ಶಿವಮೊಗ್ಗ: ಲೋಕಾರ್ಪಣೆಗೊಂಡು ತಿಂಗಳುಗಳೇ ಕಳೆದರೂ ಸಾರ್ವಜನಿಕರ ಉಪಯೋಗಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport) ಪ್ರಯಾಣಕ್ಕೆ ದೊರೆತಿಲ್ಲ. ಬದಲಿಗೆ ಕೇವಲ ವಿವಿಐಪಿಗಳ ಬಳಕೆಗೆ ಮಾತ್ರ ಮಲೆನಾಡ ಮಡಿಲಲ್ಲಿ (Shivamogga News) ಇರುವ ವಿಮಾನ ನಿಲ್ದಾಣ ಸೀಮಿತವಾಗುತ್ತಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಐಎಟಿಎ ಕೋಡ್ ಸಿಕ್ಕಿದ್ದರು ಕೂಡ ಲೋಹದ ಹಕ್ಕಿಗಳ ಸದ್ದು ಕೇಳುತ್ತಿಲ್ಲ. ಐಎಟಿಎ ನಿಯಮದ ಪ್ರಕಾರ ಕೋಡ್ ದೊರೆತ 45 ದಿನಗಳ ಬಳಕ ವಿಮಾನ ಹಾರಾಡಬೇಕು. ನಿಯಮಗಳ ಪ್ರಕಾರ ಜುಲೈ ಹೊತ್ತಿಗೆ ವಿಮಾನ ಸೇವೆ ಜನರಿಗೆ ಪ್ರಾಪ್ತವಾಗಬೇಕು. ಆದರೆ ವಿಮಾನ ಹಾರಾಟ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Shivamogga Airport: ಶಿವಮೊಗ್ಗಕ್ಕೆ ಬಂತು ಪ್ರಧಾನಿ ಮೋದಿ ಕಾರ್!
ಮಳೆಯೇ ಸಮಸ್ಯೆ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತಾಂತ್ರಿಕವಾಗಿ ಯಾವುದೇ ಸಮಸ್ಯೆಗಳು ಇಲ್ಲ. ಜೂನ್ ಎರಡನೇ ವಾರದಿಂದ ಮಳೆ ಜೋರಾಗುವ ಸಾಧ್ಯತೆ ಇರುವುದರಿಂದ ವಿಮಾನಯಾನ ಕಂಪನಿಗಳು ಸೇವೆ ಒದಗಿಸಲು ಇನ್ನೂ ಮುಂದೆ ಬಂದಿಲ್ಲ ಎನ್ನಲಾಗಿದೆ.
ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಕಡಿಮೆ ವೆಚ್ಚ ಅಂದರೆ, 449 ಕೋಟಿ ರೂ. ನಲ್ಲಿ ಕಾಮಗಾರಿ ಮುಗಿದಿರುವ ಏಕೈಕ ವಿಮಾನ ನಿಲ್ದಾಣವೆಂದೇ ಶಿವಮೊಗ್ಗ ವಿಮಾನ ನಿಲ್ದಾಣ ಪ್ರಖ್ಯಾತಿ ಪಡೆದುಕೊಂಡಿದೆ.
ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನದಲ್ಲಿ ಇದ್ದವರು ಇವ್ರೇ!
ಶಿವಮೊಗ್ಗದ 775 ಎಕರೆ ಪ್ರದೇಶದಲ್ಲ ನಿರ್ಮಾಣಗೊಂಡದೆ ಸುಂದರ ವಿಮಾನ ನಿಲ್ದಾಣ. ರಾಜ್ಯದಲ್ಲಿಯೇ ಬೆಂಗಳೂರು ಹೊರತುಪಡಿಸಿದರೆ, ಅತ್ಯಂತ ಉದ್ದದ ರನ್ ವೇ ಹೊಂದಿರುವ ಏಕೈಕ ವಿಮಾನ ನಿಲ್ದಾಣವೆಂದೇ ಇದು ಖ್ಯಾತಿ ಪಡೆದಿದೆ. ಫೆಬ್ರವರಿ 27 ರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಈ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ