• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನದಲ್ಲಿ ಇದ್ದವರು ಇವ್ರೇ!

Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನದಲ್ಲಿ ಇದ್ದವರು ಇವ್ರೇ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸುಮಾರು ಅರ್ಧ ಗಂಟೆ ಬಳಿಕ ವಾಪಸ್ ಹೊರಟ ಭಾರತೀಯ ಸೇನೆಯ ವಿಮಾನ, ಕಾಚಿನಕಟ್ಟೆ ಗ್ರಾಮದ ಸುತ್ತ ಒಂದು ಸುತ್ತು ಹಾರಾಟ ನಡೆಸಿ, ಪುನಃ ರನ್ ವೇ ಮೇಲೆ ಬಂದು ಬೆಂಗಳೂರಿಗೆ ಮರಳಿತು.

  • News18 Kannada
  • 2-MIN READ
  • Last Updated :
  • Shimoga, India
  • Share this:

    ಶಿವಮೊಗ್ಗ: ಮಲೆನಾಡ ಮಡಿಲಲ್ಲಿ ಸ್ಥಾಪನೆಯಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga Airport) ಮೊದಲ ವಿಮಾನ ಬಂದಿಳಿದಿದೆ! ಹೌದು, ಭಾರತೀಯ ವಾಯು ಸೇನೆಗೆ ಸೇರಿದ ವಿಮಾನ ಶಿವಮೊಗ್ಗದ ನೂತನ ವಿಮಾನ (Shivamogga Airport First Flight) ನಿಲ್ದಾಣಕ್ಕೆ ಬಂದಿಳಿದಿದೆ. ಟ್ರಯಲ್ ಹಾರಾಟಕ್ಕಾಗಿ ಭಾರತೀಯ ವಾಯುಸೇನೆಗೆ ಸೇರಿದ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.


    ಅದ್ದೂರಿ ವೆಲ್ ಕಮ್!
    ಇಂದು (ಫೆಬ್ರವರಿ 21) ಮಧ್ಯಾಹ್ನ 2.16 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಪ್ರಥಮ ವಿಮಾನ ಬಂದಿಳಿದಿದ್ದು, ಈ ವಿಮಾನದ ಪೈಲೆಟ್​ಗೆ ಏರ್​ಪೋರ್ಟ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಅಲ್ಲದೇ, ನಿಲ್ದಾಣಕ್ಕೆ ಬಂದ ವಿಮಾನಕ್ಕೆ ಫೈರ್ ಇಂಜಿನ್ ಮೂಲಕ ನೀರು ಸಿಂಪಡಿಸಿ, ವೆಲ್ ಕಮ್ ಕೋರಿ ಟರ್ಮಿನಲ್ ಹಿಂಭಾಗದಲ್ಲಿ ಕೆಲ ಸಮಯ ನಿಲ್ಲಿಸಲಾಯಿತು.




    ಮೊದಲ ವಿಮಾನ ಹಾರಾಟ ಕಂಡು ಸಂತಸ!
    ಸುಮಾರು ಅರ್ಧ ಗಂಟೆ ಬಳಿಕ ವಾಪಸ್ ಹೊರಟ ಭಾರತೀಯ ಸೇನೆಯ ವಿಮಾನ, ಕಾಚಿನಕಟ್ಟೆ ಗ್ರಾಮದ ಸುತ್ತ ಒಂದು ಸುತ್ತು ಹಾರಾಟ ನಡೆಸಿ, ಪುನಃ ರನ್ ವೇ ಮೇಲೆ ಬಂದು ಬೆಂಗಳೂರಿಗೆ ಮರಳಿತು. ಮೊದಲ ವಿಮಾನ ಹಾರಾಟ ಕಂಡ ಸ್ಥಳೀಯರು ಮತ್ತು ಏರ್​ಪೋರ್ಟ್​ಗೆ ಭೂಮಿ ನೀಡಿದ ದಾನಿಗಳು ಸಂತಸ ವ್ಯಕ್ತಪಡಿಸಿದರು.




    3,200 ಮೀಟರ್ ಉದ್ದದ ರನ್ ವೇ
    ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ ಅತಿ ದೊಡ್ಡ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಆಗಲಿದೆ. 3,200 ಮೀಟರ್ ಉದ್ದದ ರನ್ ವೇ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.


    ಇದನ್ನೂ ಓದಿ: Karnataka Budget 2023: ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ, ಕುಮಟಾದಲ್ಲಿ ಸೂಪರ್ ಸ್ಪೆಷಾಲಿಸಿ ಹಾಸ್ಪಿಟಲ್, ಅಡಿಕೆ ಬೆಳೆಗಾರರಿಗೆ ಬಂಪರ್!




    220 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
    ಸುಮಾರು 660 ಎಕರೆ ಪ್ರದೇಶದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರೋ ಶಿವಮೊಗ್ಗ ವಿಮಾನ ನಿಲ್ದಾಣ 45 ಮೀಟರ್ ಅಗಲದ 3,200 ಮೀಟರ್ ಉದ್ದದ ರನ್ ವೇ ಹೊಂದಿದೆ.


    ಇದನ್ನೂ ಓದಿ: Puneeth Rajkumar Statue: ಶಿವಮೊಗ್ಗದಲ್ಲಿ ಜೀವತಳೆದ 23 ಅಡಿ ಪವರ್ ಸ್ಟಾರ್! ಬಳ್ಳಾರಿಯಲ್ಲಿ ಸ್ಥಾಪನೆಯಾಗಲಿದೆ ಅಪ್ಪು ಪ್ರತಿಮೆ


    ಒಟ್ಟಾರೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡ ನಂತರ ಮಲೆನಾಡಿನ ಜನರ ಸಂಚಾರಕ್ಕೆ ಆಧುನಿಕ ಸೌಕರ್ಯ ದೊರೆಯೋದು ಪಕ್ಕಾ ಆಗಿದೆ.

    Published by:ಗುರುಗಣೇಶ ಡಬ್ಗುಳಿ
    First published: