ಶಿವಮೊಗ್ಗ (ಜೂನ್ 29): ಚಲಿಸುತ್ತಿದ್ದ ರೈಲನ್ನು ಹತ್ತಲು ಹೋದ ಯುವಕನ ಕಾಲು ತುಂಡಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ತಾಳಗುಪ್ಪದಲ್ಲಿ ನಿನ್ನೆ ರಾತ್ರಿ ನಡೆದಿದೆ. ಸೋಮವಾರ ರಾತ್ರಿ ತಾಳಗುಪ್ಪ ಎಕ್ಸ್ಪ್ರೆಸ್ (Talguppa Express) ರೈಲನ್ನು ಹತ್ತಲು ಹೋದ ಯುವಕ ಪ್ಲಾಟ್ಫಾರ್ಮ್ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಇದರಿಂದ ಆತನ ಕಾಲು ರೈಲಿನ ಚಕ್ರಕ್ಕೆ ಸಿಲುಕಿ ತುಂಡಾಗಿದೆ.
ತಾಳಗುಪ್ಪ- ಬೆಂಗಳೂರು ಮಾರ್ಗದ ರೈಲನ್ನು ಹತ್ತಲು ಮುಂದಾಗಿದ್ದ 18 ವರ್ಷದ ಯುವಕ ನವೀನ್ ಕಾಲು ಮುರಿದುಕೊಂಡಿದ್ದಾನೆ. ಸಿದ್ಧಾಪುರ ತಾಲೂಕಿನ ಕವಚೂರಿನ ನವೀನ್ ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುವ ರೈಲಿಗೆ ಟಿಕೆಟ್ ಬುಕ್ ಮಾಡಿಸಿಕೊಂಡಿದ್ದ. ನಿನ್ನೆ ರಾತ್ರಿ ಸುಮಾರು 8.20ರ ವೇಳೆಗೆ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ಲಾಟ್ಫಾರ್ಮ್ನಲ್ಲಿ ಓಡುವಾಗ ಕೆಳಗೆ ಬಿದ್ದ ಆತನ ಕಾಲು ರೈಲಿನ ಚಕ್ರಕ್ಕೆ ಸಿಲುಕಿ ತುಂಡಾಗಿ ಬಿದ್ದಿದೆ. ಮಳೆ ನೀರು ಬಿದ್ದು ಪ್ಲಾಟ್ ಫಾರ್ಮ್ ಜಾರುತ್ತಿದ್ದುದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: Karnataka Weather Today: ಇಂದಿನಿಂದ 3 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಪ್ಲಾಟ್ ಫಾರ್ಮ್ ಮೇಲೆ ಓಡಿ ಬಂದು ರೈಲನ್ನು ಹತ್ತಲು ಯತ್ನಿಸಿದ ನವೀನ್ ಕಾಲು ಜಾರಿ ಬಿದ್ದಿದ್ದಾನೆ. ಆಗ ಆತನ ಕಾಲು ರೈಲಿನ ಚಕ್ರಕ್ಕೆ ಸಿಲುಕಿಕೊಂಡಿದೆ. ನವೀನ್ ಕೈಗೆ ಕೂಡ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನವೀನ್ ಒಂದು ಕಾಲನ್ನೇ ಕಳೆದುಕೊಂಡಿದ್ದಾನೆ. ಸಾಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ