಬಗ್ಗೆ ಹರ್ಷ ತಂದೆ ನಾಗರಾಜ್‌ ಹಾಗೂ ಅಕ್ಕ ಅಶ್ವಿನಿ ಸಂತಸ ವ್ಯಕ್ತಪಡಿಸಿದ್ದಾರೆ. ಪೂರ್ಣ ತನಿಖೆಯಾಗಿ ನ್ಯಾಯ ಸಿಕ್ಕರೆ ಸರ್ಕಾರಕ್ಕೆ ಋಣಿ ಎಂದಿದ್ದಾರೆ.  ಈ ಬಗ್ಗೆ ಮಾತನಾಡಿದ ಅಶ್ವಿನಿ, ಶಿವಮೊಗ್ಗ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಎನ್‌ಐಎಗೆ ಪ್ರಕರಣ ವರ್ಗಾವಣೆಯಾಗಿದ್ದರಿಂದ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನ ನಾವು ತಿಳಿದುಕೊಳ್ಳಬಹುದು. ಯಾರು ನನ್ನ ತಮ್ಮನ್ನ ಹತ್ಯೆಗೆ ಕಾರಣರಾಗಿದ್ದಾರೋ ಅವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂಬುದು ನಮ್ಮ ಕಳಕಳಿ.

Published by:ಪಾವನ ಎಚ್ ಎಸ್
First published: