• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sagara Marikamba Jatre: ಸಾಗರ ಮಾರಿಕಾಂಬಾ ಜಾತ್ರೆ ಆರಂಭ, ದೇವಿ ದರ್ಶನ ಮಾಡಿ ಪುನೀತರಾಗಿ

Sagara Marikamba Jatre: ಸಾಗರ ಮಾರಿಕಾಂಬಾ ಜಾತ್ರೆ ಆರಂಭ, ದೇವಿ ದರ್ಶನ ಮಾಡಿ ಪುನೀತರಾಗಿ

X
ಸಾಗರ ಮಾರಿಕಾಂಬೆ ದೇವಿ

"ಸಾಗರ ಮಾರಿಕಾಂಬೆ ದೇವಿ"

Shivamogga Sagara Jatre: ಮೂರು ವರ್ಷಕ್ಕೊಮ್ಮೆ ನಡೆಯುವ 9 ದಿನದ ಜಾತ್ರೆ ಅವಧಿಯಲ್ಲಿ ತಾಯಿಯು ಒಂದು ದಿನ ತವರು ಮನೆಯಲ್ಲಿ, 8 ದಿನ ಗಂಡನ ಮನೆಯಲ್ಲಿ ದರ್ಶನ ನೀಡುತ್ತಾಳೆ.

  • News18 Kannada
  • 5-MIN READ
  • Last Updated :
  • Sagar, India
  • Share this:

    ಶಿವಮೊಗ್ಗ: ಗೌರವರ್ಣದಲ್ಲಿ ಕಂಗೊಳಿಸುತ್ತಿರೋ ದೇವಿ, ಸಕಲ ಅಲಂಕಾರ ಭೂಷಿತೆಯ ಮೊಗದಲ್ಲಿ ನಂಬಿದವರನ್ನು ಕಾಯುವ ಅಭಯ ಭಾವ. ಆ ಮಹಾತಾಯಿಗೆ ಕೈಮುಗಿಯುತ್ತಾ ದರ್ಶನ ಪಡೆಯುತ್ತಿರೋ ಭಕ್ತರು. ಮೂರು ವರ್ಷಕ್ಕೊಮ್ಮೆ ನಡೆಯುವ ಶಿವಮೊಗ್ಗದ (Shivamogag News) ಸಾಗರದ ಮಾರಿಕಾಂಬಾ ದೇವಿ ಜಾತ್ರೆಯ (Sagara Marikamba Devi Jatre) ವಿಜೃಂಭಣೆಯಿದು.


    ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ದೇವಿ ಜಾತ್ರೆ ಆರಂಭವಾಗಲಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ 9 ದಿನದ ಜಾತ್ರೆ ಅವಧಿಯಲ್ಲಿ ತಾಯಿಯು ಒಂದು ದಿನ ತವರು ಮನೆಯಲ್ಲಿ, 8 ದಿನ ಗಂಡನ ಮನೆಯಲ್ಲಿ ದರ್ಶನ ನೀಡುತ್ತಾಳೆ.




    ಇದನ್ನೂ ಓದಿ: Shivamogga Airport: 660 ಎಕರೆಯ ಶಿವಮೊಗ್ಗ ಏರ್​ಪೋರ್ಟ್​ ಹೀಗಿದೆ ನೋಡಿ


    ದೇವಿಯನ್ನು ಕಣ್ತುಂಬಿಕೊಳ್ಳಲು, ಆಕೆಯ ಆಶೀರ್ವಾದ ಪಡೆಯಲು ನಿತ್ಯ ಸಾವಿರಾರು ಭಕ್ತರು ಆಗಮಿಸಿ ಕೃತಾರ್ಥರಾಗ್ತಾರೆ.




    ಇದನ್ನೂ ಓದಿ: Puneeth Rajkumar Statue: ಶಿವಮೊಗ್ಗದಲ್ಲಿ ಜೀವತಳೆದ 23 ಅಡಿ ಪವರ್ ಸ್ಟಾರ್! ಬಳ್ಳಾರಿಯಲ್ಲಿ ಸ್ಥಾಪನೆಯಾಗಲಿದೆ ಅಪ್ಪು ಪ್ರತಿಮೆ


    ಮಲೆನಾಡು ಸಾಗರದಲ್ಲಿ ನಡೆಯುವ ಈ ಜಾತ್ರೆ ಸ್ಥಳೀಯರಿಗೆ ಮನರಂಜನೆಯ ಬುತ್ತಿಯನ್ನೇ ಉಣಬಡಿಸುತ್ತೆ. ತೊಟ್ಟಿಲು, ಬ್ರೇಕ್ ಡಾನ್ಸ್ ಇನ್ನೂ ಮುಂತಾದ ಮನರಂಜನಾ ಆಟಗಳ ಜೊತೆ ವಿಧವಿಧದ ತಿನಿಸುಗಳನ್ನು ಸವಿದು ಜನತೆ ಖುಷಿಪಡ್ತಾರೆ.

    Published by:ಗುರುಗಣೇಶ ಡಬ್ಗುಳಿ
    First published: