Shivamogga Airport: ಶಿವಮೊಗ್ಗಕ್ಕೆ ಬಂತು ಪ್ರಧಾನಿ ಮೋದಿ ಕಾರ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಶಿವಮೊಗ್ಗ ಏರ್​ಪೋರ್ಟ್​ಗೆ ಇಂಡಿಯನ್ ಏರ್ ಫೋರ್ಸ್​ನ 2ನೇ ವಿಮಾನ ಆಗಮಿಸಿದೆ. ಫೆಬ್ರವರಿ 23ರಂದು ಬೆಳಗ್ಗೆ 11.30ರ ಹೊತ್ತಿಗೆ ಬಂದಿಳಿದಿದೆ. ಈ ವಿಮಾನದಲ್ಲಿ ಏನಿತ್ತು ಅನ್ನೋದು ಇಲ್ಲಿದೆ.

  • Share this:

    ಶಿವಮೊಗ್ಗ: ಈಗ ಎಲ್ಲಿ ನೋಡಿದ್ರೂ ಶಿವಮೊಗ್ಗ ವಿಮಾನ ನಿಲ್ದಾಣದ್ದೇ (Shivamogga Airport) ಸುದ್ದಿ! ಎಲ್ಲರ ಬಾಯಲ್ಲೂ ಮಲೆನಾಡ ಮಡಿಲಲ್ಲಿರುವ ನಿರ್ಮಾಣಗೊಂಡ ಹೊಸ ವಿಮಾನ ನಿಲ್ದಾಣಕ್ಕೆ ಏನು ಹೆಸರಿಡ್ತಾರೆ? ಉದ್ಘಾಟನೆ ಯಾವಾಗ ಎಂಬ ಮಾತುಗಳೇ ಕೇಳಿಬರ್ತಿವೆ. ಇದೇ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಕಾರು ಬಂದಿಳಿದಿದೆ.


    ಶಿವಮೊಗ್ಗ ಏರ್​ಪೋರ್ಟ್​ಗೆ ಇಂಡಿಯನ್ ಏರ್ ಫೋರ್ಸ್​ನ 2ನೇ ವಿಮಾನ ಆಗಮಿಸಿದೆ. ಫೆಬ್ರವರಿ 23ರಂದು ಬೆಳಗ್ಗೆ 11.30ರ ಹೊತ್ತಿಗೆ ಬಂದಿಳಿದಿದೆ. ರಷ್ಯಾ ನಿರ್ಮಿತ ಇಲ್ಯೂಷಿನ್ 76 ಮಾದರಿಯ ಭಾರತೀಯ ವಾಯು ಸೇನೆಯಲ್ಲಿ ಕ್ಯಾರಿಯರ್ ವಿಮಾನ ಇದಾಗಿದೆ.




    ಪ್ರಧಾನಿ ಮೋದಿ ಭದ್ರತಾ ಸಿಬ್ಬಂದಿ ಆಗಮನ
    ಭಾರತೀಯ ಸೇನೆಗೆ ಅಗತ್ಯವಿರುವ ಸರಕು ಸಾಗಣೆಗೆ ಈ ವಿಮಾನ ಬಳಕೆಯಾಗುತ್ತದೆ. ಈ ಕ್ಯಾರಿಯರ್ ವಿಮಾನದಲ್ಲಿ ಪ್ರಧಾನಿ ಮೋದಿಯವರನ್ನು ಕರೆದೊಯ್ಯುವ ಕಾರು ಹಾಗೂ ಪ್ರಧಾನಿಯವರ ಭದ್ರತಾ ಸಿಬ್ಬಂದಿಗಳು ಬಂದಿಳಿದಿದ್ದಾರೆ.




    ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಹೀಗಾಗಿ ಈಗಾಗಲೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಪ್ರಯಾಣಿಸುವ ಕಾರಿನ ಆಗಮನವಾಗಿದೆ.


    ಮೊದಲ ವಿಮಾನ ಬಂದ ಕ್ಷಣ ಹೀಗಿತ್ತು!
    ಫೆಬ್ರವರಿ 21 ರಂದು ಮಧ್ಯಾಹ್ನ 2.16 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಪ್ರಥಮ ವಿಮಾನ ಬಂದಿಳಿದಿದ್ದು, ಈ ವಿಮಾನದ ಪೈಲೆಟ್​ಗೆ ಏರ್​ಪೋರ್ಟ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಅಲ್ಲದೇ, ನಿಲ್ದಾಣಕ್ಕೆ ಬಂದ ವಿಮಾನಕ್ಕೆ ಫೈರ್ ಇಂಜಿನ್ ಮೂಲಕ ನೀರು ಸಿಂಪಡಿಸಿ, ವೆಲ್ ಕಮ್ ಕೋರಿ ಟರ್ಮಿನಲ್ ಹಿಂಭಾಗದಲ್ಲಿ ಕೆಲ ಸಮಯ ನಿಲ್ಲಿಸಲಾಯಿತು.


    ಇದನ್ನೂ ಓದಿ:  Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನದಲ್ಲಿ ಇದ್ದವರು ಇವ್ರೇ!


    ಮೊದಲ ವಿಮಾನ ಹಾರಾಟ ಕಂಡು ಸಂತಸ!
    ಸುಮಾರು ಅರ್ಧ ಗಂಟೆ ಬಳಿಕ ವಾಪಸ್ ಹೊರಟ ಭಾರತೀಯ ಸೇನೆಯ ವಿಮಾನ, ಕಾಚಿನಕಟ್ಟೆ ಗ್ರಾಮದ ಸುತ್ತ ಒಂದು ಸುತ್ತು ಹಾರಾಟ ನಡೆಸಿ, ಪುನಃ ರನ್ ವೇ ಮೇಲೆ ಬಂದು ಬೆಂಗಳೂರಿಗೆ ಮರಳಿತು. ಮೊದಲ ವಿಮಾನ ಹಾರಾಟ ಕಂಡ ಸ್ಥಳೀಯರು ಮತ್ತು ಏರ್​ಪೋರ್ಟ್​ಗೆ ಭೂಮಿ ನೀಡಿದ ದಾನಿಗಳು ಸಂತಸ ವ್ಯಕ್ತಪಡಿಸಿದರು.


    ಇದನ್ನೂ ಓದಿ: Puneeth Rajkumar Statue: ಶಿವಮೊಗ್ಗದಲ್ಲಿ ಜೀವತಳೆದ 23 ಅಡಿ ಪವರ್ ಸ್ಟಾರ್! ಬಳ್ಳಾರಿಯಲ್ಲಿ ಸ್ಥಾಪನೆಯಾಗಲಿದೆ ಅಪ್ಪು ಪ್ರತಿಮೆ


    3,200 ಮೀಟರ್ ಉದ್ದದ ರನ್ ವೇ
    ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ ಅತಿ ದೊಡ್ಡ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಆಗಲಿದೆ. 3,200 ಮೀಟರ್ ಉದ್ದದ ರನ್ ವೇ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು