• Home
  • »
  • News
  • »
  • state
  • »
  • Milk Price: ಹಾಲು ಮಾರಾಟಗಾರರಿಗೆ ದೀಪಾವಳಿ ಗಿಫ್ಟ್!

Milk Price: ಹಾಲು ಮಾರಾಟಗಾರರಿಗೆ ದೀಪಾವಳಿ ಗಿಫ್ಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಲು ಮಾರಾಟಗಾರರಿಗೆ ದೀಪಾವಳಿ ಗಿಫ್ಟ್ ಘೋಷಣೆ ಮಾಡಲಾಗಿದೆ. ಹೈನುಗಾರರು ನವೆಂಬರ್ 1 ನೇ ತಾರೀಖಿನಿಂದಲೇ ಈ ಘೋಷಣೆಯ ಲಾಭ ಪಡೆದುಕೊಳ್ಳಬಹುದಾಗಿದೆ.

  • News18 Kannada
  • Last Updated :
  • Shimoga, India
  • Share this:

    ಶಿವಮೊಗ್ಗ: ಹೈನೋದ್ಯಮಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕದ ಪ್ರಮುಖ ಹಾಲು ಒಕ್ಕೂಟಗಳಲ್ಲಿ ಒಂದಾದ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್ ಹಾಲಿಗೆ ಇನ್ಮೇಲೆ 2 ರೂ. ಹೆಚ್ಚು (Milk Price Hike) ನೀಡಲಿದೆ. ಇನ್ನೇನು ಕೆಲವೇ ದಿನಗಳಲ್ಲಿ, ಅಂದರೆ ನವೆಂಬರ್ 1 ರಿಂದ ಶಿವಮೊಗ್ಗ ಹಾಲು ಒಕ್ಕೂಟದ (Shimul) ವ್ಯಾಪ್ತಿಯ ಹೈನುಗಾರರಿಗೆ ಈ ಹೊಸ ದರ ಹೈನುಗಾರರ ಕೈಸೇರಲಿದೆ.  ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಶಿಮುಲ್ ಹಾಲು ಒಕ್ಕೂಟ ಈ ಮೂಲಕ ತನ್ನ ವ್ಯಾಪ್ತಿಯ ಹೈನುಗಾರರಿಗೆ ಬಂಪರ್ ಕೊಡುಗೆ ಘೋಷಣೆ ಮಾಡಿದೆ. ಈ ಮೂಲಕ ತನ್ನ ವ್ಯಾಪ್ತಿಯ ಹೈನುಗಾರರಿಗೆ ದೀಪಾವಳಿ ಉಡುಗೊರೆಯನ್ನೇ ನೀಡಿದೆ.


    ಹಾಗಾದರೆ ಹೈನುಗಾರರಿಗೆ ಎಷ್ಟು ಹಣ ಸಿಗಲಿದೆ?
    ಶಿಮುಲ್ ಹಾಲು ಒಕ್ಕೂಟದ ವ್ಯಾಪ್ತಿಯ ಹೈನೋದ್ಯಮಿಗಳಿಗೆ ಈವರೆಗೆ ಪ್ರತಿ ಲೀಟರ್ ಹಾಲಿಗೆ 30.06 ರೂ. ಸಿಗುತ್ತಿತ್ತು. ಇದೀಗ 2 ರೂ ಹೆಚ್ಚಳವಾಗಿರುವುದಿಂದ 32.06 ರೂ ಪ್ರತಿ ಲೀಟರ್​ನಿಂದ ಹೈನುಗಾರರ ಕೈಗೆ ದೊರೆಯಲಿದೆ. ಇದು ಇದೇ ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಶಿಮುಲ್ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.


    ಇದನ್ನೂ ಓದಿ: Bannerghatta Tiger Video: ಬನ್ನೇರುಘಟ್ಟದಲ್ಲಿ ಈ ಹುಲಿಮರಿ ಬದುಕಿದ್ದೇ ಪವಾಡ!

    ಹಾಲು ಖರೀದಿದಾರರ ಮೇಲೆ ಪರಿಣಾಮವಾಗಲಿದೆಯೇ?
    ಹೈನುಗಾರರಿಗೆ 2 ರೂ.ಜಾಸ್ತಿ ನೀಡುವುದರಿಂದ ಹಾಲು ಖರೀದಿ ಮಾಡುವವರಿಗೆ ಹೊರೆಯಾಗಲಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಬೆಲೆ ಏರಿಕೆ ಸದ್ಯ ಹಾಲು ಖರೀದಿದಾರರನ್ನು ತಲುಪಿಲ್ಲ.


    ಇದನ್ನೂ ಓದಿ: Bengaluru News: ಬೆಂಗಳೂರು ಪೊಲೀಸರ ವೆಬ್ ವಿಳಾಸ ಬದಲು


    ಖರೀದಿದಾರರಿಗೆ ಹಾಲಿನ ಬೆಲೆ ಏರಿಕೆ ಬಿಸಿಯಿಲ್ಲ
    ಹಾಲು ಖರೀದಿದಾರರು ಈವರೆಗೆ ಶಿಮುಲ್ ಉತ್ಪಾದನೆಯ ಹಾಲಿಗೆ ನೀಡುತ್ತಿದ್ದ ದರದಲ್ಲೇ ಇನ್ಮೇಲೂ ಹಾಲು ಖರೀದಿ ಮಾಡಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: